Advertisement

ಸಿಂದಗಿಯಲ್ಲಿ ವಿಪ್ರ ಸಮಾಜದ ಸಮಾವೇಶ

02:53 PM Jan 05, 2018 | |

ಸಿಂದಗಿ: ಬ್ರಾಹ್ಮಣರು ಅನಾದಿಕಾಲದ ಹಿರಿಯರಿಂದ ಒಳ್ಳೆ ಸಂಸ್ಕಾರ ಪಡೆದುಕೊಂಡು ಬಂದಿದ್ದಾರೆ. ನಾವು ನಮ್ಮ ಒಳಿತಿಗಾಗಿ ಸಂಘಟಿತರಾಗಬೇಕು ಎಂದು ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್‌. ವೆಂಕಟನಾರಾಯಣ ಹೇಳಿದರು.

Advertisement

ಗುರುವಾರ ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಂಗ ಸಂಸ್ಥೆ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಹಮ್ಮಿಕೊಂಡ ಸಿಂದಗಿ ತಾಲೂಕು ಮಟ್ಟದ ವಿಪ್ರ ಸಮಾವೇಶ ಉದ್ಘಾಟಿಸಿ
ಅವರು ಮಾತನಾಡಿದರು.

ಬ್ರಾಹ್ಮಣರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡುವುದು ನಿಲ್ಲಿಸಬೇಕು. ವಿಪ್ರರು ಎಲ್ಲ ಸಮುದಾಯದೊಂದಿಗೆ ಹೊಂದಿಕೊಂಡು ಬಾಳುವ ಸಮಾಜವಾಗಿದೆ. ಸರಕಾರಿ ನೌಕರಿಗೆ ಅವಲಂಬಿತವಾಗದೇ ಸ್ವಾವಲಂಬಿ ಬದುಕು ಸಾಗಿಸುವ ಕೌಶಲ ಹೊಂದಬೇಕು ಎಂದರು.

ಬೆಂಗಳೂರಿನ ತೇಜಸ್ವಿಸೂರ್ಯ ಮಾತನಾಡಿ, ಒಂದು ಸಮಾಜ ಅಭಿವೃದ್ಧಿಯಾಗಬೇಕಾದರೆ ಯಾವುದೇ ಸರಕಾರದಿಂದ ಮತ್ತು ಸರಕಾರ ಮಾಡುವ ಯೋಜನೆಗಳಿಂದ ಸಾಧ್ಯವಿಲ್ಲ. ನಮ್ಮ ಬೌದ್ಧಿಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಆಗ ನಮ್ಮ ಸಮಾಜ ಬೆಳೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಅಂಬಿಕಾತನಯದತ್ತ ವೇದಿಕೆ ಅಧ್ಯಕ್ಷ ಡಾ| ಬಿ.ಆರ್‌. ನಾಡಗೌಡ, ಆರ್‌. ಲಕ್ಷ್ಮಿಕಾಂತ, ಎಂ.ಆರ್‌. ಶಿವಶಂಕರ, ಹಣಮಂತ್ರಾಯ ಕೊಟಬಾಗಿ, ಟಿ.ಎಚ್‌. ಕುಲಕರ್ಣಿ ಮಾತನಾಡಿದರು. 

Advertisement

ಗೋಷ್ಠಿಗಳಲ್ಲಿ ಗೋಪಾಲ ನಾಯಕ, ಡಾ| ಶೈಲಜಾ ಕೊಪ್ಪರ, ಸ್ವಾಮಿರಾವ್‌ ಕುಲಕರ್ಣಿ, ಪಂಡಿತಮಧ್ವಾಚಾರ್ಯ ಮೊಕಾಶಿ ಉಪನ್ಯಾಸ ನೀಡಿದರು.

ಸಾನ್ನಿಧ್ಯ ವಹಿಸಿದ ಸಿಂದಗಿ ಭೀಮಾಶಂಕರಮಠದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು, ಕೆಂಗೇರಿಯ ಶ್ರೀ ಶಿವಚಿದಂಬರೇಶ್ವರ ಮಠದ ಶ್ರೀ ದಿವಾಕರ ದೀಕ್ಷಿತ, ಯರಗಲ್‌ ಬಿ.ಕೆ. ಗ್ರಾಮದ ಶ್ರೀ ಸಿದ್ದಶಂಕರಾನಂದ ಮಠದ ಶ್ರೀ ಸಿದ್ಧರಾಜ ಸ್ವಮಿಗಳು, ಗೋಕಾಕದ ಶ್ರೀ ಶಂಕರಾನಂದ ಸ್ವಾಮಿಗಳು, ಬಮ್ಮನಹಳ್ಳಿಯ ಶ್ರೀ ಭೀಮಾಶಂಕರ ಮಠದ ಶ್ರೀ ನರಸಿಂಹ ಮಹಾರಾಜರು ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ವಿಪ್ರಸಾಧಕರಾದ ಗೋಪಾಲ ನಾಯಕ, ನಾರಾಯಣ ಕುಲಕರ್ಣಿ, ಶಾಂತಾಬಾಯಿ ಕೌತಾಳ, ಡಾ|ಜಯಶ್ರೀ ಮುಂಡೇವಾಡಿ, ಲತಾ ಜಹಾಗೀರದಾರ, ಮನೋಹರ ಜೋಶಿ, ರಂಗರಾವ ಖೇಡಗಿ, ರಘುನಾಥ ಕುಲಕರ್ಣಿ, ಗೋಪಾಲರಾವ ಕುಲಕರ್ಣಿ, ಚಿದಂಬರ ಸವಾಯಿ, ಪ್ರಕಾಶ ಅಕ್ಕಲಕೋಟ, ದತ್ತಾತ್ರಯ ಕುಲಕರ್ಣಿ, ಎಸ್‌.ಡಿ. ಜೋಶಿ, ಹಣಮಂತ ಪೋದ್ದಾರ, ಡಾ| ರಮೇಶ ಕುಲಕರ್ಣಿ, ಅಶೋಕ ಕುಲಕರ್ಣಿ, ಜಗನ್ನಾಥ ಕುಲಕರ್ಣಿ, ವಿನಯ ಕುಲಕರ್ಣಿ, ಡಾ|ಸಂದೀಪ ಪಾಟೀಲ, ದತ್ತಾತ್ರೆಯ ಜೈನಿ ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಿದರು.

ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಂಡಿತ ಕುಲಕರ್ಣಿ, ಕಾರ್ಯದರ್ಶಿ ಅವಧೂತ ಜೋಶಿ ಅವರು ವೇದಿಕೆ ಮೇಲೆ ಇದ್ದರು. ಪಿ.ಟಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಿನ ವಿಪ್ರ ಸಮಾಜದ ಮಹಿಳೆಯರು ಸೇರಿದಂತೆ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next