ಮೈಸೂರು: ದೇಶದಲ್ಲಿ ಹಿಂದೂ ವಿರೋಧಿಯಲ್ಲದ ಜಾತ್ಯ ತೀತ ತತ್ವ, ಮುಸ್ಲಿಂ ವಿರೋ ಧಿ ಯಲ್ಲದ ಹಿಂದುತ್ವ, ಸ್ವ-ಸುಧಾರಣೆಗೆ ತಯಾರಿರುವ ಇಸ್ಲಾ ಮತ್ವ, ಎಲ್ಲರಿಗೂ ಸಮಾನ ನ್ಯಾಯದ ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರೀಯತೆ ಅಗತ್ಯವಾಗಿದೆ ಎಂದು ರಾಜಕೀಯ ವಿಮ ರ್ಶಕ ಸುಧೀಂದ್ರ ಕುಲಕರ್ಣಿ ಅಭಿಪ್ರಾಯಪಟ್ಟರುಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸೆಕ್ಯುಲರಿಸಂ ಎಂದರೆ ಹಿಂದೂ ವಿರೋಧಿ ಎಂಬಂತೆ ಆಗಿದೆ.
ಹೀಗಾಗಿ, ಸೆಕ್ಯುಲರಿಸಂ ಅಂದಾಕ್ಷಣ ಇದು ಬೇಡ ಅಂತ ಅನೇಕರು ಹೇಳುತ್ತಾರೆ. ನಾನು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತ ಅಥವಾ ಪದಾಧಿಕಾರಿಯಲ್ಲ. ನಿಷ್ಪಕ್ಷಪಾತವಾಗಿ ನನ್ನ ನಿಲು ನ್ನು ವ್ಯಕ್ತಪಡಿಸಿದ್ದೇನೆ. ಬಿಜೆಪಿ ಯಲ್ಲಿ 16 ವರ್ಷಗಳ ಕಾಲ ಅಟಲ್ ಬಿಹಾರಿ ವಾಜ ಪೇಯಿ ಹಾಗೂ ಲಾಲ್ ಕೃಷ್ಣ ಆಡ್ವಾಣಿ ಅವರ ಜೊತೆಯಲ್ಲಿ ಕೆಲಸ ಮಾಡಿದ್ದೇನೆ. ಧಾರ್ಮಿಕ ಧ್ರುವೀಕರಣ ಸರಿಯಲ್ಲ. ಕರ್ನಾಟ ಕಕ್ಕೆ ಒಂದು ಪರಂಪರೆ ಇದೆ. ಬಸ ವಣ್ಣ, ವಚನ ಚಳ ವಳಿ, ದಾಸರು, ಸಂತರು, ಶಿಶುನಾಳ ಷರೀಫರು, ಕುವೆಂಪು ಪರಂಪರೆ ಇದೆ. ಇದು ಶಾಂತಿಯ ತೋಟ ವಾಗಬೇಕು ಎಂದರು.
ಆಡಳಿತಾ ರೂಢ ಬಿಜೆಪಿಯು ತನ್ನ ಆಡಳಿತದ ಸಾಧನೆಯ ಆಧಾರದ ಮೇಲೆ ಜನಾ ದೇಶ ಕೇಳ ಬೇಕೇ ವಿನಾ ಸಮಾಜದಲ್ಲಿ ಧಾರ್ಮಿಕ ಧ್ರುವೀಕರಣ ಮಾಡಿ ಅಲ್ಲ. ಟಿಪ್ಪು ಸುಲ್ತಾನ್, ಲವ್ ಜಿಹಾದ್ ಇಂತಹ ಅಸಂಬದ್ಧ ಕೋಮುವಾದಿ ವಿಷಯಗಳನ್ನೇ ಚುನಾವಣೆಯ ಮುಖ್ಯ ವಿಷಯಗಳನ್ನಾಗಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ. ಇಂದು ಹಿಂದೂ ಧರ್ಮದ ಮೂಲ ತತ್ವಗಳ ವಿರುದ್ಧವೂ ಹೌದು.
ಇದು ತಪ್ಪು ಎಂದು ನಂಬುವ ಅನೇಕರು ಆರ್ ಎಸ್ ಎಸ್ ಮತ್ತು ಬಿಜೆಪಿಯಲ್ಲಿದ್ದಾರೆ. ಅವರು ಇವುಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಸುಧೀಂದ್ರ ಕುಲಕರ್ಣಿ ಆಗ್ರಹಿಸಿದರು. ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ಪ್ರಗತಿಯಾಗಿದೆ. ಮೂಲ ಸೌಕರ್ಯ ಗಳು ಸುಧಾರಣೆಯಾಗಿವೆ. ರಸ್ತೆಗಳ ಅಭಿವೃದ್ಧಿಯಾಗಿದೆ. ಮೈಸೂರು-ಬೆಂಗಳೂರು ದಶ ಪಥ ರಸ್ತೆಯು ವಿಶ್ವ ದರ್ಜೆಯ ಮಟ್ಟದಲ್ಲಿದೆ. ಈ ದಶಪಥ ರಸ್ತೆ ನಿರ್ಮಾಣ ಒಂದು ಕ್ರಾಂತಿ ಯಾಗಿದೆ. ಆದರೆ, ಬೆಲೆ ಏರಿಕೆ ತಡೆ ಯಲು, ಉದ್ಯೋಗ ಸೃಷ್ಟಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದರು.
ರಾಜ್ಯದ ಮುಂಬರುವ ಅಸೆಂಬ್ಲಿ ಚುನಾವಣೆ ದೇಶದ ಭವಿಷ್ಯಕ್ಕಾಗಿ ಅತ್ಯಂತ ಮಹತ್ವದ ಚುನಾ ವಣೆಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ತ್ರಿಶಂಕು ವಿಧಾನ ಸಭೆ ರಚನೆ ಯಾಗ ಬಾ ರದು. ಏಕೆಂದರೆ, ನಂತರ ಶುರು ವಾ ಗು ವುದು ಹಣದ ಆಟವಾಗಿದೆ ಎಂದು ಹೇಳಿದರು. ಟಿ.ಎ ನ್. ಪ್ರ ಕಾಶ್ ಕಮ್ಮ ರಡಿ, ಶ್ರೀಕಂಠ ಮೂ ರ್ತಿ ಇತರರು ಇದ್ದರು.