ಅಚಲ ಆಸಕ್ತಿ, ಬದ್ಧತೆ, ಪರಿಶ್ರಮಗಳು ಜತೆ ಗೂಡಿದಾಗ ವಯಲಿನ್‌ನಂತಹ ಪಾಶ್ಚಾತ್ಯ ವಾದ್ಯ ವನ್ನೂ ಕರಗತ ಮಾಡಿಕೊಳ್ಳಲು ಸಾಧ್ಯ ಎಂಬುದನ್ನು ಉಡುಪಿಯ ಹದಿಹರೆಯದ ಅವಳಿಗಳಾದ
ಕು| ಅದಿತಿ ಹೆಬ್ಟಾರ್ ಮತ್ತು ಕು| ಅರುಂಧತಿ ಹೆಬ್ಟಾರ್ ಇವರು ಇತ್ತೀಚೆಗೆ ತಮ್ಮ ಪುಟ್ಟದಾದ ಆದರೆ, ಅಚ್ಚುಕಟ್ಟಾದ ವಯಲಿನ್ ವಾದನ ಕಛೇರಿಯಿಂದ ಶ್ರುತಪಡಿಸಿ ದರು. ರಾಗಧನ ಸಂಸ್ಥೆಯ ವಾರ್ಷಿಕ ಸಂಗೀತ ಉತ್ಸವ ಸಂದರ್ಭದಲ್ಲಿ ಈ ಅವಳಿಗಳ ಮೊದಲ ಕಛೇರಿ ಚೆನ್ನಾಗಿ ಪ್ರಸ್ತುತ ಗೊಂಡಿತು. ವೈವಿಧ್ಯಮಯ ರಾಗ, ತಾಳ, ವಾಗ್ಗೇಯಕಾರರ ರಚನೆಗಳ ಉತ್ತಮ ಆಯ್ಕೆ ಈ ಕಛೇರಿಯ ಪ್ರಧಾನ ಗುಣವಾಗಿತ್ತು. ಪರಸ್ಪರ ಹೊಂದಾಣಿಕೆಯಿಂದ, ಒಗ್ಗೂಡಿಕೊಂಡು ವಾದ್ಯವನ್ನು ನುಡಿಸಿದ ರೀತಿ ಸೊಗಸಾಗಿತ್ತು. ಇವರಿಬ್ಬರೂ ಈಗ ಎಸೆಸೆಲ್ಸಿ ವಿದ್ಯಾರ್ಥಿನಿಯರಾಗಿದ್ದು, ಇದರ ಜತೆಗೆ ಈ ಸಂಕೀರ್ಣ ವಾದ್ಯ ವಾದನದ ಅಭ್ಯಾಸವನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ.
ಅದಿತಿ ಮತ್ತು ಅರುಂಧತಿ, ವಿ| ರವಿಕುಮಾರ್ ಅವರಲ್ಲಿ ವಯಲಿನ್ ಬಾಲಪಾಠವನ್ನು ಅಭ್ಯಸಿಸಿ ಮುಂದೆ ಬೆಂಗಳೂರಿನ ಖ್ಯಾತ ವಯಲಿನ್ ವಿದ್ವಾಂಸ ಎಚ್. ಕೆ. ವೆಂಕಟ್ರಾಮ್ ಬಳಿ ಬಿಡುವಿ¨ªಾಗಲೆಲ್ಲ ತೆರಳಿ ಹೆಚ್ಚಿನ ಶಿಕ್ಷಣ ಪಡೆಯುತ್ತಿ¨ªಾರೆ. ಅಂದಿನ ಕಛೇರಿಯಲ್ಲಿ ಈ ವಾದ್ಯದ ವಾದನದಲ್ಲಿ ಗುರುತಿಸ ಬಹುದಾದ ಬೆರಳುಗಾರಿಕೆಯ ಗಮಕಗಳು, ಬಿರ್ಕಾಗಳು ಅಲ್ಲದೆ ತಂತ್ರಗಾರಿಕೆಯನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡು ಸರಳವಾಗಿ ತಮ್ಮ ವಾದನದಲ್ಲಿ ಕಾಣಿಸಿಕೊಟ್ಟರು. ರಾಗಲಾಪನೆಯ ಶುದ್ಧತೆ, ಕೃತಿ ನಿರ್ವಣೆಯ ವಿವಿಧ ವಿನ್ಯಾಸಗಳು, ಮನೋಧರ್ಮವನ್ನು ಇನ್ನೂ ಅನುಭವಿಸದ ಆದರೆ ಲೆಕ್ಕಾಚಾರಯುಕ್ತ ಸ್ವರ ಪ್ರಸ್ತಾರಗಳು ಬಾಲೆಯರ ಸಾಧನೆಯನ್ನು ಬಿಂಬಿಸಿದವು. ಇವರು ಆರಿಸಿದ ಕೃತಿಗಳು ಕ್ರಮವಾಗಿ ನವರಾಗಮಾಲಿಕಾ ವರ್ಣ, ವಾತಾಪಿ (ಹಂಸಧ್ವನಿ), ಮರಿವೇರೆ (ಆನಂದ ಭೈರವಿ -ಮಿಶ್ರಛಾಪು), ಚುರುಕು ಗತಿಯ ಬ್ರೋವ ಭಾರಮ (ಬಹು ದಾರಿ), ಕರುಣಿಂ ಚುಟುಕು (ಸಿಂಧು ಮಂದಾರಿ), ಆನಂದಾಮೃತ ವರ್ಷಿಣಿ (ಅಮೃತ ವರ್ಷಿಣಿ), ಆಡಿಸದಳೆಶೋದೆ (ಕಾಪಿ) ಹಾಗೂ ತಿÇÉಾನ (ಬೆಹಾಗ್) ಆಗಿದ್ದು ಚುಟುಕಾದ ರಾಗಾಲಾಪನೆ, ಕಲ್ಪನಾ ಸ್ವರ ಪ್ರಸ್ತಾರ ಹಾಗೂ ನೆರವಲ್‌ಗಳಿಂದ ಅಲಂಕರಿಸಿದರು.
ಇವರಿಗೆ ಯುವಕಲಾವಿದ ನಿಕ್ಷಿತ್ ಪುತ್ತೂರು ಒಪ್ಪವಾಗಿ ಮೃದಂಗವಾದನ ಗೈದರು. ತಮ್ಮ ಗುರುಗಳು ಮತ್ತು ಪ್ರೌಢ ರಸಿಕರ ಸಮ್ಮುಖದಲ್ಲಿ ಯಾವ ರೀತಿಯ ಅಳುಕನ್ನೂ ತೋರದೆ ಮಧುರ ವಾಗಿ ವಾದನಗೈದು ಈ ಬಾಲೆಯರು ತಮ್ಮ ಪ್ರೌಢಿಮೆಯನ್ನು ಪ್ರಕಟಿಸಿದರು. ಗುರುಗಳ ಶಿಕ್ಷಣ ಕ್ರಮ, ತಂದೆ ಶಿವಚರಣ ಹೆಬ್ಟಾರ್ ಹಾಗೂ ತಾಯಿ ಸುವರ್ಣಾ ಅವರ ಒತ್ತಾಸೆ, ಹಿರಿಯರ ಅನುಗ್ರಹಗಳೇ ಈ ಬಾಲೆಯರಿಗೆ ಸಂಪತ್ತು. ಶಾಲಾ ಶಿಕ್ಷಣದೊಂದಿಗೆ ಈ ವಾದ್ಯದ ವಾದನದ ಮಟ್ಟವನ್ನು ಪಕ್ವಗೊಳಿಸುತ್ತಾ ಕಠಿನ ಪರಿಶ್ರಮಪಟ್ಟರೆ ಉಡುಪಿಯ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಅಪರೂಪದ ಅವಳಿ ವಯಲಿನ್ ಸಾಧಕಿಯರು ಒದಗುವುದು ಖಂಡಿತ.
ವಿ| ಪ್ರತಿಭಾ ಸಾಮಗ