Advertisement

ದೌರ್ಜನ್ಯ ವೀಡಿಯೋ ಬಹಿರಂಗ : ಅಮೆರಿಕದಲ್ಲಿ ಎ.5ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ

09:02 AM Jun 11, 2020 | mahesh |

ನ್ಯೂ ಓರ್ಲಿಯನ್ಸ್‌: ಆಫ್ರಿಕನ್‌-ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ ಪೊಲೀಸ್‌ ದೌರ್ಜನ್ಯದಿಂದ ಅಸುನೀಗಿ ಉಂಟಾದ ಹಿಂಸಾತ್ಮಕ ಪ್ರತಿಭಟನೆ ಕಿಚ್ಚು ಇನ್ನೂ ಆರಿಲ್ಲ. ಅದರ ನಡುವೆಯೇ ಏ.5ರಂದು ಕಪ್ಪು ವರ್ಣೀಯ ವ್ಯಕ್ತಿ ಮೇಲೆ ನಡೆದಿತ್ತು ಎಂದು ಹೇಳಲಾಗಿರುವ ದೌರ್ಜನ್ಯದ ವೀಡಿಯೋ ಬೆಳಕಿಗೆ ಬಂದಿದೆ. ಅದರಲ್ಲಿ ಪೊಲೀಸರು ವ್ಯಕ್ತಿಗೆ ಕಿರುಕುಳ ನೀಡುವ ಅಂಶ ಚಿತ್ರಿತವಾಗಿದೆ.

Advertisement

ಉತ್ತರ ಲೂಯಿಸಿಯಾನದ ಶ್ರೆವೆಪೋರ್ಟ್‌ನ‌ಲ್ಲಿ ಈ ಘಟನೆ ನಡೆದಿದೆ. ಏ.5ರಂದು ಪ್ರತಿಭಟನೆ ವೇಳೆ ಕಪ್ಪು ವರ್ಣೀಯ ವ್ಯಕ್ತಿ ಟಾಮಿ ಡೇಲ್‌ ಮೆಕ್‌ಗ್ಲೋಥನ್‌ (44) ಎಂಬವರನ್ನು ಬಂಧಿಸುವಾಗ ಪೊಲೀಸರು ಅವರನ್ನು ಪದೇ ಪದೇ ಥಳಿಸುತ್ತಿರುವ ವಿಡಿ ಯೋವೊಂದು ಬಿಡುಗಡೆಯಾಗಿದೆ. ನಾಲ್ಕೂ ವರೆ ನಿಮಿಷಗಳ ಕಾಲ ಈ ವಿಡಿಯೋ ಇದೆ. ಅದರಲ್ಲಿ ಮೆಕ್‌ಗ್ಲೋಥನ್‌ಗೆ ಒಬ್ಬ ಪೊಲೀಸ್‌ ಅಧಿಕಾರಿ ಪದೇ ಪದೇ ಹೊಡೆಯುತ್ತಿದ್ದರೆ, ಇನ್ನೊಬ್ಬ ಪೊಲೀಸ್‌ ಅಧಿಕಾರಿ ಅವರನ್ನು ಬೆತ್ತದಿಂದ ಥಳಿಸುತ್ತಿದ್ದಾರೆ. ಅಲ್ಲದೆ, ಕೈಗೆ ಬೇಡಿ ತೊಡಿಸಿ, ಹಿಂದಿನಿಂದ ಅವರನ್ನು ತಳ್ಳಿ, ನೆಲಕ್ಕೆ ಬೀಳಿಸಲಾಗಿದೆ. ಬಳಿಕ, ಅವರನ್ನು ಪೊಲೀಸ್‌ ವಾಹನದೊಳಕ್ಕೆ ತಳ್ಳಿದಾಗ ಅವರ ತಲೆಗೆ ಪೆಟ್ಟಾಗಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫ‌ಲಕಾರಿ ಯಾಗದೆ ಅಸುನೀಗಿದ್ದ. ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್‌ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸಲಾಗಿದೆ. ಆರೋಪ ಎದುರಿಸುತ್ತಿರುವ ಪೊಲೀಸ್‌ ಸಿಬಂದಿಯ ನಡವಳಿಕೆ ಬಗ್ಗೆ ವದಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಒಪ್ಪಂದ ರದ್ದುಗೊಳಿಸಿ: ಸಿಯಾಟಲ್‌ನ ಪೊಲೀಸ್‌ ಇಲಾಖೆ, ಇತರ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕಂಪೆನಿ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸುವಂತೆ ಕೋರಿ 200ಕ್ಕೂ ಹೆಚ್ಚು ಮೈಕ್ರೋಸಾಫ್ಟ್ ಉದ್ಯೋಗಿಗಳು, ಕಂಪೆನಿಯ ಸಿಇಒ ಸತ್ಯ ನಾಡೆಲ್ಲಾ ಅವರಿಗೆ ಇ-ಮೇಲ್‌ ಮೂಲಕ ಮನವಿ ಸಲ್ಲಿಸಿದ್ದಾರೆ. ಆಫ್ರಿಕಾ ಮೂಲದ ಅಮೆರಿಕನ್‌, ಜಾರ್ಜ್‌ ಫ್ಲಾಯ್ಡ ಅವರು ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಇವರು ಈ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next