ಜೈಪುರ : ನಾಗೋರ್‌ನ ಸನ್‌ವ್ರಾದ್ ಗ್ರಾಮದಲ್ಲಿ ನಡೆದ ಗ್ಯಾಂಗ್‌ಸ್ಟರ್ ಆನಂದಪಾಲ್ ಸಿಂಗ್ ನ ಸಾವಿನ ಬಗ್ಗೆ ಸಿಬಿಐ ತನಿಖೆಯನ್ನು ಆಗ್ರಹಿಸಿ ರಾಜಪೂತ ಸಮುದಾಯದವರು ನಡೆಸಿದ ಪ್ರತಿಭಟನೆಯಲ್ಲಿ ಉಂಟಾದ ಸಂಘರ್ಷಕ್ಕೆ ಓವ್ಯ ವ್ಯಕ್ತಿ ಬಲಿಯಾಗಿ, ನಾಗೋರ್ ಎಸ್‌ಪಿ ಸಹಿತ 25 ಮಂದಿ ಗಾಯಗೊಂಡಿದ್ದಾರೆ. ಇದನ್ನು ಅನುಸರಿಸಿ ನಾಗೋರ್‌ನಲ್ಲಿ ಕರ್ಫ್ಯೂ ಹೇರಲಾಗಿದೆ.
ರಾಜಪೂತ ಸಮುದಾಯದವರು ನಡೆಸಿದ ರಾಲಿಯು ಹಿಂಸೆಗೆ ತಿರುಗಿ ಉದ್ವಿಗ್ನತೆ ತಲೆದೋರಿದ ಕಾರಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವ ಸಲುವಾಗಿ ಸನ್‌ವ್ರಾದ್ ಗ್ರಾಮದಲ್ಲಿ ನಿನ್ನೆ ರಾತ್ರಿ ಕರ್ಫ್ಯೂ ಘೋಷಿಸಲಾಯಿತು ಎಂದು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಎನ್ ಆರ್ ಕೆ ರೆಡ್ಡಿ ಹೇಳಿದರು.
ಒಬ್ಬ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾನೆ; ಆದರೆ ಪೊಲೀಸ್ ಫಯರಿಂಗ್ ನಡೆದಿಲ್ಲ ಎಂದು ರೆಡ್ಡಿ ಹೇಳಿದರು.
ಉದ್ರಿಕ್ತ ಜನರು ಪೊಲೀಸರು ಪೊಲೀಸರ ಕೈಯಿಂದ ಒಂದು ಎಕೆ-47 ರೈಫಲ್ ಮತ್ತು ಒಂದು ಸರ್ವಿಸ್ ರಿವಾಲ್ವರ್ ಕಸಿದುಕೊಂಡಿದ್ದಾರೆ ಎಂದು ರೆಡ್ಡಿ ಹೇಳಿದರು.
ಘಟನೆ ಸಂಬಂಧ 10 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ; ಪೊಲೀಸ್ ಬಂದೋಬಸ್ತನ್ನು ಬಿಗಿಗೊಳಿಸಲಾಗಿದೆ ಎಂದವರು ತಿಳಿಸಿದರು.