Advertisement

ಕಾನೂನು ಅರಿವಿನಿಂದ ದೌರ್ಜನ್ಯ ತಡೆ

05:24 PM Jul 31, 2022 | Team Udayavani |

ಭಾಲ್ಕಿ: ಪರಿಶಿಷ್ಟ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಸಂಗನ್‌ ಹೇಳಿದರು.

Advertisement

ತಳವಾಡ (ಎಂ) ಗ್ರಾಮದಲ್ಲಿ ಜಿಪಂ ಬೀದರ, ಸಮಾಜ ಕಲ್ಯಾಣ ಭಾಲ್ಕಿ ಮತ್ತು ಚೇತನ್ಯ ಶಿಕ್ಷಣ ಮತ್ತು ಸೇವಾ ಸಂಸ್ಥೆ ಭಾಲ್ಕಿ ಸಹಯೋಗದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆ ತಡೆ ಬೀದಿ ನಾಟಕ, ವಿಹಾರ, ಸಂಕಿರಣ ಮತ್ತು ಕೋಮು ಸೌಹಾರ್ದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನಿಂದಲೂ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಕಾನೂನಿನಲ್ಲಿ ತಿದ್ದುಪಡಿ ಮಹಿಳೆಯರ, ಮಕ್ಕಳ ರಕ್ಷಣೆಗೆ ಕಾನೂನು ಬಲಪಡಿಸಲಾಗಿದೆ. ಈ ಕಾನೂನುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ವಿಮಲಾಬಾಯಿ ಪಾಟೀಲ್‌ ಕಾರ್ಯಕ್ರಮ ಉದ್ಘಾಟಿಸಿದರು. ಚೇತನ್ಯ ಶಿಕ್ಷಣ ಮತ್ತು ಸೇವಾ ಸಂಸ್ಥೆ ಅಧ್ಯಕ್ಷ ಸಂಜುಕುಮಾರ ಭೋಸ್ಲೆ ಅಧ್ಯಕ್ಷತೆ ವಹಿಸಿದರು. ಈ ವೇಳೆ ಚೇತನ್ಯ ಶಿಕ್ಷಣ ಮತ್ತು ಸೇವಾ ಸಂಸ್ಥೆ ಕಾರ್ಯದರ್ಶಿ ಪುಟ್ಟರಾಜ ನೇಳಗೆ, ಶ್ರೀರಂಗ ಮರೇಪ್ಪ, ಅಮೂಲಕ ತಳವಾಡಕರ್‌, ತಾನಾಜಿ ಮಾನೆ, ಜೈಪಾಲ ಬೋರಾಳೆ, ಮಹಾಂತೇಶ ವಾಂಜರೆ, ಶ್ರೀಕಾಂತ ಪಾಟೀಲ್‌, ಅನೀಲ ಪಾಟೀಲ್‌ ಸೇರಿದಂತೆ ಇತರರಿದ್ದರು. ದೀಪಕ ಥಮಕೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next