Advertisement
ಸೋಮವಾರ ಬೆಳ ಗ್ಗೆ ಭಾರತೀಯ ದೂತಾವಾಸದ ಇಬ್ಬರು ಭದ್ರತಾ ಸಿಬಂದಿಯಯನ್ನು ಹಿಂಬಾಲಿಸಿ ಅಪಹರಿಸಿದ್ದ ಐಎಸ್‌ಐಯ ಅಧಿಕಾರಿಗಳು ಇಡೀ ದಿನ ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ. ಭಾರತೀಯ ದೂತಾವಾಸದ ಅಧಿಕಾರಿಗಳ ಕೆಲಸದ ವಿವರ ಕಲೆ ಹಾಕಲು ಪ್ರಯತ್ನಿಸಿ ರಾಡ್‌ನಿಂದ ಥಳಿಸಿದ್ದಾರೆ. ಕುಡಿಯಲು ಕೊಳಚೆ ನೀರನ್ನು ನೀಡಿದ್ದಾರೆ. ಸಿಬಂದಿಯ ದೇಹದಲ್ಲಿ ಗಾಯಗಳುಂಟಾದ ಬಳಿಕ ಮುಖ ಮರೆಸಿಕೊಳ್ಳಲು ಅಪಘಾತದ ಕಥೆ ಕಟ್ಟಿದ್ದಾರೆ ಎಂದು ಕೆಲವು ಪಾಕ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಮಾಹಿತಿ ಬಹಿರಂಗಗೊಳ್ಳುತ್ತಲೇ ಕ್ರುದ್ಧವಾಗಿರುವ ಭಾರತವು, ಈ ಘಟನೆ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಪಾಕ್ ಜತೆಗಿನ ರಾಜತಾಂತ್ರಿಕ ಸಂಬಂಧವನ್ನೇ ಕಡಿದುಕೊಳ್ಳಬೇಕಾದೀತು ಎಂದು ಎಚ್ಚರಿಸಿದೆ.