Advertisement
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿ, ಈ ಹಿಂದೆ ನಾಕಾಗಳಲ್ಲಿ ಕನ್ನಡಿಗ ಉದ್ಯೋಗಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಧರಣಿ ಮಾಡಿದರೂ ಪ್ರಯೋಜನ ಆಗಲಿಲ್ಲ.
Related Articles
Advertisement
ಶೇಕಡಾ 50ರಷ್ಟು ಕಂಪನಿಯಿಂದ ಕಡಿತ ಮಾಡಬೇಕಾಗಿದ್ದು, ಕಾರ್ಮಿಕರದ್ದೇ ಶೇಕಡಾ 100ರಷ್ಟು ಕಡಿತ ಮಾಡುವುದನ್ನು ತಡೆಯುವಂತೆ, ಸರ್ಕಾರದ ನಿಯಮಗಳ ಅನುಸಾರ ದಿನಕ್ಕೆ 8 ಗಂಟೆಗಳ ಕಾಲ ಕಾರ್ಯನಿರ್ವಹಣೆ ಅವ ಧಿ ನಿಗದಿಪಡಿಸುವಂತೆ, ಇಎಸ್‌ಐ ಸೌಲಭ್ಯವನ್ನು ಕೊಡುವಂತೆ, ಕೇಂದ್ರ ಸರ್ಕಾರದ ಆದೇಶದಂತೆ ಟೋಲ್ ನಾಕಾಗಳಲ್ಲಿ ಹಣ ಸ್ವೀಕರಿಸಲು ಸ್ವೆ„ಪ್ ಮಶಿನ್ ಕಡ್ಡಾಯವಾಗಿ ಬಳಸುವಂತೆ,
ಹಬ್ಬ ಹರಿದಿನಗಳಂದು, ಸರ್ಕಾರಿ ರಜೆಗಳಂದು ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಹೆಚ್ಚಿನ ವೇತನ ನಿಡುವಂತೆ, ಹೆಚ್ಚಿನ ಸಮಯ ನಿರ್ವಹಿಸಿದವರಿಗೆ ಓಟಿ ಕೊಡುವಂತೆ, ಟೋಲ್ ನಾಕಾದಲ್ಲಿ ಚಿಲ್ಲರೆ ಹಣಕ್ಕಾಗಿ ಬಿಸ್ಕಿಟ್ ಮತ್ತು ಚಾಕ್‌ಲೇಟ್ ನೀಡುವುದನ್ನು ತಡೆಯುವಂತೆ, ಸಿಬ್ಬಂದಿಗೆ ಗುರುತಿನ ಚೀಟಿ ಮತ್ತು ಸಮವಸ್ತ್ರಗಳನ್ನು ಕಂಪೆನಿ ಕಡ್ಡಾಯವಾಗಿ ಕೊಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಸಚಿನ್ ಎಸ್. ಫರಹತಾಬಾದ, ಕಾಶಿನಾಥ ಮಾಳಗೆ, ಲಕ್ಷಿಕಾಂತ ಉದನೂರು, ಸಂದೇಶ ಪವಾರ, ಶಿವು ಮಾಡಬೂಲ್, ಅಂಬು ಮಸ್ಕಿ, ಸತೀಶ್ ಫರತಾಬಾದ, ಮಲ್ಲಿಕಾರ್ಜುನ ಶೆಟ್ಟಿ, ರಾಜು ಹರಸೂರ, ರಾಹುಲ ಫರತಾಬಾದ, ಸುರೇಶ ಹನಗುಂಡಿ, ಎಸ್.ಎಸ್. ಅಹ್ಮದ್, ಲಕ್ಷಿಕಾಂತ ಹೋಲ್ಡ್ ಮುಂತಾದವರು ಪಾಲ್ಗೊಂಡಿದ್ದರು.