Advertisement

ಖಾಸಗಿ ಶಾಲೆ ಆಡಳಿತ ಮಂಡಳಿಗಳ ದೌರ್ಜನ್ಯ

11:32 AM Jun 03, 2022 | Team Udayavani |

ಮಂಡ್ಯ: ಖಾಸಗಿ ಶಾಲೆಗಳಲ್ಲಿ ಅಕ್ರಮವಾಗಿ ದೌರ್ಜನ್ಯ, ದಬ್ಟಾಳಿಕೆ ನಡೆಸುತ್ತಿದ್ದು, ಹೆಚ್ಚುವರಿ ಶಾಲಾ ಶುಲ್ಕ ವಸೂಲಾತಿ, ಬಟ್ಟೆ, ಪೆನ್ನು, ಟೆಕ್ಸ್ಟ್ ಬುಕ್‌, ನೋಟ್‌ಬುಕ್‌, ಸಾಕ್ಸ್‌, ಸಮವಸ್ತ್ರ ಹಾಗೂ ಬ್ಯಾಗ್‌ ಖರೀದಿಸುವಂತೆ ಪೋಷಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಪೋಷಕ ಹಾಗೂ ಸಾಮಾಜಿಕ ಹೋರಾಟಗಾರ ಪೂರ್ಣಚಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಸ್‌. ಅಶ್ವತಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಖಾಸಗಿ ಶಾಲೆಗಳಲ್ಲಿ ಸರ್ಕಾರದ ನಿಯಮ ಮತ್ತು ಷರತ್ತು ಉಲ್ಲಂಘಿಸಿ ಅಕ್ರಮವಾಗಿ ಹೆಚ್ಚುವರಿ ಶಾಲಾ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರಾಗಲೀ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ದೂರು ನೀಡಿದರೆ ಸರ್ಕಾರಿ ಶಾಲೆಗಳಿಗೆ ಸೇರಿಸಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಖಾಸಗಿ ಶಾಲೆಗಳು ಅವರ ಇಚ್ಛೆಗೆ ಬಂದಂತೆ ಶಾಲಾ ಶುಲ್ಕ ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ದೂರಿನಲ್ಲಿ ಕಿಡಿಕಾರಿದ್ದಾರೆ.

ಖಾಸಗಿ ಶಾಲೆ ಸರ್ಕಾರಿ ನಿಯಮ ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಶಾಲಾ ಶುಲ್ಕ ಬಗ್ಗೆ ಆಯಾ ಶಾಲೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂಬ ನಿಯಮವಿದೆ. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ. ಅಲ್ಲದೆ, ಸರ್ಕಾರದ ಶಿಕ್ಷಣ ಕಾಯ್ದೆ ವಿರುದ್ಧ ಪರಿಕರ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ, ಪರಿಕರಗಳ ಬೆಲೆಗಳನ್ನು ಹೆಚ್ಚುವರಿ ನಿಗದಿಪಡಿಸಿ ಪೋಷಕರಿಗೆ ಎಲ್ಲವನ್ನೂ ಶಾಲೆಯಲ್ಲಿಯೇ ಖರೀದಿಸಬೇಕು ಎಂಬ ಸೂಚನೆ ನೀಡುವ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಆದ್ದರಿಂದ ಕೂಡಲೇ ತಾವು ಗಮನ ಹರಿಸಿ ಖಾಸಗಿ ಶಾಲೆಗಳಲ್ಲಿ ಪೋಷಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪರಿಶೀಲಿಸಿ ಕ್ರಮ ವಹಿಸಬೇಕು. ಅಲ್ಲದೆ, ಇಷ್ಟೆಲ್ಲಾ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಜನಶಕ್ತಿ ಸಂಘಟನೆ ಕಾ ರ್ಯದರ್ಶಿ ಎಂ.ಸಿದ್ದರಾಜು, ಭಜರಂಗ ಸೇನೆ ಯುವ ಘಟಕದ ನಗರ ಅಧ್ಯಕ್ಷ ಆನಂದ, ಸಾಮಾಜಿಕ ಹೋರಾ ಟಗಾರ ವೆಂಕಟೇಶ, ಉಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next