Advertisement

ಕಂಬಳದಲ್ಲಿ  ಹಿಂಸೆ: ಪೆಟಾದಿಂದ ಮತ್ತೆ ಸುಪ್ರೀಂಗೆ ದಾಖಲೆ ಸಲ್ಲಿಕೆ

02:51 PM Dec 05, 2017 | Team Udayavani |

ಮಂಗಳೂರು: ಕಂಬಳಕ್ಕೆ ಸುಪ್ರೀಂ ಕೋರ್ಟ್‌ ಅನುವು ಮಾಡಿದ್ದರೂ, ಅದರಲ್ಲಿ ಪ್ರಾಣಿ ಹಿಂಸೆ ನಡೆದಿದೆ ಎಂಬ ವಿಚಾರದಲ್ಲೀಗ ಪೆಟಾ ( ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್‌) ಮತ್ತೆ ತಗಾದೆ ತೆಗೆದಿದೆ.  ಹೊಕ್ಕಾಡಿಗೋಳಿ ಹಾಗೂ ಬಂಗ್ರಕುಳೂರು ಕಂಬಳಗಳ‌ಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗಿದೆ ಎಂದು ಅದು ಆರೋಪಿಸಿದ್ದು, ಸುಪ್ರೀಂ ವಿಚಾರಣೆ ವೇಳೆ ಸೂಕ್ತ ಸಾಕ್ಷ್ಯಗಳನ್ನು ನೀಡಲಾಗುವುದು ಎಂದು ಹೇಳಿದೆ. ನ.11ರಂದು ಮೂಡಬಿದಿರೆ ಕಂಬಳ ಕುರಿತಂತೆ ಪೆಟಾ ಸುಪ್ರೀಂಗೆ ಒಂದಷ್ಟು ದಾಖಲೆಗಳನ್ನು ಸಲ್ಲಿಸಿತ್ತು. 

Advertisement

ಪೆಟಾ ಹೇಳುವಂತೆ ಇತ್ತೀಚಿನ ಕಂಬಳಗಳಲ್ಲಿ ಕೋಣಗಳನ್ನು ಜಗ್ಗಾಡಿ, ಅವು ಗಳಿಗೆ ಹಾಕಿರುವ ಮೂಗುದಾರವನ್ನು ಎಳೆದು ಹಿಂಸೆ ಮಾಡಲಾಗಿದೆ. ಓಟದ ಉದ್ದಕ್ಕೂ ಬೆತ್ತದಿಂದ ಹೊಡೆಯಲಾಗಿದೆ. ಇದು ರಾಜ್ಯ ಸರಕಾರ ಹೊರಡಿಸಿರುವ ಅಧ್ಯಾ ದೇಶವೂ ಸೇರಿದಂತೆ ಯಾವುದೇ ಕ್ರಮಗಳು ಕಂಬಳದಲ್ಲಿ ಹಿಂಸೆ ತಡೆಯಲು ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next