Advertisement

L.S. Polls: ಅಂತಿಮ ಹಂತದ ಮತದಾನದ ವೇಳೆ ಹಿಂಸಾಚಾರ: EVM, VVPAT ಕೆರೆಗೆ ಎಸೆದು ದುಷ್ಕೃತ್ಯ

11:39 AM Jun 01, 2024 | Team Udayavani |

ಪಶ್ಚಿಮ ಬಂಗಾಳ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು 8 ರಾಜ್ಯಗಳು/ಕೇಂದ್ರಾಳಿತ ಪ್ರದೇಶಗಳ 57 ಲೋಕಸಭಾ ಕ್ಷೇತ್ರದಲ್ಲಿ 904 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

Advertisement

ಬಿಹಾರ, ಚಂಡೀಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶನಿವಾರ ಮುಂಜಾನೆ ಏಳು ಗಂಟೆಯಿಂದ ಮತದಾನ ಆರಂಭಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರು, ಸಿನಿಮಾ ರಂಗದ ದಿಗ್ಗಜರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಹೆಚ್ಚಿನ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದರೆ ಪಶ್ಚಿಮ ಬಂಗಾಲ, ಕೋಲ್ಕತ್ತಾ ದಲ್ಲಿ ಹಿಂಸಾಚಾರ ಬೆಳಕಿಗೆ ಬಂದಿದೆ.

ಕೋಲ್ಕತ್ತಾ ಬಳಿಯ ಜಾದವ್‌ಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಭಾಂಗಾರ್‌ನ ಸತುಲಿಯಾ ಪ್ರದೇಶದಲ್ಲಿ ನಡೆದ ಈ ಘರ್ಷಣೆಯಲ್ಲಿ ಐಎಸ್‌ಎಫ್ ಪಕ್ಷದ ಹಲವು ಮಂದಿ ಕಾರ್ಯಕರ್ತರು ಮತ್ತು ಟಿಎಂಸಿ ಕಾರ್ಯಕರ್ತರು ಗಾಯಗೊಂಡಿರುವ ಕುರಿತು ವರದಿಯಾಗಿದೆ.

ಪಾಶ್ಸಿಮಾ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿಯಲ್ಲಿ, ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಜನಸಮೂಹ ಮತಗಟ್ಟೆಗಳಿಗೆ ಬಲವಂತವಾಗಿ ನುಗ್ಗಿ, ಎಲೆಕ್ಟ್ರಾನಿಕ್ ಮತಯಂತ್ರವನ್ನು (ಇವಿಎಂ) ವಶಪಡಿಸಿಕೊಂಡು ಹತ್ತಿರದ ಕೊಳಕ್ಕೆ ಎಸೆದಿರುವ ಘಟನೆ ನಡೆದಿದೆ. ಕೆಲವು ಮತಗಟ್ಟೆ ಏಜೆಂಟರನ್ನು ಬೂತ್‌ಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದ ಕಾರಣಕ್ಕೆ ಸಿಟ್ಟಿಗೆದ್ದ ಜನಸಮೂಹ ಬಲವಂತವಾಗಿ ಮತಗಟ್ಟೆಯೊಳಗೆ ನುಗ್ಗಿ ಅಲ್ಲಿದ್ದ ವಿವಿಪಿಎಟಿ ಹಾಗೂ ಇವಿಎಂ ಅನ್ನು ಹತ್ತಿರದ ಕೆರೆಗೆ ಎಸೆದು ಆಕ್ರೋಶ ಹೊರಹಾಕಿದ್ದಾರೆ.

ಇದಾದ ಬಳಿಕ ಚುನಾವಣಾ ಅಧಿಕಾರಿಗಳು ಬದಲಿ ಯಂತ್ರಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ: Accused: ಕೊಲೆ ಯತ್ನ ಪ್ರಕರಣದ ಆರೋಪಿ 19 ವರ್ಷಗಳ ಬಳಿಕ ಹಾಸನದಲ್ಲಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next