Advertisement

ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ

06:14 PM Nov 26, 2021 | Team Udayavani |

ಚಿಕ್ಕೋಡಿ: ಪುರುಷರಂತೆಯೇ ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕೆಂದು ಹತ್ತು ಹಲವು ಕಾನೂನುಗಳಿದ್ದರೂ ಈ ಜಗತ್ತಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. 21ನೇ ಶತಮಾನದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎನ್ನುವುದೇ ಇರಬಾರದಿತ್ತು ಎಂದು ನಣದಿಯ ಮೌಲಾ ಅಬುಲ್‌ ಕಲಾಂ ಆಜಾದ್‌ ಬಿಎಸ್‌ಡಡಬ್ಲ್ಯೂ-ಎಂಎಸ್‌ ಡಬ್ಲೂ ಮಹಾವಿದ್ಯಾಲಯದ ಪ್ರಾಚಾರ್ಯ ಅಪ್ಪಾಸಾಬ ಅಕ್ಕೋಳೆ ಕಳವಳ ವ್ಯಕ್ತಪಡಿಸಿದರು.

Advertisement

ಇಲ್ಲಿನ ಶ್ರೀಮತಿ ಎ ಎ ಪಾಟೀಲ ಮಹಿಳಾ ಮಹಾವಿದ್ಯಾಲಯ ಹಾಗೂ ಚಿಕ್ಕೋಡಿಯ ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ  ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗಲೂ ಕೂಡ ಹೆಣ್ಣು ಮಕ್ಕಳ ಮಾರಾಟ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಮೇಲೆ ಕಿರುಕುಳ ನಡೆಯುತ್ತಿದ್ದು, ಇದೆಲ್ಲವನ್ನು ನಾವು ತಡೆಯಬೇಕಿದೆ ಎಂದರು.

ಸಂಕೇಶ್ವರದ ನ್ಯಾಯವಾದಿ ಅಶ್ವಿ‌ನಿ ಬಾಳನಾಯಕ ಮಾತನಾಡಿ, ಮಹಿಳಾ ದೌರ್ಜನ್ಯ ತಡೆಯೋದಕ್ಕೆ ಹತ್ತು ಹಲವು ಕಾನೂನಾತ್ಮಕ ಪರಿಹಾರಗಳಿದ್ದು, ಅದರಲ್ಲೂ 2005ರಲ್ಲಿ ಜಾರಿಗೆ ಬಂದಿರುವ ಕೌಟುಂಬಿಕ ದೌರ್ಜನ್ಯ ವಿರೋಧಿ  ಕಾನೂನು ಇದ್ದು, ಅನ್ಯಾಯಕ್ಕೊಳಗಾದ ಮಹಿಳೆಯರು ಈ ಕಾನೂನಿನ ಮೂಲಕ ಕುಟುಂಬದಲ್ಲಿಯೋ, ಕಚೇರಿಯಲ್ಲಿಯೋ ಅಥವಾ ಇನ್ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನಡೆಯುವ ಮಾನಸಿಕ, ದೈಹಿಕ ಕಿರುಕುಳಕ್ಕೆ ನ್ಯಾಯ ಪಡೆಯಲು ಅವಕಾಶ ಇದೆ. ಇದನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪ್ರಾಚಾರ್ಯ ಡಾ| ಡಿ ಎಂ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯೆ ರಂಜನಾ ಕಾಮಗೌಡ, ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಚಿನಕೇಕರ, ಉಪನ್ಯಾಸಕಿ ಜಯಶ್ರೀ ನಾಗರಾಳೆ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಎಲ್‌.ಎಸ್‌ ಪಡತಾರೆ ಸ್ವಾಗತಿಸಿದರು. ವಿಮಲಾ ಕದಂ ನಿರೂಪಿಸಿದರು. ಸುಜಾತಾ ಮಗದುಮ್ಮ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next