Advertisement

ನಿಯಮ ಉಲ್ಲಂಘನೆ: 25 ಸಾವಿರ ರೂ. ಮೌಲ್ಯದ ದಿಚಕ್ರ ವಾಹನಕ್ಕೆ ಬಿತ್ತು 3.04 ಲಕ್ಷ ರೂ. ದಂಡ!

11:24 AM Feb 12, 2024 | Team Udayavani |

ಬೆಂಗಳೂರು: ಆ ದ್ವಿಚಕ್ರ ವಾಹನದ ಇಂದಿನ ಬೆಲೆ ಅಂದಾಜು 25-30 ಸಾವಿರ ರೂ. ಇರಬಹುದು. ಆದರೆ, ಆ ದ್ವಿಚಕ್ರ ವಾಹನದ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಯಡಿ ದಾಖಲಾಗಿರುವ ಪ್ರಕರಣಗಳ ದಂಡ ದ ಮೊತ್ತ ಬರೋಬ್ಬರಿ 3 ಲಕ್ಷ ರೂ.ಗೂ ಅಧಿಕ! ಅಚ್ಚರಿಯಾದರೂ ನಿಜ.

Advertisement

2021ರ ಜ. 2ರಿಂದ 2024 ಫೆ.5 ರವರೆಗೆ ಕೆಎ-05ಕೆಎಫ್ -7969 ನೋಂದಣಿ ಸಂಖ್ಯೆಯ ಆಕ್ಟೀವ್‌ ಹೊಂಡಾ ವಿರುದ್ಧ 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ ಆರೋಪವಿದ್ದು, ಬರೋಬ್ಬರಿ 3,04,500 ರೂ. ದಂಡ ವಿಧಿಸಲಾಗಿದೆ.

ಸಿಗ್ನಲ್‌ಗ‌ಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಗಳು ಹಾಗೂ ರಸ್ತೆ ಮಧ್ಯೆ ನಿಂತು ಸಂಚಾರ ನಿರ್ವಹಣೆ ಮಾಡುವ ಪೊಲೀಸ್‌ ಸಿಬ್ಬಂದಿ ಮೊಬೈಲ್‌ನಲ್ಲಿ ತೆಗೆದಿ ರುವ ಫೋಟೋಗಳ ಆಧರಿಸಿ ಈ ದಂಡ ವಿಧಿಸಲಾಗಿದೆ.

ಸುಧಾಮನಗರದ ನಿವಾಸಿ ವೆಂಕಟರಾಮನ್‌ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ತಮ್ಮ ಆಕ್ಟೀವ್‌ ಹೊಂಡಾ ದ್ವಿಚಕ್ರ ವಾಹನದಲ್ಲಿ ಮನೆ ಸಮೀ ಪವೇ ಹೆಲ್ಮೆಟ್‌ ಧರಿಸದೆ, ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಕೆ, ಒನ್‌ ವೇ ಸಂಚಾರ, ಸಿಗ್ನಲ್‌ ಜಂಪ್‌, ಜಿಬ್ರಾ ಕ್ರಾಸ್‌ನಲ್ಲಿ ನಿಲುಗಡೆ ಸೇರಿ ಕಳೆದ ನಾಲ್ಕು ವರ್ಷದಲ್ಲಿ 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘನೆಯ 50 ಸಾವಿರಕ್ಕೂ ಅಧಿಕ ದಂಡ ಹೊಂದಿರುವವರ ಮನೆಗಳಿಗೆ ತೆರಳಿ ದಂಡ ಪಾವತಿಸಿಕೊಳ್ಳುವ ಕಾರ್ಯವನ್ನು ನಗರ ಸಂಚಾರ ಪೊಲೀಸರು ಆರಂಭಿಸಿದ್ದಾರೆ.

ಈ ವೇಳೆ ಬಾಕಿ ಉಳಿದುಕೊಂಡಿರುವ ವಾಹನಗಳ ಸಂಖ್ಯೆಯನ್ನು ಆಧರಿಸಿ ಪರಿಶೀಲಿಸುವ ವೇಳೆ ವೆಂಕಟರಾಮನ್‌ ಅವರ ದ್ವಿಚಕ್ರ ವಾಹನ ಕೂಡ ಪತ್ತೆಯಾಗಿದೆ. ಹೀಗಾಗಿ ಅವರ ಮನೆ ವಿಳಾಸ ಪತ್ತೆ ಹಚ್ಚಿ ನೋಟಿಸ್‌ ಕೊಡಲಾಗಿತ್ತು. ಆದರೆ, ಸರಿಯಾದ ಉತ್ತರ ನೀಡಿರಲಿಲ್ಲ ಎಂದು ಸಂಚಾರ ಪೊಲೀಸರು ಹೇಳಿದರು.

Advertisement

ದ್ವಿಚಕ್ರ ವಾಹನವೇ ತೆಗೆದುಕೊಂಡು ಹೋಗಿ ಎಂದ ಮಾಲಿಕ!: ಕೆಲ ದಿನಗಳ ಹಿಂದೆ ವೆಂಕಟರಾಮನ್‌ ಮನೆಗೆ ತೆರಳಿದ ಸಂಚಾರ ಪೊಲೀಸರು, ನೋಟಿಸ್‌ ನೀಡಿ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆಗ ದಂಡ ದ ಮೊತ್ತ ಕಂಡು ಶಾಕ್‌ಗೆ ಒಳಗಾದ ವೆಂಕಟರಾಮನ್‌, “ಅಷ್ಟು ದೊಡ್ಡ ಮೊತ್ತದ ದಂಡ ಕಟ್ಟಲು ಸಾಧ್ಯವಿಲ್ಲ. ಬೇಕಾದರೆ ನನ್ನ ದ್ವಿ ಚಕ್ರ ವಾಹನವನ್ನೇ ತೆಗೆದುಕೊಂಡು ಹೋಗಿ’ ಎಂದಿದ್ದಾರೆ. ಅದಕ್ಕೆ ಸ್ಥಳದಲ್ಲೇ ಉತ್ತರಿ ಸಿದ ಸಂಚಾರ ಪೊಲೀಸರು, “ನಿಮ್ಮ ದ್ವಿಚಕ್ರ ವಾಹ ನ ಅಂದಾಜು 25-20 ಸಾವಿರ ರೂ.ಗೆ ಮಾರಾಟವಾಗಬಹುದು. ಈ ವಾಹನ ತೆಗೆದುಕೊಂಡು ಹೋಗಿ, ಏನು ಮಾಡುವುದು. ನಿಗದಿತ ಸಮಯದಲ್ಲಿ ಬಂದು ದಂಡ ಕಟ್ಟಿ’ ಎಂದು ಸೂಚಿಸಿ ತೆರಳಿದ್ದಾರೆ.

50 ಸಾವಿರ ರೂ.ಗೂ ಹೆಚ್ಚಿನ ದಂಡ ಇರುವ ವಾಹನ ಮಾಲಿಕರ ಮನೆಗೆ ತೆರಳಿ ನೋಟಿಸ್‌ ಕೊಡಲಾಗುತ್ತಿದೆ. ಅದೇ ರೀತಿ ವಾಹನಗಳ ನೊಂದಣಿ ಸಂಖ್ಯೆ ಆಧರಿಸಿ ಪರಿಶೀಲನೆ ವೇಳೆ ಈ ವಾಹನ ಮಾಲಿಕನ ವಿರುದ್ಧ 3 ಲಕ್ಷ ರೂ. ಅಧಿಕ ದಂಡ ಇರುವುದ ಗೊತ್ತಾಗಿದೆ. ಸದ್ಯ ನೋಟಿಸ್‌ ನೀಡಿದ್ದೇವೆ. ಒಂದು ವೇಳೆ ನಿಗದಿತ ಸಮಯಕ್ಕೆ ಪಾವತಿಸದಿದ್ದರೆ, ಕೋರ್ಟ್‌ ಸೂಚನೆಯಂತೆ ಮುಂದಿನ ಕಾನೂನು ಪ್ರಕ್ರಿಯೆ ನಡೆಸಲಾಗುತ್ತದೆ. -ಅನಿತಾ ಬಿ.ಹದ್ದಣ್ಣನವರ್‌, ಡಿಸಿಪಿ, ಪಶ್ಚಿಮ ಸಂಚಾರ ವಿಭಾಗ.

 

Advertisement

Udayavani is now on Telegram. Click here to join our channel and stay updated with the latest news.

Next