Advertisement

Traffic rules: 30 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನಕ್ಕೆ 3.22 ಲಕ್ಷ ರೂ. ದಂಡ!

10:54 AM Dec 19, 2023 | Team Udayavani |

ಬೆಂಗಳೂರು: ಆ ದ್ವಿಚಕ್ರ ವಾಹನಕ್ಕೆ ಸದ್ಯದ ಬೆಲೆ 30 ಸಾವಿರ ರೂ… ಆದರೆ, ಆ ವಾಹನ ಕಳೆದ ಕೆಲ ವರ್ಷಗಳಲ್ಲಿ 643 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆ ಯಲ್ಲಿ  ಸಂಚಾರ ಪೊಲೀಸರು ಬರೋಬ್ಬರಿ 3.22 ಲಕ್ಷ ರೂ.ದಂಡ ವಿಧಿಸಿದ್ದಾರೆ!

Advertisement

ಹೌದು, ಅಶ್ಚರ್ಯವಾದರು ನಿಜ. ಕೆಎ-04 ಕೆಎಫ್-9072 ನೋಂದಣಿ ಸಂಖ್ಯೆ ದ್ವಿಚಕ್ರ ವಾಹನದ ವಿರುದ್ಧ 3.22 ಲಕ್ಷ ರೂ. ದಂಡ ವಿಧಿಸಲಾಗಿದೆ. ಸದ್ಯ ದ್ವಿಚಕ್ರ ವಾಹನವೊಂದರ ವಿರುದ್ಧ ದಾಖಲಾಗಿರುವ ಅತಿ ಹೆಚ್ಚು ಪ್ರಕರಣ ಹಾಗೂ ವಿಧಿಸಲಾಗಿರುವ ದಾಖಲೆಯ ದಂಡ ಇದು ಎಂದು ಹೇಳಲಾಗಿದೆ.

ಆರ್‌.ಟಿ.ನಗರದ ಗಂಗಾನಗರ ನಿವಾಸಿ ಮಾಲಾ ಎಂಬುವರ ಹೆಸರಿನಲ್ಲಿರುವ ಈ ದ್ವಿಚಕ್ರ ವಾಹನ ಆರ್‌.ಟಿ.ನಗರ ಸುತ್ತ-ಮುತ್ತವೇ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡಿದೆ. ಮನೆ ಸಮೀಪದಲ್ಲೇ ಮಾರುಕಟ್ಟೆ ಹಾಗೂ ಇತರೆ ಅಂಗಡಿಗಳಿರುವುದರಿಂದ ಸವಾರ, ಹೆಲ್ಮೆಟ್‌ ಧರಿಸದೆ ಇರುವುದು ಹಾಗೂ ಸಿಗ್ನಲ್‌ ಜಂಪ್‌, ಜೀಬ್ರಾ ಲೈನ್‌ ಕ್ರಾಸ್‌ ಸೇರಿ ವಿವಿಧ ಸಂಚಾರ ನಿಯಮ ಉಲ್ಲಂಫಿ ಸಿದ್ದಾರೆ. ಈ ಪೈಕಿ ಹೆಲ್ಮೆಟ್‌ ಧರಿಸದಿರುವುದೇ ಅತಿ ಹೆಚ್ಚು ಪ್ರಕರಣಗಳಾಗಿವೆ. ಸಂಚಾರ ಪೊಲೀಸರು ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಇಂಟೆಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜೆ¾ಂಟ್‌ ಸಿಸ್ಟಂ(ಐಟಿಎಂಎಸ್‌) ಕ್ಯಾಮೆರಾಗಳಲ್ಲಿ ಈ ದ್ವಿಚಕ್ರ ವಾಹನದ ಸಂಚಾರ ನಿಯಮ ಉಲ್ಲಂಘನೆಗಳು ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ದಂಡ ವಿಧಿಸಿದ್ದು, ವಾಹನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next