Advertisement

ನರೇಗಾ ಯೋಜನೆ ನಿಯಮ ಉಲ್ಲಂಘನೆ

07:47 AM May 25, 2020 | Lakshmi GovindaRaj |

ಕನಕಪುರ: ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಿಲ್ಲ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನರೇಗಾ ನಿಯಮಗಳನ್ನು ಗಾಳಿಗೆ ತೂರಿದ್ದು, ಕೂಲಿಕಾರ್ಮಿಕರ  ಉದ್ಯೋಗ ಕಸಿದಿದ್ದಾರೆ ಎಂದು ತೋಕಸಂದ್ರ ಗ್ರಾಮಸ್ಥರು ಆರೋಪಿಸಿದ್ದಾರೆ. ತಾಲೂಕಿನ ಮರಳವಾಡಿ ಹೋಬಳಿ ತೋಕಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೊಳಿಸಿಲ್ಲ.

Advertisement

ಸೂಕ್ತ ಚರಂಡಿಯಿಲ್ಲದೇ  ಕೊಳಚೆ ನೀರು, ರಸ್ತೆಯಲ್ಲೇ ಹರಿಯುತ್ತಿದೆ. ಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದರೂ ಗ್ರಾಪಂ ಅಧಿಕಾರಿಗಳು ತಮಗೆ ಲಾಭ ತರುವ ಕಾಮಗಾರಿಗಳನ್ನು ಯಂತ್ರಗಳ ಮೂಲಕ ಮಾಡಿಕೊಂಡು, ಕಾರ್ಮಿಕರ ಉದ್ಯೋಗ ಕಸಿದಿದ್ದಾರೆ ಎಂಬ  ಆರೋಪಗಳು ಕೇಳಿವೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮಗಳ ಮೂಲಸೌಕರ್ಯ ಮತ್ತು ಅಭಿವೃದ್ಧಿಗೆಂದು ಕೇಂದ್ರ ಸರ್ಕಾರದಿಂದ ಗ್ರಾಪಂಗಳಗೆ ಸಾಕಷ್ಟು  ಅನುದಾನ ಹರಿದು ಬರುತ್ತಿದೆ.

ಚರಂಡಿ ನೀರು ರಸ್ತೆ ಕೆರೆಕುಂಟೆಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಗ್ರಾಮದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು ಎಂಬ ನಿಯಮವಿದೆ. ಆದರೆ ರಾಜಕಾರಣಿಗಳ ಬೆಂಬಲವಿರುವ ಪ್ರಭಾವಿ ಸದಸ್ಯರು  ಗ್ರಾಮದಲ್ಲಿ ಮೂಲ ಸೌಕರ್ಯಗಳಂತಹ ಅಭಿವೃದ್ಧಿ ಕಾಮಗಾರಿ ಗಳಿಗೆ ಆದ್ಯತೆ ನೀಡುತ್ತಿಲ್ಲ. ಜತೆಗೆ ಕಾಮಗಾರಿಗಳನ್ನು ಯಂತ್ರಗಳಿಂದ ಮಾಡಿಸುತ್ತಿರುವುದಕ್ಕೆ, ಮೇಲಧಿಕಾರಿ ಗಳು ಬೆಂಬಲವಾಗಿದ್ದಾರೆ ಎಂಬ ಆರೋಪಗಳಿವೆ.

ಲಾಕ್‌ಡೌನ್‌ನಿಂದ ಸಂದಂರ್ಭದಲ್ಲೂ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡದೆ ಸರ್ಕಾರದ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ. ಈ ಬಗ್ಗೆ ಇಒ ಮತ್ತು ಸಿಇಒ ಅವರಿಗೆ ದೂರು ನೀಡಲಾಗಿದ್ದು, ನಿಯಮ ಉಲ್ಲಂ ಸಿ  ನಡೆಸಿರುವ ಕಾಮಗಾರಿ ತಡೆದು ಕ್ರಮಕೈಗೊಳ್ಳಬೇಕು ಎಂದು ರಾಜೇಶ್‌ ಸೆರಿದಂತೆ ಆನೇಕ ಊರಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next