Advertisement
ವಿಜಯಪುರ ಜಿಲ್ಲೆಯಲ್ಲಿ ಮದ್ಯದ ನೈವೇದ್ಯ ಜಾತ್ರೆ ನಡೆಯುವ ಮಠ ಎಂದೇ ಹೆಸರಾಗಿರುವ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಸದಾಶಿವ ಮುತ್ಯಾನ ಮಠದ ಸಿದ್ಧರಾಮಯ್ಯ ಶ್ರೀಗಳು ಈ ಬಾರಿ ಕೋವಿಡ್ ಕರ್ಫ್ಯೂ ಮೀರಿ ಜನರು ಮನೆಯಿಂದ ಹೊರಗೆ ಬರಬೇಡಿ. ಬದಲಾಗಿ ಮನೆಯಲ್ಲೇ ಅಂಬಲಿ ನೈವೇದ್ಯ ಮಾಡಿ ಮುತ್ಯಾನಿಗೆ ಸಮರ್ಪಿಸಿ ಎಂದು ಸಂದೇಶ ನೀಡಿದ್ದರು.
Related Articles
Advertisement
ಆದರೆ ಸಿದ್ದರಾಮಯ್ಯ ಶ್ರೀಗಳ ಸಂದೇಶವನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ ಭಕ್ತರು, ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಅಂಬಲಿ ನೈವೇದ್ಯ ಸಮೇತ ಗುಂಪು ಗುಂಪಾಗಿ ಶ್ರೀಮಠಕ್ಕೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಬಲೇಶ್ವರ ಪೊಲೀಸರು ಭಕ್ತರ ಮನವೊಲಿಸಿ ಮರಳಿ ಮನೆಗೆ ಕಳಿಸಲು ಹರಸಾಹಸ ಪಡುವಂತೆ ಮಾಡಿದೆ.
ಇದರಿಂದ ಮತ್ತೊಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಸಿದ್ಧರಾಮಯ್ಯ ಶ್ರೀಗಳು, ಭಕ್ತರು ಯಾರೂ ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಬೇಡಿ. ಮಠಕ್ಕೂ ಆಗಮಿಸಬೇಡಿ. ಕೋವಿಡ್ ಕರ್ಫ್ಯೂ ಉಲ್ಲಂಘಿಸದೇ ಮನೆಯಲ್ಲೇ ಪೂಜೆ ಮಾಡಿ, ನೈವೇದ್ಯ ಸಮರ್ಪಿಸಿ ಎಂದು ಸಂದೇಶ ನೀಡಿದ್ದಾರೆ.
ಇದನ್ನೂ ಓದಿ : ಜನ ಜಂಗುಳಿ ನಿಯಂತ್ರಿಸದೇ ಕೋವಿಡ್ ತಡೆ ಅಸಾಧ್ಯ
ಅಂಬಲಿ ಎಂದರೆ ಜೋಳದ ನುಚ್ವಿಗೆ ಮಜ್ಜಿಗೆ, ಬೆಳ್ಳುಳ್ಳಿ ಬೆರೆಸಿದ ಗಂಜಿ ರೂಪದ ತೆಳುವಾದ ಆಹಾರವೇ ಅಂಬಲಿ. ಈ ಅಂಬಲಿ ಸೇವನೆ ಆರೋಗ್ಯ ವೃದ್ಧಿಗೆ ಸಹಕಾರಿ ಎಂಬ ಕಾರಣಕ್ಕೆ ಶ್ರೀಗಳು ಅಂಬಲಿ ಸಂದೇಶ ನೀಡಿದ್ದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಮನೆಯಲ್ಲಿಯೇ ಇರಿ ಎಂದು ಹಾಗೂ ಪೌಷ್ಠಿಕ ಆಹಾರವಾದ ಅಂಬಲಿ ತಯಾರಿಸಿ ನೈವೇದ್ಯ ಮಾಡಿ ಕುಡಿಯಿರಿ ಎಂದು ನೀಡಿದ ಸಂದೇಶ ಮುಗ್ದ ಭಕ್ತರು ಅರ್ಥೈಸುವಿಕೆಯಲ್ಲಿ ಮಾಡಿಕೊಂಡ ಗೊಂದಲ ಶ್ರೀಗಳನ್ನು, ಪೊಲೀಸರನ್ನು ಹೈರಾಣು ಮಾಡಿದೆ.