Advertisement
ಯುಗಾದಿ ಹಬ್ಬದ ಹಿನ್ನೆಲೆ ಕುರಿಮೇಕೆ ಮಾರಾಟ ಹಾಗೂ ಖರೀದಿಗಾಗಿ ಜನರುಸಂತೆಗೆ ಮುಗಿಬಿದ್ದು ಕೋವಿಡ್ ನಿಯಮಕ್ಕೆಎಳ್ಳುನೀರು ಬಿಟ್ಟಿದ್ದರು. ಮಾಹಿತಿ ತಿಳಿದ ತಹಶೀಲ್ದಾರ್ ದಾಳಿ ನಡೆಸಿ, ದಂಡ ಪ್ರಯೋಗ ಮಾಡಿದರು. ನಿಯಂತ್ರಣ ಮಾಡಲು ಬಂದ ಪೊಲೀಸರ ವಿರುದ್ಧವೇ ತಿರುಗಿ ಬಿದ್ದ ಜನರು, ಮೊದಲು ರಾಜಕಾರಣಿಗಳ ಕಾರ್ಯಕ್ರಮಗಳು, ರ್ಯಾಲಿಗಳನ್ನುನಿಲ್ಲಿಸಿ ಆನಂತರ ರೈತರ ಬರುವ ಸಂತೆಗಳನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಜನರಿಗೆ ದಂಡ: ನಗರದ ಬಸವಣ್ಣ ದೇವರಮಠದ ರಸ್ತೆ, ಸೊಂಡೆಕೊಪ್ಪ ಬೈಪಾಸ್ ಕುರಿಮೇಕೆ ಸಂತೆಯಲ್ಲಿ ಮಾಸ್ಕ್ ಧರಿಸದ 46 ಜನರಿಗೆ 100 ರೂ., 150 ರೂ., 250 ರೂ.ನಂತೆ ದಂಡವಿಧಿಸಲಾಗಿದ್ದು, ತಹಶೀಲ್ದಾರ್ ಹಾಗೂ ನಗರಸಭೆಯ ಪೌರಾಯುಕ್ತ ನೇತೃತ್ವದಲ್ಲಿ6300 ರೂ. ದಂಡವಸೂಲಿ ಮಾಡಿ ದಂಡ ಕಟ್ಟಿ ದವರಿಗೆ ಮಾಸ್ಕ್ ವಿತರಣೆ ಮಾಡಿದರು.
ಯಥಾಸ್ಥಿತಿ ಸಂತೆ: ಅಧಿಕಾರಿಗಳ ದಂಡವಿಧಿಸಿದರೂ ಸಂತೆ ಯಥಾಸ್ಥಿತಿ ನಡೆಯಿತು, ಸಾವಿರಾರು ಜನರು ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ಭಾಗವಹಿಸಿದ್ದರು. ಕಟ್ಟುನಿಟ್ಟಿನ ಆದೇಶ ಪೇಪರ್‌ಗೆ ಮಾತ್ರ ಸೀಮಿತವಾಗಿದ್ದು, ಜನರು ಪಾಲನೆ ಮಾಡಲು ಸಹ ಮುಂದಾಗುತ್ತಿಲ್ಲ.