Advertisement

ಕೋವಿಡ್‌ ನಿಯಮ ಉಲ್ಲಂಘಿಸಿ ಜನರ ಓಡಾಟ

12:06 PM Jan 17, 2022 | Team Udayavani |

ದೇವನಹಳ್ಳಿ: ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಸರ್ಕಾರ ಕೋವಿಡ್‌ ನಿಯಮ ಪಾಲಿಸುವಂತೆ ಜನರಿಗೆ ಅರಿವು ಮೂಡಿಸುತ್ತಿದ್ದರೂ, ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರವಿಲ್ಲದೆ ಓಡಾಡುತ್ತಿದ್ದು, ಕೋವಿಡ್‌ ನಿಯಮ ಜಿಲ್ಲೆಯಲ್ಲಿ ಉಲ್ಲಂಘನೆಯಾಗುತ್ತಿದೆ.  ಇದರಿಂದ ಕೋವಿಡ್‌ ಪ್ರಕರಣ ಮತ್ತಷ್ಟು ಹೆಚ್ಚಾಗುವ ಆತಂಕ ಶುರುವಾಗಿದೆ.

Advertisement

ಜನ ಇದೇ ರೀತಿ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಲಿದೆ. ಇನ್ನಾದರೂ ಎಚ್ಚೆತ್ತುಕೊಂಡರೆ ಒಳ್ಳೆಯದು. ಬಜಾರ್‌ ರಸ್ತೆ, ತರಕಾರಿ ಅಂಗಡಿಗಳುಇತರೆ ವಾಣಿಜ್ಯ ವ್ಯಾಪಾರ ವಹಿವಾಟುಗಳ ಹತ್ತಿರ ಮಾಸ್ಕ ಇಲ್ಲದೆ ಹಾಗೂ ಸಾಮಾಜಿಕ ಅಂತರವಿಲ್ಲದೇ ಇರುವುದು ದೃಶ್ಯ ಕಂಡು ಬರುತ್ತಿದೆ.ವ್ಯಾಪಾರಸ್ಥರೇ ವ್ಯಾಪಾರ ಮಾಡುವಾಗ ಮಾಸ್ಕ್ಇಲ್ಲದಿರುವುದು ಕಂಡು ಬರುತ್ತದೆ. ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ, ಜನತೆ ಅರಿವಿಲ್ಲದೆ ಓಡಾಡುತ್ತಿದ್ದಾರೆ.

ಜನರಲ್ಲಿ ನಿರ್ಲಕ್ಷ್ಯ ಭಾವನೆ: ಜನತೆಯಲ್ಲಿ ಇನ್ನೂ ಉದಾಸೀನ ಭಾವ ಎದ್ದು ಕಾಣುತ್ತಿದೆ. ಕೆಲವರಂತೂ ನಾವು ಲಸಿಕೆ ಹಾಕಿಸಿಕೊಂಡಿದ್ದೇವೆ. ಕೊರೊನಾ ಬರುವುದಿಲ್ಲ ಎಂಬ ನಿರ್ಲಕ್ಷ್ಯ ಭಾವನೆ ಕಂಡು ಬರುತ್ತಿದೆ. ಕೊರೊನಾ ಹೊರಟು ಹೋಗಿದೆ ಎಂಬ ಭ್ರಮೆಯಲ್ಲಿ ಜನ ಇದ್ದಾರೆ.ಮಾಸ್ಕ್ ಅರ್ಧಕ್ಕೆ ಹಾಕಿಕೊಂಡು ಓಡಾಡುವ ಜನರೂ ಇದ್ದಾರೆ. ಕೊರೊನಾ ಬಗ್ಗೆ ಮಾದ್ಯಮಎಷ್ಟೇ ಜಾಗೃತಿ ಮೂಡಿಸಿದರೂ ಜನರೂ ಮಾತ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸದೇ ಬೇಕಾಬಿಟ್ಟಿ ಓಡಾಡುವ ಮೂಲಕ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅಂಗಡಿಗಳ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಇಲ್ಲವೇ ಇಲ್ಲ.ಸರ್ಕಾರದ ಮಾರ್ಗಸೂಚಿ ಯಾರೊಬ್ಬರೂಅನುಸರಿಸುತ್ತಿಲ್ಲ. ಬೈಕಿನಲ್ಲಿ ಓಡಾಡುವವರ ಮಾಸ್ಕ್ಗಳು ಮಾಯವಾಗಿವೆ. ಆಟೋ ಹಾಗೂಬಸ್‌, ಖಾಸಗಿ ಬಸ್‌ಗಳಲ್ಲಿ ಹೆಚ್ಚಿನ ಜನರನ್ನುತುಂಬಿಕೊಂಡು ಹೋಗುತ್ತಿದ್ದು, ಯಾವ ನಿಯಮಗಳೂ ಆಚರಣೆಗೆ ಬರುತ್ತಿಲ್ಲ.

ಸೂಕ್ತ ಕ್ರಮ ಕೈಗೊಳ್ಳಿ: ಮಾಸ್ಕ್ ಧರಿಸದವರಿಗೆ ಮತ್ತು ನಿಯಮ ಪಾಲಿಸದವರಿಗೆ ದಂಡವಿಧಿಸುವ ಗೋಜಿಗೆ ಯಾವುದೇ ಅಧಿಕಾರಿಗಳು ಮುಂದಾಗುತ್ತಿಲ್ಲ. ಜನರು ಇನ್ನಾದರೂ ಸ್ವಯಂ ಜಾಗೃತರಾಗಬೇಕಾಗಿದ್ದು, ಮಾಸ್ಕ್ ಧರಿಸಿ,  ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾವನ್ನು ತಡೆಗಟ್ಟಬೇಕಾಗಿದೆ. ಇನ್ನಾದರೂಅಧಿಕಾರಿಗಳು ಎಚ್ಚೆತ್ತುಕೊಂಡು ಜನರು ಕೋವಿಡ್‌ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 500ರ ಗಡಿ ಸೋಂಕಿತರ ಪ್ರಕರಣ ದಾಟಿದೆ. ಕಳೆದವಾರಗಳಿಂದ ಕೊರೊನಾ ಸೋಂಕಿನ ಪ್ರಕರಣಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಶನಿವಾರ503 ಇದ್ದ ಪ್ರಕರಣ ಭಾನುವಾರ ಒಂದೇ ದಿನ722 ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ 2,740 ಸಕ್ರೀಯ ಪ್ರಕರಣ ಇವೆ

ಪುರಸಭೆಯಿಂದ ದಂಡ ವಿಧಿಸಲು ನಿರ್ಧಾರ :  ದೇವನಹಳ್ಳಿ ಬಜಾರ್‌ ರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ಮಾಸ್ಕ್ ಇಲ್ಲದೆ ಅಡ್ಡಾದಿಡ್ಡಿ ಓಡಾಡುವವರಿಗೆ ಪುರಸಭೆಯಿಂದ ದಂಡ ವಿಧಿಸಲು ತೀರ್ಮಾನಿ ಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿ ಮಾಲೀಕರಿಗೂ, ಸಾರ್ವಜನಿಕರಿಗೂಹಾಗೂ ಬೀದಿಬದಿ ವ್ಯಾಪಾರಿಗಳಿಗೂ ತಿಳವಳಿಕೆಮೂಡಿಸಲಾಗಿದೆ. ರಸ್ತೆಗಳಲ್ಲಿ ಉಗುಳುವುದು,ಮಾಸ್ಕ್ ಧರಿಸದೇ ಇರುವವರಿಗೆ ಹಾಗೂ ಸಾಮಾಜಿಕ ಅಂತರ ಇಲ್ಲದವರಿಗೆ ದಂಡ ವಿಧಿಸಲಾಗುವುದುಎಂದು ದೇವನಹಳ್ಳಿ ಪುರಸಭಾ ಮುಖ್ಯಾಧಿಕಾರಿ ಎ. ಎಚ್‌.ನಾಗರಾಜ್‌ ತಿಳಿಸಿದ್ದಾರೆ.

Advertisement

ಎರಡನೇ ಅಲೆಯಲ್ಲಿ ಜನಮೈಮರೆತ್ತಿದ್ದರಿಂದ ಸಾವು-ನೋವುಹೆಚ್ಚಾದವು. 3ನೇ ಅಲೆಯಲ್ಲೂಮೈಮರೆತರೆ ಹೆಚ್ಚಿನ ಸಂಕಷ್ಟಗಳನ್ನುಎದುರಿಸಬೇಕಾಗುತ್ತದೆ. ಜನರೇಸ್ವಯಂಪ್ರೇರಿತರಾಗಿ ಮಾಸ್ಕ್ ಧರಿಸಬೇಕು. ಎಲ್ಲೇ ಹೋದರೂ ಜನರು ಇರುವ ಕಡೆ ಸಾಮಾಜಿಕ ಅಂತರವನ್ನುಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸರ್ಕಾರ ಮಾರ್ಗಸೂಚಿ ಪಾಲಿಸಬೇಕು. ಕೆ. ಶ್ರೀನಿವಾಸ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next