Advertisement

ಕೋವಿಡ್‌ ನಿಯಮೋಲ್ಲಂಘನೆ ಒಂದು ಲಕ್ಷ ರೂ.ವರೆಗೆ ದಂಡ

12:25 PM Dec 06, 2020 | Suhan S |

ಬೆಂಗಳೂರು: ಮಹಾಮಾರಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ವಿಧಿಸಿರುವ ನಿಯಮಗಳನ್ನು ಪಾಲಿಸದವರ ವಿರುದ್ಧ ಭಾರಿ ಪ್ರಮಾಣದ “ದಂಡ ಪ್ರಯೋಗ’ಕ್ಕೆ ಮುಂದಾಗಿರುವ ಬೃಹತ್‌ ಬೆಂಗಳೂರುಮಹಾನಗರ ಪಾಲಿಕೆ(ಬಿಬಿಎಂಪಿ), ಕನಿಷ್ಠ 5 ಸಾವಿರದಿಂದ ಗರಿಷ್ಠ ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಲು ನಿರ್ಧರಿಸಿದೆ.

Advertisement

ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಾದ ಹೋಟೆಲ್‌, ಚಿತ್ರಮಂದಿರ, ಕಲ್ಯಾಣ ಮಂಟಪ, ಮಾಲ್‌,ಅಂಗಡಿ-ಮುಂಗಟ್ಟುಗಳ ಮಾಲಿಕರು, ತಮ್ಮ ಆವರಣಗಳಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳ ಬೇಕು. ಇಲ್ಲದಿದ್ದರೆ, ಅಂತಹ ಮಾಲಿಕರ ಮೇಲೆ ಈ ದಂಡ ವಿಧಿಸಲಾಗುತ್ತದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ-2020ರ ತಿದ್ದುಪಡಿ ಅನ್ವಯ ಈ ದಂಡ ಪ್ರಯೋಗ ಮಾಡಲಾಗುತ್ತಿದೆ.

ಹಾಗಾಗಿ, ಮಾಲಿಕರುಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸಿ ಒಳಗೆ ಪ್ರವೇಶಿಸುವ, ಸಾಮಾಜಿಕ ಅಂತರ ಕಾಪಾಡುವ ಮತ್ತು ಒಳ ಆವರಣದಲ್ಲಿ ಮಾಸ್ಕ್ ಧರಿಸಿರುವ ಕುರಿತು ಪರಿಶೀಲಿಸಿ, ಖಾತ್ರಿಪಡಿಸಿಕೊಳ್ಳ ಬೇಕು ಎಂದು ಪಾಲಿಕೆ ಸೂಚಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರತ ಆರೋಗ್ಯ ನಿರೀಕ್ಷಕರು ಮತ್ತು ವಾರ್ಡ್‌ ಮಾರ್ಷಲ್‌ಗ‌ಳು ದಂಡ ವಿಧಿಸಲಿದ್ದಾರೆ.

ಇದನ್ನೂ ಓದಿ : ಮಂಗಳೂರು: ಕಂಟೈನರ್ ಗೆ ಬೈಕ್ ಢಿಕ್ಕಿ, ಸವಾರ ಸ್ಥಳದಲ್ಲೇ ಸಾವು

ಯಾರಿಗೆಷ್ಟು ದಂಡ?(ರೂ.ಗಳಲ್ಲಿ) :

  • ಸ್ವ-ಸಹಾಯ ಪದ್ಧತಿ ಹೋಟೆಲ್‌ಗ‌ಳು, ದರ್ಶಿನಿ, ಆಹಾರ ಮಳಿಗೆ, ಬೀದಿಬದಿ ಫಾಸ್ಟ್‌ಫ‌ುಡ್‌ ಮಳಿಗೆಗಳು- 5,000
  • ಎಸಿ ಅಲ್ಲದ ರೆಸ್ಟೋರೆಂಟ್‌ಗಳು, ಪಾರ್ಟಿಹಾಲ್‌ಗ‌ಳು, ಅಂಗಡಿ/ ಮಳಿಗೆ, ಡಿಪಾರ್ಟ್‌ಮೆಂಟಲ್‌ ಸ್ಟೋರ್, ಖಾಸಗಿ ಬಸ್‌ ನಿಲ್ದಾಣ- 25,000
  • ಎಸಿ ರೆಸ್ಟೋರೆಂಟ್‌, ಪಾರ್ಟಿಹಾಲ್‌ಗ‌ಳು, ಡಿಪಾರ್ಟ್‌ಮೆಂಟಲ್‌ ಸ್ಟೋರ್, ಅಂಗಡಿ, ಬ್ರ್ಯಾಂಡೆಡ್‌ ಶಾಪ್ಸ್‌ (ಏಕ/ಬಹುಮಾದರಿ ಬ್ರ್ಯಾಂಡ್‌ಗಳು), ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌, ಶಾಪಿಂಗ್‌ ಮಾಲ್‌ಗ‌ಳು- 50,000
  • 3ಸ್ಟಾರ್‌ ಮತ್ತು ಅದಕ್ಕೂ ಹೆಚ್ಚಿನ ಸ್ಟಾರ್‌ ಹೋಟೆಲ್‌ಗ‌ಳು, 500 ಅಥವಾ ಅದಕ್ಕೂ ಅಧಿಕ ಆಸನ ಹೊಂದಿದ ಕಲ್ಯಾಣ ಮಂಟಪ ಅಥವಾ ಸಮುದಾಯ ಭವನಗಳು ಅಥವಾ ಸಾರ್ವಜನಿಕ ಸ್ಥಳಗಳು- 1,00,000
  • ಸಾರ್ವಜನಿಕ ಸಭೆ/ ಸಮಾರಂಭ/ ಕಾರ್ಯಕ್ರಮಗಳು/ ರ್ಯಾಲಿ/ ಕೂಟಗಳು/ ಆಚರಣೆಗಳು ಇತ್ಯಾದಿ- 50,000
  • ಮೇಲಿನವುಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಸ್ಥಳಗಳು- 10,000
Advertisement
Advertisement

Udayavani is now on Telegram. Click here to join our channel and stay updated with the latest news.

Next