Advertisement
ಕೊರೊನಾ ಮಾರ್ಗಸೂಚಿ ಜಾರಿಗೊಳಿಸುವ ಸಂಬಂಧದ ಪಿಐಎಲ್‌ನ ವಿಚಾರಣೆಯನ್ನು ಮುಖ್ಯ ನ್ಯಾ| ಎ.ಎಸ್ ಓಕ್ ನೇತೃತ್ವದ ವಿಭಾ ಗೀಯ ಪೀಠ ಸೋಮವಾರ ನಡೆಸಿತು. ತೇಜಸ್ವಿ ಸೂರ್ಯ ಅವರು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸೆ. 30ರಂದು ನಗರಕ್ಕೆ ವಾಪಸಾಗಿದ್ದರು. ಆಗ ಅವರನ್ನು ಏರ್‌ಪೋರ್ಟ್‌ನಿಂದ ತೆರೆದ ವಾಹನ ದಲ್ಲಿ ಪಕ್ಷದ ಕಚೇರಿಗೆ ಕರೆತಂದಿದ್ದು, ಆಗ ಕೋವಿಡ್ ಮಾರ್ಗಸೂಚಿ ಉಲ್ಲಂ ಸಲಾಗಿತ್ತು ಎಂದು ಪ್ರಕರಣ ದಾಖಲಾಗಿತ್ತು. ಈಗ ತೇಜಸ್ವಿ ಸೂರ್ಯ ಅವರಿಗೆ 250 ರೂ. ದಂಡ ವಿಧಿಸ ಲಾಗಿದೆ ಎಂದು ಸರಕಾರ ಕೋರ್ಟಿಗೆ ತಿಳಿಸಿದೆ.
ಬೆಂಗಳೂರು, ನ. 9: ಭೂ ಸುಧಾರಣ ಕಾಯ್ದೆಗೆ ತಿದ್ದುಪಡಿ ತಂದು ಎರಡನೇ ಬಾರಿ ಅಧ್ಯಾದೇಶ ಹೊರಡಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸ ಲಾಗಿದೆ. ಅಧ್ಯಾದೇಶ ಪ್ರಶ್ನಿಸಿ ಈ ಹಿಂದೆ ಅರ್ಜಿ ಸಲ್ಲಿಸಿದ್ದ ಮೂಲ ಅರ್ಜಿದಾರ ನಾಗರಾಜ ಹೊಂಗಲ್ ಅವರು, ಎರಡನೇ ಬಾರಿಗೆ ತಿದ್ದುಪಡಿಗೆ ತಂದಿರುವ ಅಧ್ಯಾದೇಶದ ಕ್ರಮವನ್ನು ಪ್ರಶ್ನಿಸಿ¨ªಾರೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ| ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಡಿ.1ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.