ಶಿರೂರು: ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ಬುಧವಾರದಿಂದ ಉಡುಪಿ ಜಿಲ್ಲೆಯಲ್ಲಿ ಜಾರಿಗೊಳಿಸಿರುವ ನಿಷೇಧಾಜ್ಞೆಗೆ ಶಿರೂರಿನಲ್ಲಿ ಯಾವುದೇ ಬೆಲೆ ಸಿಕ್ಕಿದಂತೆ ಕಾಣುತ್ತಿಲ್ಲ. ಆದೇಶ ಜಾರಿಯಲ್ಲಿರುವವರೆಗೆ ಎಲ್ಲೂ ಸಂತೆ ನಡೆಸಬಾರದು ಎಂಬ ಜಿಲ್ಲಾಧಿಕಾರಿಯವರ ಆದೇಶವಿದ್ದರೂ ಶಿರೂರಿನಲ್ಲಿ ಮಾಮೂಲಿಯಂತೆ ಸಂತೆ ನಡೆಯುತ್ತಿದೆ.
ಶಿರೂರಿನಲ್ಲಿ ಎಂದಿನಂತೆ ಮಾಮೂಲಿ ಸ್ಥಳದಲ್ಲಿ ನಡೆಯದೆ ಬದಲು ಪಕ್ಕದ ಹಡವಿನಕೋಣೆ ರಸ್ತೆಯಲ್ಲಿ ಸಂತೆ ನಡೆಯುತ್ತಿದೆ.
ಹೆಚ್ಚು ಜನರು ಸೇರಬಾರದೆಂಬ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಜನರು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಮಾಮೂಲಿಯಂತೆ ಜನರು ಸಂತೆ ಅಂಗಡಿಗಳ ಮುಂದೆ ಮುಗಿಬಿದ್ದಿದ್ದು, ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಸರಕಾರದ ಜಾಗೃತಿ ಕ್ರಮಗಳು ಕೇವಲ ನೋಟಿಸ್ ಗೆ ಮಾತ್ರ ಸೀಮಿತವಾಗುತ್ತಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಷೇಧಾಜ್ಞೆಯ ನಡುವೆಯೂ ಸಂತೆ ನಡೆಯೂದರ ಬಗ್ಗೆ ವರದಿಯಾದ ನಂತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬಂದ್ ಮಾಡಿಸಿದ್ದಾರೆ.