Advertisement

ಕೋವಿಡ್ ನಿಯಮ ಉಲ್ಲಂಘನೆ : 6 ದಿನದಲ್ಲಿ 4 ಕೋಟಿ ದಂಡ ಸಂಗ್ರಹ

11:41 AM Oct 13, 2020 | Suhan S |

ಬೆಂಗಳೂರು: ಕೋವಿಡ್‌ ಕಾರಣದಿಂದ ಸಂಚಾರ ನಿಯಮಗಳ ಉಲ್ಲಂಘನೆ ಮೇಲೆ ಸ್ವಲ್ಪ ಮಟ್ಟಿಗೆ ಗುರಿಯಿಡುವುದನ್ನು ನಿಲ್ಲಿಸಿದ್ದ ನಗರ ಸಂಚಾರ ಪೊಲೀಸರು ಪುನಃ ಬಿರುಸಿನ ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ಕೇವಲ 6 ದಿನಗಳ ಕಾರ್ಯಾಚರಣೆಯಲ್ಲಿ 83 ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ 97213 ಪ್ರಕರಣ ದಾಖಲಿಸಿ ಕೊಂಡಿರುವ ಸಂಚಾರ ಪೊಲೀಸರು, ಬರೋಬ್ಬರಿ 4.02 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ದಂಡವನ್ನು ವಸೂಲಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ವಸೂಲಿ ಮಾಡಿದ ದಂಡದ ಮೊತ್ತ ಇದಾಗಿದೆ.

ಅ.4ರಿಂದ 10ರವರೆಗೆ ಪೊಲೀಸರು ದಾಖಲಿಸಿರುವ ಸಂಚಾರ ನಿಯಮಗಳ ಉಲ್ಲಂಘನೆ ಕೇಸ್‌ಗಳಲ್ಲಿ ಹೆಲ್ಮೆಟ್‌ ರಹಿತ ವಾಹನ ಚಾಲನೆ ಸಿಂಹಪಾಲು ಪಡೆದಿದೆ. ಬರೋಬ್ಬರಿ 30712 ಕೇಸ್‌ ಗಳು ಬೈಕ್‌ ಸವಾರ ಹೆಲ್ಮೆಟ್‌ ರಹಿತ ಚಾಲನೆ ಮಾಡಿದ್ದು, ಹಿಂಬದಿ ಸವಾರ ಹೆಲ್ಮೆಟ್‌ ಧರಿಸದ ಸಂಬಂಧ 19403 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಸೀಟ್‌ಬೆಲ್ಟ್ ಧರಿಸದ ಸಂಬಂಧ 5 ಸಾವಿರಕ್ಕೂ ಅಧಿಕಕೇಸ್‌, ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲುಗಡೆ ಸಂಬಂಧ 3ಸಾವಿರಕ್ಕೂ ಅಧಿಕ ಕೇಸ್‌ ದಾಖಲಿಸಿದ್ದಾರೆ.

ಡ್ರಂಕ್‌ ಡ್ರೈವ್‌ ಒಂದೇ ಕೇಸ್‌!: ಕೋವಿಡ್ ಭೀತಿ ಹಿನ್ನೆಲೆಯಲ್ಲಿ “ಡ್ರಂಕ್‌ ಅಂಡ್‌ ಡ್ರೈವ್‌) ವಿಶೇಷ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಬಹುತೇಕ 6 ತಿಂಗಳಿನಿಂದ ಈ ಕಾರ್ಯಾಚರಣೆಗೆ ಬ್ರೇಕ್‌ ಬಿದ್ದಿದೆ. ಹೀಗಿದ್ದರೂ ಈ ವಾರದ ಕಾರ್ಯಾಚರಣೆಯಲ್ಲಿ ಡ್ರಕ್‌ ಅಂಡ್‌ ಡ್ರೈವ್‌ ಕೇಸ್‌ಕೂಡ ಒಂದು ದಾಖಲಾಗಿದೆ.

5.12 ಕೋಟಿ ರೂ.ವೆಚ್ಚದಲ್ಲಿ ವಾರ್‌ ರೂಂ :

Advertisement

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ(ಬಿಬಿಎಂಪಿ) ಕೇಂದ್ರ ಕಚೇರಿ ಆವರಣದಲ್ಲಿ ಕೋವಿಡ್‌-19 ವಾರ್‌ ರೂಂ ಸ್ಥಾಪನೆಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‌ನಲ್ಲಿ ಪ್ರೋ ಡಿಜಿಟಲ್‌ ಲ್ಯಾಬ್ಸ್ ಪ್ರೈ.ಲಿ., ಅತಿ ಕಡಿಮೆ ಬಿಡ್‌ ಮಾಡಿದ್ದು, 5.12 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಲು ಮುಂದೆ ಬಂದಿದೆ. ವಾರ್‌ ರೂಂ ನಿರ್ಮಿಸುವ ಸಂಬಂಧ ಒಟ್ಟು ಮೂರು ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ ಅತುರಿ ಆಂಡ್‌ ಕಂಪನಿಯು 8.09 ಕೋಟಿ ಹಾಗೂ ಸಾಂಘ್ವಿ ಕಾಂಪ್ಲೆಕ್ಸ್‌ ಸಂಸ್ಥೆ 6.73 ಕೋಟಿ ರೂ. ಅಂದಾಜು ಮೊತ್ತ ನಮೂದಿಸಿತ್ತು. ಪ್ರೋ ಡಿಜಿಟಲ್‌ ಲ್ಯಾಬ್ಸ್ ಅತಿ ಕಡಿಮೆ ಮೊತ್ತ ನಮೂದಿಸಿದ ಹಿನ್ನೆಲೆಯಲ್ಲಿ ಆ ಸಂಸ್ಥೆಗೆ ಕಾರ್ಯಾದೇಶ ನೀಡಲು ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ.

ನಗರದಲ್ಲಿ ತೀವ್ರವಾಗಿರುವ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಈ ವಾರ್‌ ರೂಂ ಕಾರ್ಯನಿರ್ವಹಿಸಲಿದೆ. ಸೋಂಕಿತರು, ಸಂಶಯಾಸ್ಪದಸೋಂಕಿತರು,ಸಂಪರ್ಕಿತರ ವಿಳಾಸ ಮತ್ತು ಸಂಬಂಧಿಸಿದ ಸಂಪೂರ್ಣ ವಿವರ, ಸೋಂಕಿತರ ಪ್ರದೇಶದ ಹತ್ತಿರ ಇರುವ ಆಸ್ಪತ್ರೆಗಳ ಮಾಹಿತಿಯನ್ನು ಜಿಐಎಸ್‌ನಲ್ಲಿ ಅಳವಡಿಸುವುದು ಮತ್ತಿತರ ಅಗತ್ಯ ಮಾಹಿತಿ ಸಂಗ್ರಹ ವಾರ್‌ ರೂಂ ಮೂಲಕ ಆಗಲಿದೆ.

5,764 ಮಂದಿ ಕೋವಿಡ್ ದಿಂದ ಗುಣಮುಖ :

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆ ಆಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಹಾಗೆಯೇ ಸಾವಿನ ಸಂಖ್ಯೆಯಲ್ಲಿಕೊಂಚ ಇಳಿಕೆಯಾಗಿದೆ.

ಸೋಮವಾರ 5,764 ಮಂದಿ ಕೋವಿಡ್‌-19 ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಗಳಿಂದ ಬಿಡುಗಡೆ ಹೊಂದಿದ್ದಾರೆ.ಈ ಮೂಲಕ ಸೋಂಕಿನಿಂದ ಗುಣಮುಖರಾಗಿ ಮನೆ ಸೇರುತ್ತಿರುವವರ ಸಂಖ್ಯೆ 2,17,122ಕ್ಕೆ ಏರಿಕೆ ಆಗಿದೆ.ಹಾಗೆಯೇ ಪುರು ಷರು, ಮಹಿಳೆಯರು ಸೇರಿ 18 ಮಂದಿ ಸಾವನ್ನಪ್ಪಿದ್ದು ಒಟ್ಟಾರೆ ಸಾವಿಗೀಡಾದವರ ಸಂಖ್ಯೆ 3,362ಕ್ಕೆ ಏರಿಕೆ ಆಗಿದೆ. ಜತೆಗೆ 3,498 ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಕೋವಿಡ್‌-19 ಸೋಂಕಿತರ ಸಂಖ್ಯೆ 2,85,055ಕ್ಕೆ ಏರಿದೆ. ಪ್ರಸ್ತುತ 64,570 ಸಕ್ರಿಯ ಪ್ರಕರಣಗಳಿದ್ದು ಅವರೆಲ್ಲಾ ನಗರದವಿವಿಧಆಸ ³ತ್ರೆಗಳಿಗೆ ದಾಖಲಾಗಿ ಆರೈಕೆ ಪಡೆಯುತ್ತಿದ್ದಾರೆ. ಹಾಗೆಯೇ 346 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next