Advertisement

ಆದೇಶ ಉಲ್ಲಂಘಿಸಿದ ತಹಶೀಲ್ದಾರ್‌: ರೈತ ಸಂಘ  ಪ್ರತಿಭಟನೆ

05:05 PM Mar 14, 2017 | Harsha Rao |

ಬೆಳ್ತಂಗಡಿ: ಬಡರೈತ ಕೃಷಿ ಮಾಡಿ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ರೈತರ ಕೃಷಿ ನಾಶಗೈದ ಬೆಳ್ತಂಗಡಿಯ ತಹಶೀಲ್ದಾರ್‌ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತರೈತ ಸಂಘ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್‌ ಹೇಳಿದರು.

Advertisement

ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ, ಡಿ.ವೈಎಫ್‌.ಐ. ಮತ್ತು ದಲಿತ ಹಕ್ಕುಗಳ ಬೆಳ್ತಂಗಡಿ ತಾಲೂಕು ಸಮಿತಿಗಳ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಭೂಮಿ ಪ್ರಶ್ನೆ ರೈತರ ಹೋರಾಟವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ತಹಶೀಲ್ದಾರ್‌ ಸಿವಿಲ್‌ ನ್ಯಾಯಾ ಲಯದ ತಡೆಯಾಜ್ಞೆಯನ್ನೂ ಧಿಕ್ಕರಿಸಿ ಕಾನೂನು ಬಾಹಿರ ಕೆಲಸ ಮಾಡಿ
ದ್ದಾರೆ ಎಂದರು. ಒಂದೆಡೆ ರೈರೈತರ ಜಮೀನನ್ನು ಅನ್ಯರಿಗೆ ದಾಖಲೆ ಮಾಡಿ ಕೊಡುವ, ಇನ್ನೊಂದೆಡೆ 94 ಸಿ  ಹಕ್ಕುಪತ್ರ ಸವಸ್ಯೆ, ಓವರ್‌ ಲೋಡ್‌ದೆಸೆಯಿಂದ ರೈತ ಕಂಗಾಲಾಗಿದ್ದರೂ ಸ್ಪಂದನೆ ಇಲ್ಲ ಎಂದರು. ಸರಕಾರವನ್ನು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣಗೌಡ ಅರಣ್ಯ ಹಕ್ಕು ಸಮಿತಿಗೆಅರಣ್ಯ ವಾಸಿಗಳು ಕಾನೂನು ಬದ್ಧ  ಅರ್ಜಿ ಸಲ್ಲಿಸಿದ್ದರೂ, ಅವರಿಗೆ ಹಕ್ಕುಪತ್ರ ನೀಡಲಾಗದ ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟ ಅನಿವಾರ್ಯ ಎಂದರು.ರೈತ ಸಂಘದ ಜತೆ ಕಾರ್ಯದರ್ಶಿ ನೀಲೇಶ್‌ ಪೆರಿಂಜೆ ಸ್ವಾಗತಿಸಿದರು.

ಮುಖಂಡರಾದ ಜಯರಾಮ ಮಯ್ಯ, ರೈತ ಸಂಘದ ಮುಖಂಡರಾದ ನಾರಾಯಣ ಕೈಕಂಬ, ಪೆನುìಗೌಡ, ಮಹಮ್ಮದ್‌ಅನಸ್‌, ಸಂಜೀವ ನಾಯ್ಕ, ಗೋವಿಂದ ಗೌಡ, ಸುಜಾತಾ ಹೆಗ್ಡೆ, ಬಾಬು ಬಾಂತಿಮಾರು, ಸುಕುಮಾರ್‌ ದಿಡುಪ್ಪೆ, ಡೊಂಬಯ ಗೌಡ, ರಾಮಚಂದ್ರ ಮಣಿಯಾಣಿ, ಸಿಐಟಿಯು ಮುಖಂಡರಾದ ನೆಬಿಸಾ ಮುಗುಳಿ, ಲೋಕೇಶ್‌ಕುದ್ಯಾಡಿ, ಡಿ.ವೈ.ಎಫ್‌.ಐ. ಮುಖಂಡರುಗಳಾದ ತಾಲೂಕು ಅಧ್ಯಕ್ಷ ಧನಂಜಯಗೌಡ, ಲಾರೆನ್ಸ್‌ ಕೈಕಂಬ, ಯುವರಾಜ, ವಸಂತಟೆ„ಲರ್‌, ದಲಿತ ಹಕ್ಕು ಸಮಿತಿಯ ತಾ| ಅಧ್ಯಕ್ಷರಾದ ಬಾಬು ಕೊಯ್ಯೂರು, ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷೆ ಕಿರಣಪ್ರಭಾ, ಅಪ್ಪಿ, ವೀನಸ ಮೊದಲಾದವರು ಹೋರಾ ಟದ ನೇತƒತ್ವದಲ್ಲಿದ್ದರು. ಸಹಾಯಕ ಕಮಿಷನರ್‌ಅವರಿಗೆ ತಹಶೀಲ್ದಾರ್‌ ಮೂಲಕ ಮನವಿ ನೀಡಲಾಯಿತು. ತಾಲೂಕು ಮಟ್ಟದಲ್ಲಿ ಆಗುವ 94ಸಿ ಅರ್ಜಿ ವಿಲೇವಾರಿ ಮೊದಲಾದ ಕೆಲಸಗಳನ್ನು ತತ್‌ಕ್ಷಣ ಮಾಡುವ ಭರವಸೆಯನ್ನು ತಹಶೀಲ್ದಾರ್‌ ನೀಡಿದರು. ಸ್ಥಳಕ್ಕಾಗಮಿಸಿದ ಮೆಸ್ಕಾಂ ಎ.ಇ. ಅವರು ಮಾರ್ಚ್‌ ಒಳಗೆ ವಿದ್ಯುತ್‌ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next