Advertisement

Olympic ಕುಸ್ತಿ: ಫೋಗಾಟ್‌ ಅನರ್ಹ ಪ್ರಕರಣ: ತೂಕ ಇಳಿಕೆಗೆ ಇಡೀ ರಾತ್ರಿ ವಿನೇಶ್‌ ಕುಸ್ತಿ

01:26 AM Aug 08, 2024 | Team Udayavani |

ಪ್ಯಾರಿಸ್‌: ಕೇವಲ 100 ಗ್ರಾಂ ತೂಕ ಹೆಚ್ಚಳವಾದ ಕಾರಣ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಫೋಗಾಟ್‌ ತೂಕವನ್ನು ಇಳಿಸಲು ರಾತ್ರಿಯಿಡೀ ಕೈಗೊಂಡ ಕೆಲಸಗಳು ಮನಕಲಕುವಂತಿವೆ. 2.8 ಕೆಜಿ ತೂಕ ಇಳಿಸಲು ರಾತ್ರಿಯಿಡೀ ಸೈಕ್ಲಿಂಗ್‌, ಸ್ಕಿಪ್ಪಿಂಗ್‌, ರನ್ನಿಂಗ್‌ ಮಾಡಿದ ವಿನೇಶ್‌, ಒಂದೂ ತೊಟ್ಟು ನೀರು ಕೂಡ ಕುಡಿಯದೇ ಬೆವರು ಸುರಿಸಿದ್ದರು.

Advertisement

ಈ ಮೊದಲು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್‌ ಈ ಬಾರಿ ಅವಕಾಶ ಸಿಗದ ಕಾರಣ 50 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. ಹೀಗಾಗಿ ಸ್ಪರ್ಧೆ ಆರಂಭವಾಗುವ ದಿನ ಬೆಳಿಗ್ಗೆ ನಡೆಸುವ ತೂಕ ಪರಿಶೀಲನೆಯಲ್ಲಿ ಸ್ಪರ್ಧಿ 50 ಅಥವಾ ಅದಕ್ಕಿಂತ ಕಡಿಮೆ ಭಾರ ಹೊಂದಿರಬೇಕು. ವಿನೇಶ್‌ ಅವರ ತೂಕ 50 ಕೆಜಿ, 100 ಗ್ರಾಂ ಇದ್ದ ಕಾರಣ ಅವರನ್ನು ಅನರ್ಹಗೊಳಿಸಲಾಯಿತು.

ತೂಕ ಇಳಿಸಲು ಹರಸಾಹಸ
ಮಂಗಳವಾರ ನಡೆದ ಅರ್ಹತಾ ಸುತ್ತಿಗೂ ಮುನ್ನ ವಿನೇಶ್‌ ಅವರ ತೂಕವನ್ನು ಲೆಕ್ಕ ಮಾಡ ಲಾಗಿತ್ತು. ಈ ವೇಳೆ ಅವರು 49.9 ಕೆಜಿ ತೂಕವಿದ್ದರು. 3 ಬೌಟ್‌ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್‌ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್‌ ನಡೆಸಿ, ಸ್ಕಿಪ್ಪಿಂಗ್‌ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.

ಕುಸ್ತಿ ನಿಯಮ ಏನು ಹೇಳುತ್ತದೆ?
ಕುಸ್ತಿ ನಿಯಮದ ಪ್ರಕಾರ ಸ್ಪರ್ಧಿಯು ತಾನು ಸ್ಪರ್ಧಿಸುತ್ತಿರುವ ವಿಭಾಗದಷ್ಟೇ ಅಥವಾ ಅದ ಕ್ಕಿಂತ ಕಡಿಮೆ ತೂಕ ಹೊಂದಿರಬೇಕು. ಕುಸ್ತಿ ಸ್ಪರ್ಧೆಗಳು ನಡೆಯುವ ದಿನ ಮುಂಜಾನೆ ತೂಕ ಮಾಡಲಾಗುತ್ತದೆ. ಸುಮಾರು 30 ನಿಮಿಷ ಗಳ ಕಾಲ ನಡೆಯುವ ಈ ಪರೀಕ್ಷೆಯಲ್ಲಿ ಹಲವು ಬಾರಿ ತೂಕ ಮಾಡಲಾಗುತ್ತದೆ. ಫೈನಲ್‌ ಹಾಗೂ ರೆಪಿಶೇಜ್‌ ವಿಭಾಗಗಳಲ್ಲಿ ಸ್ಪರ್ಧಿಸು  ವವರು ಫೈನಲ್‌ ನಡೆಯುವ ದಿನವೂ ತೂಕ ಮಾಡಿಸಿಕೊಳ್ಳ ಬೇಕಿರುತ್ತದೆ. ನಿಗದಿಕ ತೂಕಕ್ಕಿಂತ ಹೆಚ್ಚು ತೂಕ ಕಂಡುಬಂದರೆ ಅನರ್ಹ ಗೊಳಿಸಲಾಗುತ್ತದೆ.

ಕ್ಯೂಬಾದ ಲೋಪೆಜ್‌ ಫೈನಲ್‌ಗೆ
ವಿನೇಶ್‌ ಅನರ್ಹಗೊಂಡ ಹಿನ್ನೆಲೆಯಲ್ಲಿ ಅವರನ್ನು 50 ಕೆಜಿ ವಿಭಾಗದಲ್ಲಿ ಕೊನೆಯ ಸ್ಥಾನದಲ್ಲಿ ಗುರುತಿಸಲಾಗುತ್ತದೆ. ಹೀಗಾಗಿ ಅವರಿಗೆ ಯಾವುದೇ ಪದಕ ನೀಡಲಾಗುವುದಿಲ್ಲ. ಸೆಮಿಫೈನಲ್‌ನಲ್ಲಿ ವಿನೇಶ್‌ರಿಂದ ಸೋಲಿಸಲ್ಪಟ್ಟಿದ್ದ ಕ್ಯೂಬಾದ ಯುನ್ಲàಲಿಸ್‌ ಗಜ್‌ಮನ್‌ ಲೋಪೆಜ್‌ ಫೈನಲ್‌ ಅರ್ಹತೆ ಪಡೆದುಕೊಂಡಿದ್ದಾರೆ.

Advertisement

ವಿನೇಶ್‌ ಈ ಬಾರಿ ಬೆಲ್ಜಿಯಂ ವೋಲರ್‌ ಆಕೋಸ್‌ ಅವರನ್ನು ವೈಯಕ್ತಿಕ ಕೋಚ್‌ ಆಗಿ ನೇಮಕ ಮಾಡಿಕೊಂಡಿದ್ದರು. ಅಲ್ಲದೇ ದಕ್ಷಿಣ ಆಫ್ರಿಕಾದ ವೈನೇ ಲ್ಯಾಂಬಾರ್ಡ್‌ ಅವರು ಮಾನಸಿಕ ತಜ್ಞರಾಗಿ ವಿನೇಶ್‌ ಜತೆಗೆ ಕೆಲಸ ಮಾಡುತ್ತಿದ್ದರು.

“ವಿನೇಶ್‌ ನೀವು ಚಾಂಪಿಯನ್‌’
ಪದಕ ವಂಚಿತರಾದ ಕುಸ್ತಿಪಟು ವಿನೇಶ್‌ ಫೋಗಾಟ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಸಾಂತ್ವನ ಹೇಳಿದ್ದಾರೆ.

ಟ್ವೀಟ್‌ ಮಾಡಿರುವ ಮುರ್ಮು, ಅನರ್ಹ ಗೊಂಡ ಈ ಹೊತ್ತಿನ ನಿರಾಸೆಯಲ್ಲಿ ನಾವೆಲ್ಲರೂ ಪಾಲುದಾರರಾಗಿದ್ದೇವೆ. ವಿನೇಶ್‌ ನಮ್ಮೆಲ್ಲರ ಮನದಲ್ಲಿ ಚಾಂಪಿಯನ್‌ ಆಗಿಯೇ ಉಳಿದಿದ್ದಾರೆ ಎಂದಿದ್ದಾರೆ.

ವಿನೇಶ್‌, ನೀವು ಚಾಂಪಿಯನ್ನರಲ್ಲಿ ಒಬ್ಬರಾಗಿ ದ್ದೀರಿ. ನೀವು ಭಾರತದ ಹೆಮ್ಮೆ ಮತ್ತು ದೇಶದ ಪ್ರತಿಯೊಬ್ಬರನ್ನೂ ಸ್ಫೂರ್ತಿಗೊಳಿಸಿದ್ದೀರಿ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ವಿನೇಶ್‌ ಫೋಗಾಟ್‌ ಪ್ರಕರಣದಿಂದ ಮನಸ್ಸಿಗೆ ಬಹಳ ಬೇಸರವಾಗಿದೆ ಎಂದು ಸಿದ್ದರಾಮಯ್ಯ ಕೂಡ ಟ್ವೀಟ್‌ ಮಾಡಿದ್ದಾರೆ.

ವಿನೇಶ್‌ ತೂಕ ದಿಢೀರ್‌
ಹೆಚ್ಚಿದ್ದು ಹೇಗೆ?
ಮಂಗಳವಾರ ಬೆಳಿಗ್ಗೆ ವಿನೇಶ್‌ ಅವರ ತೂಕ 49.9 ಕೆಜಿಯಷ್ಟಿತ್ತು. ಮಂಗಳವಾರ ರಾತ್ರಿಯ ವರೆಗೆ ಅವರು 3 ಬೌಟ್‌ಗಳಲ್ಲಿ ಸ್ಪರ್ಧೆ ಮಾಡಿದ್ದು, ಈ ಅವಧಿಯಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳು ವುದಕ್ಕಾಗಿ ಹೈ ಎನರ್ಜಿ ಇವರು ಆಹಾರವನ್ನು ಸೇವನೆ ಮಾಡಿದ್ದರು. ಹೀಗಾಗಿ ಅವರ ತೂಕ ಸೆಮಿಫೈನಲ್‌ ಅಂತ್ಯದ ವೇಳೆಗೆ 52.7 ಕೆಜಿಗೆ ಹೆಚ್ಚಳವಾಗಿತ್ತು. ಹೈ ಪ್ರೋಟಿನ್‌ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ತತ್‌ಕ್ಷಣದ ಬದಲಾವಣೆಗಳಾಗಿ ಕಡಿಮೆ ಸಮಯದಲ್ಲೇ ತೂಕ ಹೆಚ್ಚುವುದು ಸಾಮಾನ್ಯ ಸಂಗತಿಯಾಗಿದೆ.

ಬೆಂಬಲ ಸಿಬಂದಿ ತನಿಖೆಗೆ ಆಗ್ರಹ
ವಿನೇಶ್‌ ಫೋಗಾಟ್‌ ಅವರ ಸಹಾಯಕ ಸಿಬಂದಿ ವಿರುದ್ಧ ತನಿಖೆ ನಡೆಸಬೇಕು ಎಂದು ಭಾರತೀಯ ಕುಸ್ತಿ ಪ್ರಾಧಿಕಾರದ ಅಧ್ಯಕ್ಷ ಸಂಜಯ್‌ ಸಿಂಗ್‌ ಆಗ್ರಹಿಸಿದ್ದಾರೆ. ಇದು ವಿನೇಶ್‌ ಅವರ ತಪ್ಪಾಗಿರಲು ಸಾಧ್ಯವಿಲ್ಲ. ಅವರು ಉತ್ತಮವಾಗಿ ಭಾಗಿಯಾಗಿದ್ದರು. ಅವರ ಕೋಚ್‌, ನ್ಯೂಟ್ರಿಶಿಯನ್‌ ಮತ್ತು ಬೆಂಬಲ ಸಿಬಂದಿ ಇದರ ಜವಾಬ್ದಾರಿ ಹೊರಬೇಕು ಎಂದು ಅವರು ಹೇಳಿದ್ದಾರೆ. ವಿನೇಶ್‌ ತೂಕ ಹೆಚ್ಚಳ ವಾಗದಂತೆ ಅವರು ನೋಡಿಕೊಳ್ಳಬೇಕಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಭಾರತ ಸರಕಾರ ತನಿಖೆ ನಡೆಸಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ವಿನೇಶ್‌ಗೆ ನಮ್ಮ ಪೂರ್ಣ ಬೆಂಬಲವಿದೆ: ಪಿ.ಟಿ. ಉಷಾ
ಪ್ಯಾರಿಸ್‌ ಒಲಿಂಪಿಕ್ಸ್‌ ಕುಸ್ತಿಯಲ್ಲಿ ಅನರ್ಹಗೊಂಡು ಆಘಾತಕ್ಕೀಡಾಗಿರುವ ಕುಸ್ತಿಪಟು ವಿನೇಶ್‌ ಫೋಗಾಟ್‌ ಅವರಿಗೆ ಸಂಪೂರ್ಣ ಬೆಂಬಲ ನೀಡುವು ದಾಗಿ ಭಾರತೀಯ ಒಲಿಂಪಿಕ್‌ ಅಸೋಸಿ ಯೇಶನ್‌ನ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಹೇಳಿದ್ದಾರೆ.
“ವಿನೇಶ್‌ ಅನರ್ಹತೆ ಬಹಳ ಆಘಾತ ನೀಡಿದೆ. ನಾನು ಕ್ರೀಡಾಗ್ರಾಮದ ಕ್ಲಿನಿಕ್‌ನಲ್ಲಿ ವಿನೇಶ್‌ ಅವರನ್ನು ಭೇಟಿ ಮಾಡಿ, ಐಒಎಯಿಂದ, ಭಾರತ ಸರಕಾರದಿಂದ, ಇಡೀ ದೇಶದಿಂದ ಎಲ್ಲ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದೇನೆ. ಈ ಕುರಿತಂತೆ ವಿಶ್ವ ಕುಸ್ತಿ ಸಂಸ್ಥೆಯ ಜತೆಗೆ ಭಾರತೀಯ ಕುಸ್ತಿ ಒಕ್ಕೂಟ ಸಾಧ್ಯವಾದ ಎಲ್ಲ ರೀತಿಯಲ್ಲಿ ಮನವಿ ಮಾಡಿದೆ. ಸ್ಪರ್ಧೆಯ ಮಾನದಂಡವನ್ನು ತಲುಪಲು ವಿನೇಶ್‌ ಮತ್ತು ಅವರ ವೈದ್ಯಕೀಯ ತಂಡ ಪಟ್ಟ ಶ್ರಮದ ಬಗ್ಗೆಯೂ ನನಗೆ ಅರಿವಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next