Advertisement

ವಿಶ್ವ ಕ್ರೀಡಾ ಪ್ರಶಸ್ತಿ ಸ್ಪರ್ಧಾ ಕಣದಲ್ಲಿ ವಿನೇಶ್‌

12:45 AM Jan 19, 2019 | Team Udayavani |

ಹೊಸದಿಲ್ಲಿ:  ವಿಶ್ವದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ “ಲಾರಿಯಸ್‌’ಗೆ ಈ ಬಾರಿ ಭಾರತದ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್‌ ಪೋಗಟ್‌ ನಾಮ ನಿರ್ದೇಶನಗೊಂಡಿದ್ದಾರೆ. ವಿನೇಶ್‌ ಈ ಸಾಧನೆಗೆ ಪಾತ್ರರಾದ ದೇಶದ ಮೊದಲ ಕ್ರೀಡಾಪಟು ಎನ್ನುವುದು ವಿಶೇಷ.

Advertisement

ಗಾಲ್ಫ್ ದಿಗ್ಗಜ ಟೈಗರ್‌ ವುಡ್ಸ್‌, ಕೆನಡಾದ ಸ್ನೋ ಬೋರ್ಡ್‌ ಕ್ರೀಡಾಪಟು ಮಾರ್ಕ್‌ ಮೆಕ್‌ಮಾರಿಸ್‌, ಅಮೆರಿಕದ ಸ್ಕೀಯಿಂಗ್‌ ತಾರೆ ಲಿಂಡ್ಸೆ ವಾನ್‌ ಅವರೊಂದಿಗೆ ಪೋಗಟ್‌ ಪ್ರಶಸ್ತಿಗಾಗಿ ಸ್ಪರ್ಧೆ ನಡೆಸಬೇಕಿದೆ. 2018ರಲ್ಲಿ ಪೋಗಟ್‌ ಅಮೋಘ ಸಾಧನೆ ಮಾಡಿದ್ದರು. ಕಾಮನ್ವೆಲ್ತ್‌ ಮತ್ತು ಏಶ್ಯಾಡ್‌ನ‌ಲ್ಲಿ ಚಿನ್ನ ಗೆದ್ದ ಹಿರಿಮೆ ಇವರದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next