Advertisement

ಮತ್ತೆ ಶುರುವಾಯ್ತು ವಿನಯ್‌ ರಾಜಕುಮಾರ್ ‘ಗ್ರಾಮಾಯಣ’

02:42 PM Jun 05, 2023 | Team Udayavani |

ವಿನಯ್‌ ರಾಜ್‌ಕುಮಾರ್‌ “ಗ್ರಾಮಾಯಣ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದ ವಿಚಾರ ನಿಮಗೆ ಗೊತ್ತೇ ಇದೆ. ಪಕ್ಕಾ ಹಳ್ಳಿ ಹಿನ್ನೆಲೆಯ ಕಥೆ ಹೊಂದಿದ್ದ ಈ ಸಿನಿಮಾದ ಒಂದಷ್ಟು ಚಿತ್ರೀಕರಣ ಕೂಡಾ ಮುಗಿದಿತ್ತು. ದೇವನೂರು ಚಂದ್ರು ಈ ಸಿನಿಮಾದ ನಿರ್ದೇಶಕರು. ಆದರೆ, ಕೋವಿಡ್‌ ಸಮಯದಲ್ಲಿ ಈ ಚಿತ್ರದ ನಿರ್ಮಾಪಕರು ತೀರಿಕೊಳ್ಳುವ ಮೂಲಕ ಸಿನಿಮಾವೂ ಅರ್ಧಕ್ಕೆ ನಿಂತು ಹೋಯಿತು. ಈಗ ಮತ್ತೆ ಆ ಚಿತ್ರ ಆರಂಭವಾಗುತ್ತಿದೆ. ಹಾಗಂತ ಅರ್ಧದಿಂದ ಮತ್ತೆ ಶುರುವಾಗುತ್ತಿಲ್ಲ. ಹೊಸದಾಗಿ, ಹೊಸ ಮುಹೂರ್ತ ದೊಂದಿಗೆ ಸಿನಿಮಾ ಆರಂಭವಾಗುತ್ತಿದೆ. ಈ ಬಾರಿ ಸಿನಿಮಾವನ್ನು ನಿರ್ಮಿಸುತ್ತಿರುವುದು ಲಹರಿ ಫಿಲಂಸ್‌ ಹಾಗೂ ವೀನಸ್‌ ಎಂಟರ್‌ಟೈನರ್.

Advertisement

ಈಗಾಗಲೇ ಈ ಬ್ಯಾನರ್‌ ಜೊತೆಯಾಗಿ ಉಪೇಂದ್ರ ಅವರ ನಟನೆ, ನಿರ್ದೆಶನದ “ಯು-ಐ’ ಚಿತ್ರವನ್ನು ನಿರ್ಮಿಸುತ್ತಿದೆ. ಈಗ ಎರಡನೇ ಸಿನಿಮಾವಾಗಿ “ಗ್ರಾಮಾಯಣ’ ಆರಂಭಿಸುತ್ತಿದೆ. ಈ ಚಿತ್ರದ ಮುಹೂರ್ತ ಗುರುವಾರ ಬಂಡೆಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ.

ಈ ಕುರಿತು ಮಾತನಾಡುವ ವೀನಸ್‌ ಎಂಟರ್‌ಟೈನರ್ನ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌, “ಗ್ರಾಮಾಯಣ ಸಿನಿಮಾವನ್ನು ಸಂಪೂರ್ಣವಾಗಿ ಹೊಸದಾಗಿ ಮಾಡುತ್ತಿದ್ದೇವೆ. ಚಿತ್ರದ ಮುಹೂರ್ತ ಗುರುವಾರ ನಡೆಯಲಿದೆ’ ಎನ್ನುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next