Advertisement

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

11:23 AM Jul 19, 2024 | Team Udayavani |

ರಾಜಶೇಖರ್‌ ಅವರು ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ “ಬ್ಯಾಕ್‌ ಬೆಂಚರ್ಸ್‌’ ಚಿತ್ರ ಇಂದು ತೆರೆಕಾಣುತ್ತಿದೆ.

Advertisement

ಚಿತ್ರದ ಬಗ್ಗೆ ಮಾತನಾಡುವ ರಾಜಶೇಖರ್‌, “ನಾನು ಸಾಕಷ್ಟು ಸೋಲು ನೋಡಿದ್ದೇನೆ. ನನಗೆ ಸೋಲು ಹೊಸತಲ್ಲ. ಈ ಚಿತ್ರ ಈ ಹುಡುಗರಿಗಾಗಿ ಗೆಲ್ಲಬೇಕು. ಏಕೆಂದರೆ, ಈ ಹುಡುಗರು ಕಳೆದ ಮೂರು ವರ್ಷಗಳನ್ನು ಈ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ, ಇದು ಅವರಿಗಾದರೂ ಗೆಲ್ಲಲೇಬೇಕು’ ಎಂದರು.

ಈ ಚಿತ್ರ ರಂಜನೆ ಮತ್ತು ವಿನೋದಕ್ಕಾಗಿಯಷ್ಟೇ ಅಲ್ಲ. ಇದರಲ್ಲಿ ಹದಿಹರೆಯದವರ ತವಕ ಮತ್ತು ತಾಕಲಾಟಗಳನ್ನು ಕಟ್ಟಿಕೊಡಲಾಗಿದೆ. ಇವತ್ತಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ವ್ಯವಸ್ಥೆ ಇದೆಲ್ಲದರ ಕುರಿತಾದ ಒಂದು ಕಥೆ ಇದು. ರಾಜಶೇಖರ್‌ ನನ್ನ ಸಹಪಾಠಿ. ಈ ಚಿತ್ರವನ್ನು ಕೇವಲ ಅವರಿಗಾಗಿ ಮಾಡಿದ್ದೇನೆ. ಇನ್ನು, ಈ ಹುಡುಗರು ಕನಿಷ್ಠ ಮೂರು ವರ್ಷಗಳಿಂದ ಈ ಚಿತ್ರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಇದು ಸುಲಭವಾಗಿ ತಯಾರಾದಂತ ಚಿತ್ರವಲ್ಲ ಎಂದು ನಟ ಸುಚೇಂದ್ರ ಪ್ರಸಾದ್‌ ತಿಳಿಸಿದರು.

ಚಿತ್ರದಲ್ಲಿ ರಂಜನ್‌, ಜತಿನ್‌ ಆರ್ಯನ್‌, ಆಕಾಶ್‌ ಎಂ.ಪಿ, ಶಶಾಂಕ್‌ ಸಿಂಹ, ಸುಚೇಂದ್ರ ಪ್ರಸಾದ್‌, ಅರವಿಂದ್‌ ಕುಪ್ಲಿಕರ್‌, ಮಾನ್ಯ ಗೌಡ, ಕುಂಕುಮ್‌, ಅನುಷಾ ಸುರೇಶ್‌, ವಿಯೋಮಿ ವನಿತಾ, ಮನೋಜ್‌ ಶೆಟ್ಟಿ, ನಮಿತಾ ಗೌಡ, ವಿಕಾಸ್‌, ರನ್ನ, ವಿಜಯ್‌ ಪ್ರಸಾದ್‌, ಚತುರ್ಥಿ ರಾಜ್, ಗೌರವ್‌ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next