Advertisement

Vinay Kumar Sorake ಅಭಿವೃದ್ಧಿ ವಿಚಾರದಲ್ಲಿ ಕಾಪು ಶಾಸಕರಿಗೆ ಪೂರ್ಣ ಸಹಕಾರ ನೀಡಲು ಸಿದ್ಧ

01:48 AM Aug 08, 2024 | Team Udayavani |

ಕಾಪು: ಶಾಸಕ, ಸಂಸದ, ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇನೆ. ನಗರಾಭಿ ವೃದ್ಧಿ ಸಚಿವನಾಗಿ ಅದುವರೆಗೆ ಕೇವಲ ವಿಧಾನಸಭಾ ಕ್ಷೇತ್ರವಾಗಿ ಗುರುತಿಸಲ್ಪಡುತ್ತಿದ್ದ ಕಾಪುವನ್ನು ಪುರಸಭೆಯನ್ನಾಗಿ, ಬಳಿಕ ತಾಲೂಕು ಆಗಿ ಪರಿವರ್ತಿಸಿದ್ದು ತಾಲೂಕು ಕೇಂದ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಅನುದಾನವನ್ನು ಜೋಡಿಸಿ ಕೊಟ್ಟಿರುವ ತೃಪ್ತಿ ನನಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ತಿಳಿಸಿದರು.

Advertisement

ಕಾಪು ಪ್ರಸ್‌ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪುವಿನಲ್ಲಿ ಕಾಣುತ್ತಿರುವ ಪುರಸಭಾ ಕಟ್ಟಡ, ಆಡಳಿತ ಸೌಧ ಕಟ್ಟಡ, ಕುಡಿಯುವ ನೀರಿನ ಯೋಜನೆ, ಘನತ್ಯಾಜ್ಯ ವಿಲೇವಾರಿ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳು ನನ್ನ ಅವಧಿಯಲ್ಲಿ ಮಂಜೂರಾಗಿ ನಿರ್ಮಾಣಗೊಂಡಿವೆ.

ಪುರಸಭಾ ವ್ಯಾಪ್ತಿಯಲ್ಲಿ 500 ಮನೆ ನಿರ್ಮಾಣಕ್ಕಾಗಿ ಬಿಕ್ರಿಗುತ್ತು ಸಮೀಪದ ಜಾಗವನ್ನು ಗುರುತಿಸಿ, ಕಾಮಗಾರಿ ಟೆಂಡರ್‌ ಹಂತ ದವರೆಗೂ ಹೋಗಿತ್ತು. ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಅನಂತರದ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಹಾಲಿ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಗೆ ನಾನು ಅಡ್ಡಗಾಲು ಹಾಕುತ್ತಿದ್ದೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ.

ಅನುದಾನ ಬಿಡುಗಡೆಗೆ ನಾನೇ ತಡೆಯಾಗುತ್ತಿದ್ದೇನೆ ಎನ್ನುವ ಶಾಸಕರು ನನ್ನ ಪ್ರಭಾವವನ್ನು ಬಳಸಿಕೊಂಡು ಸರಕಾರದ ಬಳಿಯಿಂದ ಅನುದಾನ ತರಿಸಿಕೊಳ್ಳಲೂ ಪ್ರಯತ್ನಿಸಲಿ, ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ರಾಜಕೀಯ, ಅಧಿಕಾರ ಬಳಸಿಕೊಂಡು ಜನರ ಸೇವೆ ಮಾಡಿದ್ದೇನೆಯೇ ಹೊರತು ಅದನ್ನು ಜೀವನಕ್ಕೆ ಆಶ್ರಯ ಮಾಡಿಕೊಂಡಿಲ್ಲ. ಭೂಮಾಲಕರ ಕುಟುಂಬದಿಂದ ಬಂದಿರುವ ನನಗೆ ಮಾಜಿ ಸಂಸದ, ಶಾಸಕನ ನೆಲೆಯಲ್ಲಿ 80 ಸಾವಿರ ರೂ. ಪೆನ್ಶನ್‌ ಹಣ ಬರುತ್ತದೆ.

Advertisement

ಉಡುಪಿಯಲ್ಲಿ ಫ್ಲ್ಯಾಟ್‌ ಇದೆ. ನನಗೆ ಸೊರಕೆಯಲ್ಲಿ ಮತ್ತು ಪತ್ನಿಗೆ ಶಿರ್ತಾಡಿಯಲ್ಲಿ ದೊರಕಿದ ಆಸ್ತಿಯಿದೆ. ಇದನ್ನು ಹೊರತುಪಡಿಸಿ ಏನಾದರೂ ಆಸ್ತಿ ಮಾಡಿದ್ದರೆ ಶಾಸಕರು ದಾಖಲೆ ಬಹಿರಂಗಪಡಿಸಲಿ. ಈ ಬಗ್ಗೆ ಚರ್ಚೆಗೂ ನಾನು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪುರ್ಟಾರ್ಡೊ, ಉಡುಪಿ ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಶರ್ಪುದೀªನ್‌ ಶೇಖ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಶಾಂತಲತಾ ಶೆಟ್ಟಿ ಉಪಸ್ಥಿತರಿದ್ದರು.

ಬಿಜೆಪಿ – ಜೆಡಿಎಸ್‌ ಪಾದಯಾತ್ರೆಗೆ ಅರ್ಥವಿಲ್ಲ
ಮುಡಾ ಹಗರಣದ ಆರೋಪ ಕೇಳಿ ಬರುತ್ತಲೇ ಸರಕಾರ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಗೆ ಚಾಲನೆ ಕೊಟ್ಟಿದೆ. ಮುಡಾ ಸೈಟ್‌ ಹಂಚಿಕೆ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ನಡೆಸುತ್ತಿರುವ ಪಾದಯಾತ್ರೆಗೆ ಯಾವುದೇ ಅರ್ಥವಿಲ್ಲ. ವಿಪಕ್ಷಗಳು ಪಾದಯಾತ್ರೆ ಮೂಲಕ ಸರಕಾರದ ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿವೆ ಎಂದು ಸೊರಕೆ ಆರೋಪಿಸಿದರು.

ರಾಜ್ಯದ ಖಜಾನೆ ರಕ್ಷಣೆ ಹಾಗೂ ನೀರಿಗಾಗಿ ಕಾಂಗ್ರೆಸ್‌ ಪಾದಯಾತ್ರೆ ಮಾಡಿದೆ. ಆದರೆ 48 ಸೈಟ್‌ ಪಡೆದ ಕುಮಾರಸ್ವಾಮಿ, ಜೈಲಿಗೆ ಹೋದ ಯಡಿಯೂರಪ್ಪನವರೂ ಸೇರಿದಂತೆ ಜೈಲಿಗೆ ಹೋದ 13 ಮಂತ್ರಿಗಳು ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next