Advertisement

ಸೊರಕೆ ಮಾದರಿ: ವಂ|ಪೌಲ್‌ ರೇಗೋ

10:27 AM Jan 06, 2018 | Team Udayavani |

ಕಾಪು: ನಯ ವಿನಯಗಳ ಪ್ರತಿರೂಪವಾಗಿರುವ ಶಾಸಕ ವಿನಯ ಕುಮಾರ್‌ ಸೊರಕೆ ತಮ್ಮಜನ್ಮದಿನವನ್ನು ಸರಳವಾಗಿ, ದೇವರಿಗೆ ಅತಿ ಪ್ರಿಯರಾದ ವಿಶೇಷ ಮಕ್ಕಳ ಜತೆಗೆ ಆಚರಿಸಿಕೊಳ್ಳುವ ಮೂಲಕ ಮಾದರಿ ಯಾಗಿದ್ದಾರೆ ಎಂದು ಪಾಂಬೂರು ಚರ್ಚ್‌ ಧರ್ಮಗುರು ವಂ| ಪೌಲ್‌ ರೇಗೋ ಹೇಳಿದರು.

Advertisement

ಶುಕ್ರವಾರ ಪಡುಬೆಳ್ಳೆ ಪಾಂಬೂರಿನ ಮಾನಸ ವಿಶೇಷ ಮಕ್ಕಳ ವಸತಿ ಶಾಲೆ ಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಅಭಿಮಾನಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಪು ಶಾಸಕ ವಿನಯ್‌ ಕುಮಾರ್‌ ಸೊರಕೆ ಅವರ 63ನೇ ಹುಟ್ಟುಹಬ್ಬ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇವರ ಮಕ್ಕಳ ಜತೆ ಸಂಭ್ರಮ: ವಿನಯಕುಮಾರ್‌ ಸೊರಕೆ ಮಾತ ನಾಡಿ, ಮಾನಸ ಶಾಲೆಯ ಮಕ್ಕಳು ದೇವರ ಮಕ್ಕಳು. ಇಲ್ಲಿ ವಿಶೇಷ ಮಕ್ಕಳನ್ನು ದೇವರಂತೆ ಕಾಣುತ್ತಿದ್ದು, ಈ ಮಕ್ಕಳ ಬಗ್ಗೆ ಪ್ರತಿಯೊಬ್ಬರ ಮನಸ್ಸಿ ನಲ್ಲೂ ಇದೇ ರೀತಿಯ ಗೌರವಭಾವ ಮೂಡಲಿ ಎಂದು ಹಾರೈಸಿದರು.

ಜನಾಶೀರ್ವಾದದ ಫಲ: 2013ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಶಾಸಕನನ್ನಾಗಿ ಆರಿಸುವ ಮೂಲಕ ಕ್ಷೇತ್ರದ ಜನತೆ ಪುನರ್‌ಜನ್ಮ ನೀಡಿ ದ್ದಾರೆ. ಜನತೆಯ ಆಶೀರ್ವಾದಕ್ಕೆ ಪ್ರತಿ ಯಾಗಿ ಕ್ಷೇತ್ರದ ಅಭಿವೃದ್ಧಿಗೆ ನನ್ನಿಂದಾದ ಕೊಡುಗೆ ನೀಡುತ್ತಿದ್ದೇನೆ. ಇದು ಜನಪ್ರತಿನಿಧಿಯ ಕರ್ತವ್ಯ. ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಆಶೆಯಿದೆ. ಅದಕ್ಕೆ ಪೂರಕ ವಾಗಿ ಜನರು ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.

ಕೇಕ್‌ ಕತ್ತರಿಸಿ, ಮಾನಸ ಶಾಲೆಯ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಕೇಕ್‌ ಸವಿಯುಣಿಸಿ ಹುಟ್ಟುಹಬ್ಬ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ
ಹೆನ್ರಿ ಮಿನೇಜಸ್‌ ಅವರನ್ನು ಗೌರವಿಸ ಲಾಯಿತು. ಸಂಸ್ಥೆಯ ವತಿಯಿಂದ ಶಾಸಕ ಸೊರಕೆಯವರನ್ನು ಗೌರವಿಸಲಾಯಿತು.

Advertisement

ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿ.ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌, ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್‌ ಶೆಟ್ಟಿ, ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಕೋಟ್ಯಾನ್‌, ಉತ್ತರ ಬ್ಲಾಕ್‌ನ ಅಧ್ಯಕ್ಷ ಸುಧೀರ್‌ ಹೆಗ್ಡೆ ಶುಭಾಶಂಸನೆಗೈದರು. ಕಾಪು ನಗರ ಯೋಜನಾ ಪ್ರಾಧಿ ಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಭಾಸ್ಕರ್‌ ಪಡುಬಿದ್ರಿ, ಯುವ ಕಾಂಗ್ರೆಸ್‌ ಜಿಲ್ಲಾ ಧ್ಯಕ್ಷ ವಿಶ್ವಾಸ್‌ ಅಮೀನ್‌, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಕಾಪು ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯ ದರ್ಶಿ ವಿನಯ ಬಲ್ಲಾಳ್‌, ಮಾನಸ ಸಂಸ್ಥೆಯ ಉಪಾಧ್ಯಕ್ಷ ವಲೇರಿಯನ್‌ ಫೆರ್ನಾಂಡಿಸ್‌, ಮಾಜಿ ಅಧ್ಯಕ್ಷೆ ರೆಮಿ ಡಿಯಾ ಡಿ’ಸೋಜಾ, ಟ್ರಸ್ಟಿ ಎಲಾಯ್‌ ಕಿರಣ್‌ ಕ್ರಾಸ್ತಾ, ಕಾಪು ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಪು ಬ್ಲಾಕ್‌ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ದೀಪಕ್‌ ಕುಮಾರ್‌ ಎರ್ಮಾಳ್‌ ಸ್ವಾಗತಿಸಿದರು. ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್‌ ವಂದಿಸಿದರು. ಸಂಸ್ಥೆಯ ಶಿಕ್ಷಕಿ ಹೇಮಲತಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next