Advertisement

“ವಿನಯ ಹೆಗ್ಡೆ ಸಾಧನೆ, ಬದುಕು ಪ್ರೇರಣದಾಯಿ’

01:02 AM Apr 15, 2019 | sudhir |

ಮಂಗಳೂರು: ಉದ್ಯಮಿ, ಶಿಕ್ಷಣತಜ್ಞ ನಿಟ್ಟೆ ವಿನಯ ಹೆಗ್ಡೆ ಅವರ ಬದುಕು ಹಾಗೂ ಸಾಧನೆ ಸರ್ವರಿಗೂ ಪ್ರೇರಣಾದಾಯಕವಾಗಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ ಹೇಳಿದರು.
ನಗರದ ಹೊಟೇಲ್‌ ಗೇಟ್‌ವೇಯ ಸಭಾಂಗಣದಲ್ಲಿ ರವಿವಾರ ಜರಗಿದ ಡಾ| ಎಂ. ಶಾಂತಾರಾಮ ಶೆಟ್ಟಿ ಅವರು ಬರೆದ “ಮೆನ್‌ ಅಮಾಂಗ್‌ಸ್ಟ್‌ ಆಲ್‌ ಮೆನ್‌ ನಿಟ್ಟೆ ವಿನಯ ಹೆಗ್ಡೆ’ ಕೃತಿಯನ್ನು ಅನಾವರಣಗೊಳಿಸಿ ಅವರು ಮಾತ ನಾಡಿದರು.

Advertisement

ವಿನಯ ಹೆಗ್ಡೆ ಅವರು ಅವರು ಕಠಿನ ಪರಿಶ್ರಮ, ಬದ್ಧತೆ, ದೂರದರ್ಶಿತ್ವ
ದಿಂದ ತನ್ನ ಬದುಕನ್ನು ಬಂಗಾರವಾಗಿಸಿ ಕೊಂಡವರು ಎಂದರು.
ಸಂತ ಅಲೋಶಿಯಸ್‌ ಕಾಲೇಜಿನ ಎಐಎಂಐಟಿ ನಿರ್ದೇಶಕ ಫಾ| ಡೆಂಜಿಲ್‌ ಲೋಬೋ ಅಭಿನಂದನ ಭಾಷಣ ಮಾಡಿದರು.

ಧನ್ಯತಾ ಭಾವ: ವಿನಯ ಹೆಗ್ಡೆ ಸವಾಲುಗಳು ನಮ್ಮ ಮುಂದೆ ಇದ್ದರೆ
ಜೀವನದಲ್ಲಿ ಬೆಳೆಯಲು, ಸಾಧನೆ ಮಾಡಲು ಸಾಧ್ಯ. ಹಾಗೆಯೇ ಜೀವನದಲ್ಲಿ ನನಗೂ ಸವಾಲುಗಳು ಎದುರಾದವು. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಮಗನಾದ ನನ್ನ ವೃತ್ತಿ ಬದುಕು ಖಾಸಗಿ ಸಂಸ್ಥೆಯಲ್ಲಿ 150 ರೂ. ವೇತನದ
ನೌಕರಿಯೊಂದಿಗೆ ಪ್ರಾರಂಭವಾಯಿತು. ಮುಂದಕ್ಕೆ ಉದ್ಯಮಿಯಾಗಿ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆದು ಬಂದೆ. ಸಾಧನೆಯಲ್ಲಿ ನನ್ನ ಪಾತ್ರದ ಜತೆಗೆ ತಂಡ ಪ್ರಯತ್ನವೂ ಇದೆ ಎಂದರು.

ಡಾ| ಶಾಂತಾರಾಮ ಶೆಟ್ಟಿ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿನಯ ಹೆಗ್ಡೆ ಅವರ 80ನೇ ಹುಟ್ಟುಹಬ್ಬ ಹಾಗೂ ಡಾ| ಶಾಂತಾರಾಮ ಶೆಟ್ಟಿ ಅವರ 79ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಮಾಹೆ ಸಹಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ವಿನಯ ಹೆಗ್ಡೆ ಅವರನ್ನು
ಅಭಿನಂದಿಸಿದರು. ಪ್ರೊ| ಎನ್‌.ಆರ್‌. ಶೆಟ್ಟಿ, ಡಾ| ದಿನೇಶ್ಚಂದ್ರ ಹೆಗ್ಡೆ ಉಪಸ್ಥಿತರಿದ್ದರು. ವಿಶಾಲ ಹೆಗ್ಡೆ ಕೃತಜ್ಞತೆ ಸಲ್ಲಿಸಿದರು. ಡಾ| ಅಜಿತ್‌ ವಂದಿಸಿದರು. ರೆಜಿನಾ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next