Advertisement

ವಿನಯ್ ಚಂದ್ರ ಅವರಿಂದ ಸುಶಾಂತ್ ಸಿಂಗ್ ಕುರಿತಾದ ಹಿಂದಿ ಆಲ್ಬಂ

10:28 AM Feb 18, 2021 | Team Udayavani |

ಸಂಗೀತ ನಿರ್ದೇಶಕ ವಿನಯ್‌ ಚಂದ್ರ ಈಗ ಹಿಂದಿ ಆಲ್ಬಂವೊಂದನ್ನು ಮಾಡಿದ್ದಾರೆ. ಈ ಮೂಲಕ ಬಾಲಿವುಡ್‌ನ‌ತ್ತ ಮುಖ ಮಾಡುತ್ತಿದ್ದಾರೆ.

Advertisement

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಕುರಿತಾದ “ಅಲ್ವಿದಾ’ ಎಂಬ ಆಲ್ಬಂ ಮಾಡಿದ್ದು, ಇದಕ್ಕೆ ಸಂಗೀತ ನೀಡಿ ಹಾಡಿದ್ದಾರೆ. ಜೊತೆಗೆ ಆಲ್ಬಂನಲ್ಲಿ ವಿನಯ್‌ ಚಂದ್ರ ಅವರು ಕಾಣಿಸಿಕೊಂಡಿದ್ದಾರೆ.

ಈ ಆಲ್ಬಂ ಅನ್ನು ಪ್ಲೇ ಟು ಮಿ ಹೊರತಂದಿದೆ. ಬಾಲಿವುಡ್‌ನ‌ಲ್ಲಿ ನೆಲೆ ನಿಲ್ಲಲು ಸುಶಾಂತ್‌ ಅವರ ಶ್ರಮ ಹೇಗಿತ್ತು ಎಂಬುದನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಅವರ ಬಾಲ್ಯದ ಫೋಟೋಗಳಿಂದ ಹಿಡಿದ ಇತ್ತೀಚಿನ ಫೋಟೋಗಳನ್ನು ಮೂರು ನಿಮಿಷದ ವಿಡಿಯೋದಲ್ಲಿ ನೀಡಲಾಗಿದೆ.

ಇದನ್ನೂ ಓದಿ:ಕನ್ನಡ ಸಿನಿಮಾ ನಟನೆ ಬಗ್ಗೆ ಸ್ಪಷ್ಟನೆ ನೀಡಿದ ಶ್ರುತಿ ಹಾಸನ್‌

ಕೊನೆಗೆ ತಮ್ಮ ಈ ಸಿನಿಮಾ ಪಯಣದಲ್ಲಿ ಕೈಹಿಡಿದವರಿಗೆ, ಆಸರೆಯಾದವರಿಗೆ ಥ್ಯಾಂಕ್ಸ್‌ ಹೇಳಿ ಹೊರಡುವ ಪರಿಕಲ್ಪನೆಯಲ್ಲಿ ಈ ಆಲ್ಬಂ ಮಾಡಲಾಗಿದೆ. ಪ್ಲೇ ಟು ಮಿ ಸಿಇಓ ಕೀರ್ತಿ ವಾಸನ್‌ ಸುಬ್ರಮಣ್ಯಂ ಈ ಆಲ್ಬಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಜೊತೆಗೆ ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್‌, ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು, ನಟಿ ರೂಪಿಕಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು

Advertisement

Udayavani is now on Telegram. Click here to join our channel and stay updated with the latest news.

Next