Advertisement

ಮಠಕ್ಕೆ ಜಮೀನು: ತಮಟೆ ಬಡಿದು ಕಿಡಿ

01:04 PM Sep 19, 2020 | Suhan S |

ನೆಲಮಂಗಲ: ಮಠಕ್ಕೆ ಮಂಜೂರು ಮಾಡಿರುವ ಜಾಗದಲ್ಲಿ ಸ್ಮಶಾನವಿದ್ದು ಗ್ರಾಮದ ಜನರ ಅನುಮತಿ ಇಲ್ಲದೆ ಮಂಜೂರು ಮಾಡಲಾಗಿದೆ ಎಂದು ತಾಲೂಕು ಕಚೇರಿ ಎದುರು ಯಲಚಗೆರೆ ಗ್ರಾಮಸ್ಥರು ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಯಲಚಗೆರೆ ಗ್ರಾಮದ ಪರಿಶಿಷ್ಟ ಜಾತಿ, ಪಂಗಡದ ಜನ ಸರ್ವೆ ನಂ 74ರಲ್ಲಿ ಮೃತರ ಅಂತ್ಯಕ್ರಿಯೆ ಮಾಡುತ್ತಿದ್ದು ಉಳಿದ ಜಾಗದಲ್ಲಿ ನಿವೇಶನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ನಡುವೆ ಅಧಿಕಾರಿಗಳು, ಏಕಾಏಕಿ ಸಿದ್ದಗಂಗಾ ಮಠಕ್ಕೆ 9.20 ಎಕರೆ ಜಮೀನು ಮಂಜೂರು ಮಾಡಿದ್ದಾರೆಂದು ದೂರಿದರು.

ತಮಟೆ ಬಡಿದು ಪ್ರತಿಭಟನೆ: ತಾಲೂಕು ಕಚೇರಿ ಎದುರು ಗ್ರಾಮದ 100ಕ್ಕೂ ಹೆಚ್ಚು ಜನ ಜಮಾಯಿಸಿ ತಮಟೆ ಬಡಿದು ತಹಶೀಲ್ದಾರ್‌ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ನಮಗೆ ಮನ್ನಣೆ ನೀಡದ ಅಧಿಕಾರಿಗಳು ಹಿರಿಯರ ಸಮಾಧಿಗಳಿರುವ ಜಾಗವನ್ನು ಮಠಕ್ಕೆ ನೀಡಿರುವುದು ಖಂಡನೀಯ. ನಾವು ರಾಜ್ಯಪಾಲರು ಹಾಗೂ ಸಿದ್ದಗಂಗಾಶ್ರೀಗಳಿಗೆ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದೇವೆಂದು ಗ್ರಾಮದ ಮುಖಂಡ ಬಸವರಾಜು ತಿಳಿಸಿದರು.

ಭೇಟಿ: ಗೋಮಾಳದಲ್ಲಿ ಗ್ರಾಮಸ್ಥರ ವಾಸ್ತವ್ಯ ಕುರಿತು ಮಾಹಿತಿ ಪಡೆದ ಕಂದಾಯ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆ ಸಿದ್ದಾರೆ. ಅಲ್ಲದೇ, ಜಾಗ ಮಂಜೂರು ಮಾಡಿರುವ ಸ್ಥಳದಲ್ಲಿ ಅಂಬೇಡ್ಕರ್‌ ಭಾವಚಿ ತ್ರವಿರುವ ನಾಮಫ‌ಲಕ ಹಾಕಲಾಗಿದೆ ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next