Advertisement

ನರೇಗಾದಿಂದ ಗ್ರಾಮಗಳ ಅಭಿವೃದ್ಧಿ

01:07 PM Sep 14, 2020 | Suhan S |

ಮಾಗಡಿ: ಈ ವರ್ಷ ಜಲಾನಯನ ಅಭಿವೃದ್ಧಿ ಯೋಜನೆಯಡಿ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಕೆರೆ- ಕಟ್ಟೆ ಗಳಲ್ಲಿ ಹೂಳು ತೆಗೆಸುವ ಮೂಲಕ ಗ್ರಾಮಗಳ ಅಭಿವೃದ್ಧಿಗಾಗಿ ನರೇಗಾ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ನೋಡಲ್‌ ಅಧಿಕಾರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಎಚ್‌.ಗಂಗಾಧರಯ್ಯ ತಿಳಿಸಿದರು.

Advertisement

ತಾಲೂಕಿನ ತಿಪ್ಪಸಂದ್ರ ಹೋಬಳಿ ಚಿಕ್ಕಮುದಿಗೆರೆ ಗ್ರಾಪಂ ಕಚೇರಿಯಲ್ಲಿ 2020-2021ನೇ ಸಾಲಿನ ಮೊದಲನೇ ಸುತ್ತಿನ ಸಾಮಾಜಿಕ ಲೆಕ್ಕ ತಪಾಸಣಾ ಸಭೆಯಲ್ಲಿ ನೋಡಲ್‌ ಅಧಿಕಾರಿಯಾಗಿ ಮಾತನಾಡಿದರು. ಈ ಯೋಜನೆಯಡಿ ರಸ್ತೆ, ಚರಂಡಿ, ಕೃಷಿ ಹೊಂಡ, ಕೈತೋಟ, ಬಚ್ಚಲು ಗುಂಡಿ ನಿರ್ಮಿಸಿಕೊಳ್ಳಲು ಸಹಾಯಧನ ಲಭಿಸುತ್ತದೆ. ಹೀಗಾಗಿ ಗ್ರಾಮಸ್ಥರೂ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಲೆಕ್ಕ ಪರಿಶೋಧಕ ನಾಗರಾಜು ಮಾತನಾಡಿ, ಕಳೆದ 6 ತಿಂಗಳ ಅವಧಿಯಲ್ಲಿ ನೆಡೆದಿರುವ ಕಾಮಗಾರಿಗಳ ಬಗ್ಗೆ ಆಕ್ಷೇ ಪಣೆಗಳಿದ್ದರೆ ಸಭೆಯಲ್ಲಿ ತಿಳಿಸಬಹುದು. ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 117 ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಎಂ.ಬಿ ಬರೆಯದ ಕಾರಣದಿಂದ ಕಾಮಗಾರಿ ನಡೆದಿರುವ ಸ್ಥಳ ಪರಿಶೀಲನೆ ಮಾಡಿಲ್ಲ, ನರೇಗಾ ಯೋಜನೆಯಡಿ ಬದು ನಿರ್ಮಾಣ, ಜಮೀನು ಸಮತಟ್ಟು, ಅಣಬೆ ಬೇಸಾಯ, ಶೆಡ್‌ ನಿರ್ಮಿಸಿಕೊಳ್ಳಲು ಗ್ರಾಮಸ್ಥರಿಗೆ ಸಹಾಯಧನ ದೊರೆಯುತ್ತದೆ ಎಂದು ತಿಳಿಸಿದರು.

ಗ್ರಾಪಂ ಆಡಳಿತಾಧಿಕಾರಿ ಎನ್‌.ಬಿ.ನಾಗರಾಜು, ಮಾಜಿ ಅಧ್ಯಕ್ಷೆ ಪ್ರಮೀಳಾ, ಪಿಡಿಒ ಕೆ.ನರಸಿಂಹಯ್ಯ, ನೌಕರರಾದ ಲೋಕೇಶ್‌, ರಂಗಸ್ವಾಮಯ್ಯ, ಶ್ರೀನಿವಾಸ್‌, ಹನುಮಂತ ರಾಜು, ಅಂಜನಮೂರ್ತಿ, ಆರೋಗ್ಯ ಇಲಾಖೆ ಸಾವಿತ್ರಮ್ಮ, ಪಶು ಇಲಾಖೆ ಡಾ.ಮಂಜುನಾಥ್‌, ಯಶೋಧಾ, ಅಂಗನ ವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next