Advertisement

ಸೇತುವೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

12:45 PM Sep 07, 2020 | Suhan S |

ರಾಮನಗರ: ತಾಲೂಕಿನ ನಾಗೋಹಳ್ಳಿ- ಕೈಲಾಂಚ ಗ್ರಾಮಗಳ ನಡುವೆ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ಮಳೆ ನೀರು ನಿಲ್ಲುತ್ತಿದ್ದು, ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ನೀರು ನಿಂತು ಸೇತುವೆಗೆ ಧಕ್ಕೆಯಾಗಲಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಆ ಭಾಗದ ಗ್ರಾಮಸ್ಥರು ದಿಢೀರ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

20 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಿಸಿದೆ. ಸೂಕ್ತ ನಿರ್ವಹಣೆ ಇಲ್ಲದೇ ಸೇತುವೆ ಶಿಥಿಲವಾಗುತ್ತಿದೆ. ಸೇತುವೆ ಎರಡೂ ಬದಿ ಯಲ್ಲಿರುವ ಕೈಹಿಡಿಗಳು ಮುರಿದು ಹಾಳಾಗಿವೆ. ಸಿಮೆಂಟ್‌ ಕಿತ್ತು ಹೋಗಿ ಕಬ್ಬಿಣ ರಾಡುಗಳು ಹೊರ ಚಾಚಿವೆ. ಈ ಬಗ್ಗೆ ಇಲಾಖೆಯ ಗಮನ ಸೆಳೆದರೂ ಉಪಯೋಗವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ನಾಗೋಹಳ್ಳಿ, ವಡ್ಡರಹಳ್ಳಿ, ಚನ್ನಿಗನದೊಡ್ಡಿ, ಗುನ್ನೂರು ಗ್ರಾಮಗಳ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ಕನಕಪುರ, ಚನ್ನಪಟ್ಟಣ, ರಾಮನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೂ ಆಗಿದೆ. ಅಧಿಕಾರಿಗಳು ಕೂಡಲೇ ಈ ಸೇತುವೆಯ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಎನ್‌.ಪಿ.ಶಶಿಕುಮಾರ್‌, ರಾಮಕೃಷ್ಣ, ಶಿವಕುಮಾರ್‌, ಆರ್‌. ರುದ್ರೇಶ್‌, ಎನ್‌.ಎಸ್‌.ಕೆಂಪರಾಜು, ಎನ್‌.ಎಸ್‌.ಕುಮಾರ್‌, ಎನ್‌.ಸಿ.ಚಂದ್ರು, ಎನ್‌.ಎಸ್‌. ಶಿವಲಿಂಗಯ್ಯ, ಕೆ.ಪ್ರಭು ಮುಂತಾದವರು ಆಗ್ರಹಿಸಿದ್ದಾರೆ.

………………………………………………………………………………………………………………………………………………………

ಆದಿಜಾಂಬವ ಸಮಾಜದ ಜಾಗೃತಿಗೆ ಶ್ರಮ :

Advertisement

ಮಾಗಡಿ: ಆದಿಜಾಂಬುವ ಜನಾಂಗವನ್ನು ಒಳಮೀಸಲಾತಿಯಡಿ ತರಲು ಸಂಘಟನಾತ್ಮಕವಾಗಿ ಹೋರಾಟ ಮಾಡಿದ ಕ್ರಿಯಾಶೀಲ ವ್ಯಕ್ತಿ ಆದಿಜಾಂಬವ ಜಿಲ್ಲಾಧ್ಯಕ್ಷ ಶಶಿಧರ್‌ ನಿಧನದಿಂದ ಉತ್ತಮ ಹೋರಾಟಗಾರರನ್ನು ಕಳೆದುಕೊಂಡಿದ್ದೇವೆ ಎಂದು ತಾಲೂಕು ಗೌರವಾಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ವೆಂಕಟೇಶ್‌ ತಿಳಿಸಿದರು.

ಪಟ್ಟಣದ ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷ ಶಶಿಧರ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಆದಿಜಾಂಬವ ಸಮಾಜವನ್ನು ಸಂಘಟ ನಾತ್ಮಕವಾಗಿ ಜಾಗೃತಿಗೊಳಿಸುವಲ್ಲಿ ಶ್ರಮಿಸಿದ್ದರು ಎಂದರು.

ಜಿಲ್ಲಾ ಗೌರವಾಧ್ಯಕ್ಷ ದೊಡ್ಡಯ್ಯ ಮಾತನಾಡಿ, ಶಶಿಧರ್‌ ಅವರು ತಳಸಮುದಾಯವನ್ನು ಒಗ್ಗೂಡಿಸಲು ಹಾಗೂ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದರು. ಅವರ ಕನಸನ್ನು ನನಸು ಮಾಡುವ ಮೂಲಕ ಸಾಕಾರಗೊಳಿಸೋಣ ಎಂದರು. ಸಂಘದ ಉಪಾಧ್ಯಕ್ಷ ರಾಮಕೃಷ್ಣಪ್ಪ, ಆದಿಜಾಂಬುವ ಸಂಘದ ತಾಲೂಕು ಅಧ್ಯಕ್ಷ ಆನಂದ್‌, ಉಪಾಧ್ಯಕ್ಷ ತಟವಾಳ್‌ ಪ್ರಕಾಶ್‌, ನಾಗರಾಜು ಅವರು ದಿ.ಶಶಿಧರ್‌ ಅವರ ಒಡನಾಟ ಕುರಿತು ಕಂಬನಿ ಮಿಡಿದರು. ಜಿಲ್ಲಾ ನಿರ್ದೇಶಕ ನಾಗರಾಜು, ಮುರಳಿ, ಗೋಪಾಲ್‌, ಕುಮಾರ್‌, ಜಿಲ್ಲಾ ಸಂಚಾಲಕ ಗುಡ್ಡಹಳ್ಳಿ ಮೂರ್ತಿ, ಶ್ರೀನಿವಾಸ್‌, ಶಿವಲಿಂಗಯ್ಯ, ರವಿಕುಮಾರ್‌, ಮೋಹನ್‌ಕುಮಾರ್‌ ಬೆಳಗುಂಬ ವಿಶ್ವನಾಥ್‌, ರಂಗಪ್ಪ, ವಿನ ಯ್‌, ಮೂರ್ತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next