ಚಿಕ್ಕಮಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಕಾರಣದಿಂದ ಬಿಗಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಜನರು ಯಾರೂ ಅನಗತ್ಯವಾಗಿ ಓಡಾಡುವಂತಿಲ್ಲ ಎಂದು ನಿಯಮ ಮಾಡಲಾಗಿದೆ. ನಿಯಮ ಮೀರಿದವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಕಾಫಿನಾಡು ಚಿಕ್ಕಮಗಳೂರಿನ ಅರಣ್ಯಾಧಿಕಾರಿಗಳಿಗೆ ಮಾತ್ರ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲವೇ ಎಂಬ ಅನುಮಾನ ಜನತೆಗೆ ಕಾಡುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಂತವೇರಿ ಬಳಿ ಮೋಜು ಮಸ್ತಿಗೆಂದು ಹತ್ತಾರು ವಾಹನಗಳಲ್ಲಿ ತೆರಳುತ್ತಿದ್ದ ಅರಣ್ಯಾಧಿಕಾರಿಗಳನ್ನು ಗುರುವಾರ ಜನರು ತಡೆದು ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ.
ಇದನ್ನೂ ಓದಿ:ಶೃಂಗೇರಿ ತಾಲೂಕು ಕಚೇರಿಯಲ್ಲೇ ತಹಶೀಲ್ದಾರ್ ಬರ್ತ್ ಡೇ ಸೆಲಬ್ರೇಷನ್: ವಿಡಿಯೋ ವೈರಲ್
ಚಿಕ್ಕಮಗಳೂರಿನಿಂದ ಸಂತವೇರಿ ಸಮೀಪದ “ಗೇಮ್ ಫಾರೆಸ್ಟ್” ಗೆ ಹಿರಿಯ ಅಧಿಕಾರಿಗಳ ತಂಡ ಹೊರಟಿತ್ತು. ಸಂತವೇರಿ ಗ್ರಾಮದ ಬಳಿ ಕಾರು-ಜೀಪುಗಳನ್ನು ತಡೆದ ಗ್ರಾಮಸ್ಥರು, ಕೊರೊನಾ ಸಮಯದಲ್ಲಿ ನಿಮಗೆ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮಸ್ಥರು ಘೇರಾವ್ ಹಾಕಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾರಿಕಾಣದೇ ವಾಪಸಾಗಿದ್ದರೆ.