Advertisement

ಅವೈಜ್ಞಾನಿಕ ರಸ್ತೆ ವಿಭಜಕ ತೆರವಿಗೆ ಗ್ರಾಮಸ್ಥರ ಆಗ್ರಹ

12:23 PM Mar 07, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆ ವೃತ್ತದಲ್ಲಿ ಅವೈಜ್ಞಾನಿಕ ರಸ್ತೆ ತಿರುವಿನಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ರಸ್ತೆ ಉಬ್ಬುಗಳನ್ನು ಹಾಕುವುದು ಸೇರಿದಂತೆ ಇಲ್ಲಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ, ಕಂಟನಕುಂಟೆ, ಸುತ್ತಲಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕಂಟನಕುಂಟೆ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮುಖಂಡ ಕೆ.ಎಂ.ಕೃಷ್ಣಮೂರ್ತಿ ಮಾತನಾಡಿ, ಬೆಂಗಳೂರು-ಹಿಂದೂಪುರ ರಾಜ್ಯ ಹೆ¨ªಾರಿಯ ಕಂಟನಕುಂಟೆ ವೃತ್ತದಲ್ಲಿಯೇ ರಸ್ತೆ ವಿಭಜಕ ಕೊನೆಗೊಂಡು, ಗೌರಿಬಿದನೂರು ರಸ್ತೆ ಕಡೆ ರಸ್ತೆ ವಿಭಜಕ ನಿರ್ಮಿಸಿಲ್ಲ. ಇದರಿಂದ ರಸ್ತೆ ಕಿರಿದಾಗಿದೆ. ಹೆದ್ದಾರಿಯಾದ್ದರಿಂದ ವಾಹನಗಳು ಅತಿ ವೇಗವಾಗಿ ಚಲಿಸುತ್ತಿದ್ದು, ರಸ್ತೆ ಅಪಘಾತಗಳಾಗಿ ಸಾವು-ನೋವುಗಳಾಗುತ್ತಿವೆ. ರಸ್ತೆಯ ಆಸುಪಾಸಿನಲ್ಲಿ ಶಾಲೆಗಳು, ಹಾಲಿನ ಡೇರಿ, ಬ್ಯಾಂಕ್‌, ವಾಣಿಜ್ಯ ಮಳಿಗೆಗಳು ಇರುವುದರಿಂದ ಜನಸಂದಣಿ ಹೆಚ್ಚಾಗಿದೆ. ಘಾಟಿ ರಸ್ತೆಗೆ ಅವೈಜ್ಞಾನಿಕ ತಿರುವು ನಿರ್ಮಿಸಿರುವುದರಿಂದ ಅಪಘಾತಗಳು ಹೆಚ್ಚಾಗಿವೆ ಎಂದು ದೂರಿದರು.

ಹೋರಾಟದ ಎಚ್ಚರಿಕೆ: ಕಂಟನಕುಂಟೆ ಗ್ರಾಪಂ ಅಧ್ಯಕ್ಷರಾದ ಶೋಭಾ ಮಾತನಾಡಿ, ಇಲ್ಲಿ ಬಹಳಷ್ಟು ಅಪಘಾತಗಳಾಗಿದ್ದು, ಒಂದು ತಿಂಗಳÇÉೇ ಮೂರಕ್ಕೂ ಹೆಚ್ಚು ಸಾವು ಸಂಭವಿಸಿದೆ. ಪ್ರಸಿದ್ಧ ಘಾಟಿ ಕ್ಷೇತ್ರಕ್ಕೆ ಇಲ್ಲಿಂದಲೇ ರಸ್ತೆ ತಿರುವುಪಡೆಯಬೇಕಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಗ್ರಾಪಂನಿಂದ ಮನವಿ ಮಾಡಲಾಗಿದ್ದು, ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತೀವ್ರಹೋರಾಟ ನಡೆಸಬೇಕಾಗುತ್ತದೆ ಎಂದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಎಇಇ ಪುಟ್ಟಪ್ಪ ಮಾತನಾಡಿ, ಇಲ್ಲಿನ ರಸ್ತೆಯ ನ್ಯೂನತೆಗಳನ್ನು ಪರಿಶೀಲಿಸಲಾಗುವುದು. ಗ್ರಾಮಸ್ಥರ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮಾಂತರ ಪೊಲೀಸ್‌ ಠಾಣೆಯ ಸಬ್‌ ಇನ್‌ Õಪೆಕ್ಟರ್‌ ಡಿ.ಮಂಜುನಾಥ್‌ ಮಾತನಾಡಿ, ಇಲ್ಲಿ ನಡೆದಿರುವ ಅಪಘಾತಗಳು ಹಾಗೂ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸುವ ಕುರಿತಂತೆ ಪೊಲೀಸ್‌ ಇಲಾಖೆಯಿಂದ ಸಂಬಂಧಪಟ್ಟವರಿಗೆ ವರದಿ ನೀಡಲಾಗುವುದು ಎಂದರು. ರಸ್ತೆ ತಡೆಯಿಂದ ಹೆದ್ದಾರಿಯಲ್ಲಿ ವಾಹನಗಳು ಕೆಲ ಕಾಲಸಾಲುಗಟ್ಟಿ ನಿಂತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next