Advertisement

ಪಿಡಿಒ ವರ್ಗಾವಣೆಗೆ ಗ್ರಾಮಸ್ಥರ ಆಗ್ರಹ

01:52 PM Sep 01, 2019 | Team Udayavani |

ಕೊರಟಗೆರೆ: ಬೇಜವಾಬ್ದಾರಿ ಪಿಡಿಒ ವರ್ಗಾವಣೆಗೆ ಆಗ್ರಹಿಸಿ ಗ್ರಾಮಸ್ಥರು ಶನಿವಾರ ಚನ್ನರಾಯನ ದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ಕಚೇರಿ ಸಮಯದಲ್ಲಿ ಪಿಡಿಒ ಮಂಜಮ್ಮ ಮೊಬೈಲ್ನಲ್ಲಿ ಕಾಲ ಕಳೆಯುತ್ತಾರೆ. ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಚೇರಿಗೆ ಗೈರಾಗುತ್ತಾರೆ. ಈ ಬಗ್ಗೆ ಕೇಳಿದರೆ ‘ನೀವು ಯಾರು ನಮ್ಮನ್ನು ಕೇಳ್ಳೋಕೆ’ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಟ್ಟಿ ಅಗ್ರಹಾರ ಗ್ರಾಮದ ಯುವಕ ವೆಂಕಟೇಶ್‌ ಮಾತನಾಡಿ, ಕಚೇರಿಗೆ ಬಂದು ಸಹಿ ಹಾಕಿ ಹೊರಟು ಹೋಗುತ್ತಾರೆ. ನಾವು ಪ್ರಶ್ನಿಸಿದರೆ ತಾಪಂನಲ್ಲಿ ಸಭೆ ಇದೆ ಎಂದು ಸಬೂಬು ಹೇಳುತ್ತಾರೆ. ಇಂತಹ ಪಿಡಿಒ ನಮಗೆ ಬೇಡ. ತಕ್ಷಣ ಇವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಅಂಗವಿಕಲ ಶ್ರೀನಿವಾಸ್‌ ಮಾತನಾಡಿ, ಐದು ದಿನದಿಂದ ಬೀದಿ ವ್ಯಾಪಾರಕ್ಕಾಗಿ ಅರ್ಜಿ ಹಾಕಲು ಅಲೆದಾಡಿದ್ದೇನೆ. ಮನವಿ ನೀಡಿದರೂ ಪಿಡಿಒ ಗಮನಿಸಲಿಲ್ಲ ಎಂದು ಆರೋಪಿಸಿದರು.

ಜಂಪೇನಹಳ್ಳಿ ಗ್ರಾಮಸ್ಥ ಶಶಿಕುಮಾರ್‌ ಮಾತನಾಡಿ, ಯಾವ ದಿನ ಬಂದರೂ ಪಿಡಿಒ ಗ್ರಾಪಂನಲ್ಲಿ ಇರಲ್ಲ. ಫೋನ್‌ ಮಾಡಿ ಕೇಳಿದರೆ ರಜೆ ಇದ್ದೇನೆ ಎನ್ನುತ್ತಾರೆ. ಆದರೆ ಗ್ರಾಪಂ ಹಾಜರಾತಿ ಪುಸ್ತಕದಲ್ಲಿ ಅವರ ಹಾಜರಾತಿ ಸಹಿ ಇರುತ್ತದೆ. ಸಣ್ಣ ಕೆಲಸಕ್ಕಾಗಿ ಮೂರು ತಿಂಗಳಿಂದ ಗ್ರಾಪಂಗೆ ನಾವು ಅಲೆದು ಸಾಕಾಗಿದೆ ಎಂದು ತಿಳಿಸಿದರು.

Advertisement

ರವಿಕುಮಾರ, ಶ್ರೀನಿವಾಸ, ಕೃಷ್ಣಪ್ಪ, ವೆಂಕಟ ರಾಮಯ್ಯ, ಗಂಗಮ್ಮ, ಚಿಕ್ಕರಂಗಮ್ಮ, ಹನುಮಂತ ರಾಜು, ಆಂಜೀನಪ್ಪ, ವಿಶ್ವಾಸ, ಪುರುಷೋತ್ತಮ್‌, ಹರೀಶ, ಶಶಿ ಕುಮಾರ, ಸೀನಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next