ರೋಣ: ಜಿಗಳೂರ ಗ್ರಾಮಕ್ಕೆ ನ್ಯಾಯಯುತವಾಗಿ ಬರಬೇಕಿದ್ದ ಗ್ರಾಪಂ ಸ್ಥಾನದಿಂದ ವಂಚಿತವಾಗಿದ್ದು, ಕನಿಷ್ಟ ಪಕ್ಷ ಹೊಸಳ್ಳಿ ಗ್ರಾಪಂ ಕಾರ್ಯಾಲಯವಾದರೂ ಜಿಗಳೂರ ಸಮೀಪ ಸ್ಥಳಾಂತರಿಸುವ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಅಂತಿಮವಾಗಿ ಗ್ರಾಪಂ ಚುನಾವಣೆ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಗೊಂದಲ ಸೃಷ್ಟಿಸಿದ ಬೆಳವಣಿಗೆ: ನಾಮಪತ್ರ ಸಲ್ಲಿಕೆ ಪ್ರಾರಂಭ ಗೊಳ್ಳುತ್ತಿದಂತೆ ಜಿಗಳೂರ ಗ್ರಾಮ ಸ್ಥರು ನಾಲ್ಕೈ6ದು ಬಾರಿ ಸಭೆ ಸೇರಿ, ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿಕಳೆದ 2015 ರಲ್ಲಿ ಗ್ರಾಪಂ ಚುನಾವಣೆ ಬಹಿಷ್ಕರಿಸಿದಂತೆ ಈ ಬಾರಿಯೂ ಬಹಿಷ್ಕಾರ ಮಾಡುವ ದಿಸೆಯಲ್ಲಿ ನಿರ್ಧಾರ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕಾರದಿಂದ ಹಿಂದೆ ಸರಿಯುವಂತೆ ಮನವೊಲಿಕೆಗೆ ಒಂದು ಬಾರಿ ತಹಶೀಲ್ದಾರ್ ಜಿ.ಬಿ.ಜಕ್ಕನಗೌಡ್ರ, ತಾಪಂ ಇಒ ಸಂತೋಷ ಪಾಟೀಲ ಅವರು, ಮತ್ತೂಂದು ಬಾರಿ ಎಸಿರಾಯಪ್ಪ ಹುಣಸಗಿ, ಜಿಪಂ ಉಪಕಾರ್ಯದರ್ಶಿ ಬಿ.ಕಲ್ಲೇಶ ಅವರುಗ್ರಾಮಸ್ಥರೊಂದಿಗೆ ನಡೆಸಿದ ಸಭೆ ವಿಫಲವಾಗಿದ್ದವು. ಬಳಿಕ ಅನೇಕ ರೀತಿಯ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಗ್ರಾಪಂ ವ್ಯಾಪ್ತಿಯ ಯಾವುದೇ ಗ್ರಾಮದವರುಎಲ್ಲಿಯಾದರೂ ಸ್ಪ ರ್ಧಿಸಬಹುದುಎಂಬ ನಿಯಮದನ್ವಯ ಹೊಸಳ್ಳಿ ಗ್ರಾಮದ ನಾಲ್ವರು ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು.
ಆಗ ಎಚ್ಚೆತ್ತುಕೊಂಡ ಜಿಗಳೂರ ಗ್ರಾಮಸ್ಥರು ನಾಮಪತ್ರ ಸಲ್ಲಿಕೆಕೊನೆಯ ದಿನ(ಡಿ. 16) 5 ಸ್ಥಾನಗಳ ಪೈಕಿ ಒಟ್ಟು 17 ನಾಮಪತ್ರಗಳನ್ನು ಸಲ್ಲಿಸಿದ್ದರು. ಇನ್ನೇನು ಜಿಗಳೂರ ಗ್ರಾಮಸ್ಥರು ನಾಮಪತ್ರ ಸಲ್ಲಿಸಿದ್ದು, ಚುನಾವಣೆ ಬಹಿಷ್ಕಾರದಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಡಿತ್ತು.
ಗುರುವಾರ(ಡಿ. 17) ನಾಮಪತ್ರ ಪರಿಶೀಲನೆ ವೇಳೆ ಜಿಗಳೂರ ಗ್ರಾಮದ ಪರವಾಗಿ ಹೊಸಳ್ಳಿ ಗ್ರಾಮಸ್ಥರಿಂದ ಸಲ್ಲಿಕೆಯಾದ 4ನಾಮಪತ್ರ ಸಲ್ಲಿಸಿದವರ ಪೈಕಿ ಇಬ್ಬರ ನಾಮಪತ್ರಗಳು ತಿರಸ್ಕಾರಗೊಂಡವು.ಬಳಿಕ ನಡೆದ ನಾನಾ ರೀತಿಯ ನಾಟಕೀಯ ಬೆಳವಣಿಗೆಗಳ ಮಧ್ಯೆ ಇನ್ನುಳಿದ ಹೊಸಳ್ಳಿಯ ಇಬ್ಬರು ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾದ ಶನಿವಾರ ಇಬ್ಬರು ನಾಮಪತ್ರ ವಾಪಸ್ ಪಡೆದರು.
ಹೀಗೆ 2 ನಾಮಪತ್ರ ತಿರಸ್ಕಾರ ಮತ್ತು 2 ನಾಮಪತ್ರ ವಾಪಸ್ ಪಡೆದಿದ್ದನ್ನು ಖಚಿತಪಡಿಸಿಕೊಂಡ ಜಿಗಳೂಗ್ರಾಮಸ್ಥರು ತಾವು ಸಲ್ಲಿಸಿದ ಒಟ್ಟು17 ನಾಮಪತ್ರಗಳನ್ನು ವಾಪಸ್‌ಪಡೆದರು. ಇದರಿಂದ ಜಿಗಳೂರ ಗ್ರಾಮದ ಪರವಾಗಿ ಯಾರೊಬ್ಬರು ಸ್ಪರ್ಧಿಸದ ಕಾರಣ ಜಿಗಳೂರ ಗ್ರಾಮಸ್ಥರ ಚುನಾವಣೆ ಬಹಿಷ್ಕಾರ ತಾರ್ಕಿಕ ಘಟ್ಟ ತಲುಪಿ, ಬಹಿಷ್ಕಾರ ಕೂಗೇ ಅಂತಿವಾಯಿತು.ಕಳೆದ ಬಾರಿಯಂತೆ ಈ ಬಾರಿಯೂ ಜಿಗಳೂರ ಗ್ರಾಮಸ್ಥರು ಗ್ರಾಪಂ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.