Advertisement

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

01:10 PM Apr 05, 2020 | Sriram |

ಬಂಟ್ವಾಳ: ತುಂಬೆಯ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗ್ರಾಮಸ್ಥರು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು. ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೂ ಭೇಟಿ ನೀಡಿ ಆರೋಗ್ಯ ಮಾಹಿತಿ ದಾಖಲಿಸಿಕೊಳ್ಳಲಿದ್ದು, ಅವರಿಗೆ ತೊಂದರೆ ನೀಡದೆ ಕೇಳಿದ ಮಾಹಿತಿ ನೀಡಬೇಕು ಎಂದು ಶಾಸಕ ಯು.ಟಿ. ಖಾದರ್‌ ಮನವಿ ಮಾಡಿದ್ದಾರೆ.

Advertisement

ಈಗಾಗಲೇ ಗ್ರಾಮಕ್ಕೆ ತಹಶೀಲ್ದಾರ್‌, ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸುಮಾರು 500 ಮನೆಗಳನ್ನು ಕ್ವಾರಂಟೈನ್‌ ನಲ್ಲಿಡಲಾಗಿದೆ. ಅಂತಹ ಮನೆಗಳಿಗೆ ಅಗತ್ಯವಿರುವ ಆಹಾರ ವಸ್ತುಗಳನ್ನು ಎ. 5ರಿಂದ ತಲುಪಿಸಲಾಗುವುದು. ಸೋಂಕು ದೃಢಪಟ್ಟವರ ಮನೆಗೆ ಭೇಟಿ ನೀಡಿದವರು, ಅವರು ಬೇರೆ ಮನೆಗಳಿಗೆ ಭೇಟಿ ನೀಡಿದ್ದರೆ ಅಂತಹವರು ಕೂಡ ಸ್ವಯಂಪ್ರೇರಣೆಯಿಂದ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಇಡೀ ಗ್ರಾಮದಲ್ಲಿ ಸಾಮಾಜಿಕ ಅಂತರಕ್ಕೆ ಮಹತ್ವ ನೀಡಬೇಕು ಎಂದು ಶಾಸಕ ಖಾದರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next