Advertisement

ಮಾರಮ್ಮನ ಹಬ್ಬ ಆಚರಿಸಿದ ಗ್ರಾಮಸ್ಥರು!

06:53 AM May 15, 2020 | Lakshmi GovindaRaj |

ಕನಕಪುರ:ಕೊರೊನಾ ಸೋಂಕಿನಿಂದ ಹೆಚ್ಚು ಜನ ಸೇರುವ ಸಭೆ-ಸಮಾರಂಭಗಳಿಗೆ ನಿಷೇಧ ಹೇರಿದ್ದರೂ ತಾಲೂಕಿನ ಕೊಳಗೊಂಡನಹಳ್ಳಿ ಗ್ರಾಮದಲ್ಲಿಮಂಗಳವಾರ ಸಾವಿರಾರು ಜನ ಸೇರಿ ಮಾರಮ್ಮನ ಹಬ್ಬ ಆಚರಿಸಿ ಸರ್ಕಾರದ  ನಿಯಮ ಗಾಳಿಗೆ ತೂರಿದ್ದಾರೆ.

Advertisement

ಕೊರೊನಾ ಸೋಂಕು ಹತೋಟಿಗೆ ತರಲು ಸರ್ಕಾರ ಹೆಚ್ಚು ಜನ ಸೇರುವ ಸಭೆ-ಸಮಾರಂಭ ನಿಷೇಧ ಹೇರಿ ನಿಯಮ ಉಲ್ಲಂಘಿಸಿ ಸಭೆ-ಸಮಾರಂಭ ನಡೆಸದಂತೆ ಹದ್ದಿನ ಕಣ್ಣಿಡಲು ಟಾಸ್ಕ್‌ಫೋರ್ಸ್‌ ಕಮಿಟಿ  ಚಿಸಿದೆ. ಅಲ್ಲದೆ ತಾಲೂಕು ಆಡಳಿತ, ಪೊಲೀಸ್‌ ಇಲಾಖೆ ಗ್ರಾಪಂ ಅಧಿಕಾರಿಗಳು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವಾರಿಯರ್ಸ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರೂ,

ತಾಲೂಕಿನ ಉಯ್ಯಂ ಬಳ್ಳಿ ಹೋಬಳಿಯ  ಗಡಿಭಾಗದಲ್ಲಿರುವ ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳ ವಾರ ರಾತ್ರಿ ಗ್ರಾಮದ ಮಾರಮ್ಮನ ಹಬ್ಬ ಅದೂಟಛಿರಿಯಾಗಿ ಸಾವಿರಾರು ಜನ ಸೇರಿ ಮಾಸ್ಕ್ ಹಾಕದೆ, ಸಾಮಾಜಿಕ ಅಂತರದ ಅರಿವಿಲ್ಲದೆ ಹಬ್ಬ ಆಚರಿಸಿ ನಿಯಮ  ಉಲ್ಲಂಘಿಸಿದ್ದಾರೆ. ಅಲ್ಲದೆ ಘಟನೆ ನಡೆದಿರುವ ಕೊಳಗೊಂಡನಹಳ್ಳಿ ಗ್ರಾಮ ತಮಿಳುನಾಡಿನ ಗಡಿಗೆ ಹೊಂದಿ ಕೊಂಡಿದ್ದು ತಮಿಳುನಾಡು ಕೊರೊನಾ ಸೋಂಕಿನಲ್ಲಿ ದೇಶದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಹೀಗಾಗಿ ತಾಲೂಕಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಸಂಬಂಧ ತಹಶೀಲ್ದಾರ್‌ ವರ್ಷ ಒಡೆಯರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ನಿಯಮ ಉಲ್ಲಂಘಿಸಿ ಸಾವಿರಾರು ಜನರಿಗೆ ದೇವಾಲಯದಲ್ಲಿ ಧಾರ್ಮಿಕ  ವಿಧಿವಿಧಾನಗಳಿಗೆ ಅವಕಾಶ ಕಲ್ಪಿಸಿಕೊಟ್ಟ ದೇವಾಲಯದ ಅರ್ಚಕ ಚಿಕ್ಕಮಾರೇ ಗೌಡನ ವಿರುದಟಛಿ ಕೋಡಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next