Advertisement

ಕಿಟ್‌ ನೀಡಲು ಆಗ್ರಹಿಸಿ ಲಾರಿ ತಡೆದ ಗ್ರಾಮಸ್ಥರು

07:09 AM May 31, 2020 | Suhan S |

ಶಹಾಬಾದ: ಕಾರ್ಮಿಕ ಇಲಾಖೆಯಿಂದ ತಂದಿದ್ದ ಆಹಾರ ಸಾಮಗ್ರಿ ಕಿಟ್‌ಗಳ ಲಾರಿಯನ್ನು ಗ್ರಾಮಸ್ಥರು ತಡೆದು, ನಮಗೂ ವಿತರಿಸಿ ಎಂದು ಒತ್ತಾಯಿಸಿದ ಘಟನೆ ತಾಲೂಕಿನ ತೊನಸನಹಳ್ಳಿ (ಎಸ್‌)ನಲ್ಲಿ ಶುಕ್ರವಾರ ನಡೆಯಿತು.

Advertisement

ಇಲಾಖೆಯಿಂದ ಬಂದಿದ್ದ ಆಹಾರ ಸಾಮಗ್ರಿ ಕಿಟ್‌ನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು 160 ಬಡವರಿಗೆ ವಿತರಿಸಿದರು. ಈ ವೇಳೆ ಗ್ರಾಮಸ್ಥರು ನಮಗೂ ಕಿಟ್‌ ನೀಡಿ ಎಂದು ದುಂಬಾಲು ಬಿದ್ದರು.

ನಂತರ ಕಿಟ್‌ ತಂದ ಲಾರಿ ವಾಪಸ್‌ ಹೋಗುತ್ತಿದ್ದಾಗ ಗ್ರಾಮಸ್ಥರು ತಡೆದು ನಮಗೂ ಕಿಟ್‌ ಕೊಡಿ, ನಾವು ಬಡವರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಿಐ ಬಿ.ಅಮರೇಶ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಜನರ ಮನವೊಲಿಸಿದರು. ನಂತರ ಲಾರಿ ಹೋಗಲು ಅನುವು ಮಾಡಿಕೊಡಲಾಯಿತು.

ತಹಶೀಲ್ದಾರ್‌ ಸುರೇಶ ವರ್ಮಾ, ಕೋವಿಡ್‌-19 ನೋಡಲ್‌ ಅಧಿಕಾರಿ ನೀಲಗಂಗಮ್ಮ ಬಬಲಾದ, ತಾ.ಪಂ ಅಧಿಕಾರಿ ಲಕ್ಷ¾ಣ ಶೃಂಗೇರಿ, ತೊನಸನಹಳ್ಳಿ (ಎಸ್‌) ಗ್ರಾ.ಪಂ ಅಧ್ಯಕ್ಷ ವಿಜಯಾನಂದ ಮಾಣಿಕ್‌, ಗ್ರಾ.ಪಂ ಸದಸ್ಯರಾದ ಬಸವರಾಜ ಗೊಳೇದ್‌, ಬಸವರಾಜ ಮದ್ರಕಿ, ನಾಗೇಂದ್ರ ಹುಗ್ಗಿ, ಶಿವಲಿಂಗಪ್ಪ ಗೊಳೇದ್‌, ಗ್ರಾ.ಪಂ ಪಿಡಿಒ ಶ್ರವಣಕುಮಾರ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next