Advertisement

ಅಭ್ಯರ್ಥಿಗಳ ಅರ್ಹತೆಗಾಗಿ ಪರೀಕ್ಷೆ ಇಟ್ಟ ಗ್ರಾಮಸ್ಥರು!

08:00 PM Feb 13, 2022 | Team Udayavani |

ಭುವನೇಶ್ವರ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಒಂದಿಷ್ಟು ಮಾನದಂಡ ಇರಬೇಕು ಎಂಬ ವಾದ ಇಂದು ನೆನ್ನೆಯದಲ್ಲ. ಪ್ರಜ್ಞಾವಂತರು, ಸಮಾಜ ಸೇವೆಯ ನೈಜ ಮನಸ್ಸಿರುವವರು, ಸಭ್ಯರು ಚುನಾವಣೆಗೆ ನಿಲ್ಲಬೇಕು ಎಂಬುದು ಇದರ ಹಿಂದಿನ ಕಾಳಜಿ. ವರ್ಷಗಳಿಂದ ಪರಿಕಲ್ಪನೆಯಾಗಿಯೇ ಉಳಿದಿರುವ ಇದನ್ನು ದೂರದ ಒಡಿಶಾದಲ್ಲಿರುವ ಗ್ರಾಮವೊಂದರ ನಿವಾಸಿಗಳು ಜಾರಿಗೊಳಿಸಿದ್ದಾರೆ!

Advertisement

ಒಡಿಶಾದ ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತ ಫೆ. 18ರಂದು ನಡೆಯಲಿದೆ. ಎರಡನೇ ಹಂತದ ಮತದಾನದಲ್ಲಿ ರೂರ್ಕೆಲಾ ಜಿಲ್ಲೆಯ ಕುತ್ರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲುಪದಾ ಗ್ರಾಮದಲ್ಲೂ ಮತದಾನ ನಡೆಯಲಿದೆ.

ಮತದಾನಕ್ಕೂ ಮೊದಲು ಗ್ರಾಮವೊಂದರಲ್ಲಿ ಚುನಾವಣಾ ಅಭ್ಯರ್ಥಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಪರೀಕ್ಷೆಗೆ ಒಳಪಟ್ಟಿದ್ದಾರೆ. ಆದರೆ ಅದು ಮತ ಪರೀಕ್ಷೆಯಲ್ಲ ಬದಲಾಗಿ ಗ್ರಾಮಸ್ಥರೇ ರೂಪಿಸಿರುವ ಲಿಖೀತ ಮತ್ತು ಮೌಖೀಕ ಪರೀಕ್ಷೆ! ಅಂದ್ರೆ, ಬರವಣಿಗೆ ಹಾಗೂ ಓರಲ್‌ ಪರೀಕ್ಷೆ ನಡೆಸಿದ್ದಾರೆ!

ಇದನ್ನೂ ಓದಿ:ಆನಂದ್ ಮಹೀಂದ್ರಾ ಮೆಚ್ಚಿಕೊಂಡ ಎಲೆಕ್ಟ್ರಿಕಲ್ ಸೈಕಲ್ ಇದು : ವಿಶೇಷ ವಿಡಿಯೋ

ಹೇಗೆ ನಡೀತು ಪರೀಕ್ಷೆ?
ತಮ್ಮ ಗ್ರಾಮ ಪಂಚಾಯಿತಿ ಸದಸ್ಯರಾಗಲು ಅಭ್ಯರ್ಥಿಗಳಾಗಿರುವ 9 ಮಂದಿಯನ್ನು ಗುರುವಾರ ಅದೇ ಊರಿನ ಶಾಲೆಗೆ ಕರೆಸಿದ್ದಾರೆ. ಅಲ್ಲಿ ಅವರಿಗೆ “ನೀವು ಏಕಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಬೇಕು?’, “ಸದಸ್ಯರಾದ ಮೇಲೆ ಏನು ಮಾಡುತ್ತೀರಿ’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ ಹಾಗೂ ಅದೇ ರೀತಿಯ ಪ್ರಶ್ನೆ ಪತ್ರಿಕೆಯನ್ನೂ ಕೊಡಲಾಗಿದೆ. ಅಭ್ಯರ್ಥಿಗಳು ಮೌಖೀಕ ಮತ್ತು ಲಿಖೀತ ಪರೀಕ್ಷೆಗೆ ಉತ್ತರಿಸಿದ್ದು, ಅದರ ಫ‌ಲಿತಾಂಶ ಫೆ. 17ರಂದು ಹೊರಬೀಳಲಿದೆಯಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next