ಆನೇಕಲ್: ನೆರಳೂರು, ಗುಡ್ಡಹಟ್ಟಿ ಗ್ರಾಮಗಳಲ್ಲಿ ಸ್ಮಶಾನದ ಸಮಸ್ಯೆ ಇದ್ದು, ಜೀವನದ ನಂತರದ ಸಮಾಧಿಯನ್ನು ಕಟ್ಟಿಕೊಳ್ಳಲು ಸ್ಥಳ ಗುರುತಿಸಿ ಕೊಡಬೇಕೆಂದು ಆಗ್ರಹಿಸಿ, ತಹಶೀಲ್ದಾರ್ ಶಿವಪ್ಪ ಲಮಾಣಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಆನೇಕಲ್ ತಾಲೂಕಿನ ಆದಿಗೊಂಡನಹಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಕಾರ್ಯಕ್ರಮದಲ್ಲಿ ಸುತ್ತಮುತ್ತಲ ಹಳ್ಳಿಗಳಿಂದಆಗಮಿಸಿದ ಜನರು, ತಹಶೀಲ್ದಾರ್ ಶಿವಪ್ಪ ಲಮಾಣಿಅವರಲ್ಲಿ ಸಮಸ್ಯೆಗಳ ಸರಮಾಲೆ ಮುಂದಿಟ್ಟು ಕೂಡಲೇಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ಮುತ್ತಾ ನಲ್ಲೂರು ಕೆರೆಗೆ ಕೈಗಾರಿಕೆಗಳ ತ್ಯಾಜ್ಯ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ಕೆರೆಗಳು ಕಲುಷಿತವಾಗಿವೆ. ಆದ್ದರಿಂದ ಕೆರೆಗೆ ಸೇರುವ ತ್ಯಾಜ್ಯ ನೀರು ಹರಿಯುವುದನ್ನು ತಡೆಯಬೇಕು. ಬೆಂಡಿಗಾನಹಳ್ಳಿಯಲ್ಲಿ ಚರಂಡಿ ಹಾಗೂ ಬೀದಿದೀಪಗಳ ವ್ಯವಸ್ಥೆ ಶೀಘ್ರ ಮಾಡಿ ಕೊಡಬೇಕು. ಸಮೀಪದ ಅಂಬೇಡ್ಕರ್‌ನಗರದಲ್ಲಿ ಒಳಚರಂಡಿ ವ್ಯವಸ್ಥೆ ಅವಶ್ಯಕತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಶಾಲಾ ವಿದ್ಯಾರ್ಥಿಗಳ ಮನವಿ: ವಿಶೇಷವೆಂದರೇ ಸಭೆಗೆ ಆಗಮಿಸಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ಇತ್ಛಂಗೂರು-ಮಂಚನಹಳ್ಳಿ ರಸ್ತೆ ಸರಿಪಡಿಸುವಂತೆ ಮನವಿ ಸಲ್ಲಿಸಿ ಮಾತನಾಡಿ, ಕಿರಿದಾದ ದಾರಿಯಲ್ಲಿ ನಡೆಯಬೇಕಾದರೇ ಕಿರಿಕಿರಿ ಆಗುತ್ತಿದ್ದು, ಮಳೆಗಾಲದಲ್ಲಿ ತುಂಬಾ ತೊಂದರೆ ಆಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿ ಕೊಡಿ ಎಂದು ಮನವಿ ಮಾಡಿದರು.
ಶೀಘ್ರ ಕ್ರಮ ಕೈಗೊಳ್ಳುವೆ: ತಹಶೀಲ್ದಾರ್ ಶಿವಪ್ಪ ಎಚ್. ಲಮಾಣಿ ಮಾತನಾಡಿ, ಪ್ರತಿ ಗ್ರಾಮಗಳಿಗೂ ಸ್ಮಶಾನವನ್ನು ಗುರುತಿಸಿ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಸರ್ಕಾರಿ ಜಾಗ ಗುರುತಿಸಲಾಗುವುದು.ಇಲ್ಲವಾದಲ್ಲಿ ಮಾರುಕಟ್ಟೆ ಬೆಲೆಯಲ್ಲಿ ಜಮೀನನ್ನುಖರೀದಿ ಮಾಡಿಯಾದರೂ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಕೆರೆಗೆ ತ್ಯಾಜ್ಯ ಬರದಂತೆಸಂರಕ್ಷಿಸಲು ಉತ್ಛ ನ್ಯಾಯಾಲಯ ಆದೇಶ ನೀಡಿದ್ದು,ಶೀಘ್ರ ಕ್ರಮ ವಹಿಸಲಾಗುವುದು. ಶಾಲಾ-ವಿದ್ಯಾರ್ಥಿ ಗಳ ಮನವಿಯನ್ನು ಕೂಡಲೇ ಪರಿಶೀಲಿಸುವುದಾಗಿ ಹೇಳಿದರು.
ನೆರಳೂರು ಗ್ರಾಪಂ ಅಧ್ಯಕ್ಷೆ ಭಾರತಿ ನಾಗರಾಜು, ಉಪಾಧ್ಯಕ್ಷ ಶಶಿಕುಮಾರ್, ತಾಪಂ ಡಿಡಿಅನಿಲ್ ಕುಮಾರ್, ಟಿಎಚ್‌ಒ ಡಾ. ರವಿ, ಬಿಇಒ ಜೆ.ಎಂ. ಜಯಲಕ್ಷ್ಮೀ, ಕೃಷಿ ಅಧಿಕಾರಿ ಧನಂಜಯ, ಸಿಡಿಪಿಒ ಕವಿತಾ, ಪಿಡಿಒ ಶಶಿಕಿರಣ್ ಇದ್ದರು.