Advertisement
ಕೃಷಿಕನು ಮನುಷ್ಯನ ದೈಹಿಕವಾದ ಬೆಳವಣಿಗೆಗೆ ಪೂರಕವಾದಂತಹ ಆಹಾರವನ್ನು ಪೂರೈಸಬಲ್ಲ ಹಾಗೂ ಹೇಗೆ ಬದುಕಬೇಕೆಂಬುದನ್ನು ಋಷಿಯು ತಿಳಿಸಿಕೊಡುತ್ತಾನೆ. ನಾಣ್ಯಕ್ಕೆ ಎರಡು ಮುಖಗಳಿದ್ದಂತೆ ಕೃಷಿ-ಋಷಿಯು ಬದುಕಿನ ಎರಡು ಮುಖಗಳಾಗ ಬೇಕು. ಗ್ರಾಮಗಳಲ್ಲಿ ನಡೆಯುವ ಪಂಚಾಯತ್ ಚುಣಾವಣೆಗಳಲ್ಲಿ ಸ್ಪರ್ಧೆಗಳನ್ನು ಕಾಣಬಹುದು. ತಪ್ಪೇನೂ ಅಲ್ಲ. ಆರೋಗ್ಯಕರ ಸ್ಪರ್ಧೆಗಳಿಂದ ಸಮಾಜಕ್ಕೆ ಒಳಿತೆ. ಜನಪ್ರತಿನಿಧಿ ಯಾಗಿ ಆಯ್ಕೆಗೊಂಡವರು ತಮ್ಮ ಹುದ್ದೆ ಏನು? ಹೇಗೆ? ಎಂಬುದನ್ನು ಅರಿತುಕೊಂಡು ತನ್ನ ಅ ಧಿಕಾರವನ್ನು ಕರ್ತವ್ಯವಾಗಿಸಿಕೊಂಡಾಗ ತಾನೂ ಬೆಳೆಯುವುದರ ಜತೆಗೆ ಗ್ರಾಮ ವಿಕಾಸವೂ ಸಾಧ್ಯವಾಗುತ್ತದೆ.
ನಿಲ್ಲದಿದ್ದರೆ ಏನಂತೆ ಚಂದ್ರನಿರುವನು ಎಂದರು. ಅದಕ್ಕೆ ಜನಕ ಮಹಾರಾಜನು ಚಂದ್ರನಿಗೂ ವೃದ್ಧಿ-ಕ್ಷಯವಿದೆ, ಅಮಾವಾಸ್ಯೆಗೆ ಚಂದ್ರನೆಲ್ಲಿ? ಎಂದನು. ಆಗ ಯಾಜ್ಞವಲ್ಕರು ವೃದ್ಧಿ- ಕ್ಷಯವು ಇರುವುದು ಸ್ವಾಭಾವಿಕ, ದೀಪವೊಂದನ್ನು ಹಚ್ಚಿದರಾ ಯಿತು ಎಂದರು. ಯಾಜ್ಞವಲ್ಕರ ಮಾತಿಗೆ ಜನಕ ಮಹಾರಾಜನು, ತೈಲವು ಮುಗಿದರೆ ದೀಪ ಹೇಗೆ ಉರಿಯುವುದು? ಇದು ಆಶ್ಚರ್ಯವೇನಲ್ಲ. ದೀಪಕ್ಕೆ ತೈಲವನ್ನು ಹಾಕುತ್ತಾ ಇರಬೇಕು. ಉರಿದುಹೋದಂತೆ ಬತ್ತಿಗಳನ್ನು ಮತ್ತೆ ಸೇರಿಸಬೇಕು. ಇದು ನಿಯಮ. ದೀಪವೂ ಇಲ್ಲದಿದ್ದಲ್ಲಿ ಶಬ್ದದಿಂದ ಬೆಳಕಾಗುವುದು ಎಂದರು. ಶಬ್ದವೂ ಇಲ್ಲದಿದ್ದರೆ ಮನುಷ್ಯನಿಗೆ ಬೆಳಕೆಲ್ಲಿಂದ? ಎಂದು ಜನಕನು ಪ್ರಶ್ನಿಸಿದನು.
Related Articles
Advertisement
ವೃಕ್ಷ ಸಂಸ್ಕಾರ, ದೀಪ ಸಂಸ್ಕಾರ, ಆತ್ಮ ಸಂಸ್ಕಾರ ಹೀಗೆ ಜೀವನದಲ್ಲಿ ಹತ್ತು-ಹದಿನಾರು ಸಂಸ್ಕಾರಗಳು ಇವೆ. ಎಲ್ಲವನ್ನು ಒಮ್ಮೆ ಅವಲೋಕಿಸಿ ನೋಡಬೇಕಾದ ಅನಿವಾರ್ಯವಿದೆ. ಕಾಡಿನ ರಾಜ ಸಿಂಹವು ತಾನು ನಡೆದುಹೋಗುವಾಗ ಒಂದೊಮ್ಮೆ ಕತ್ತನ್ನೆತ್ತಿ ತಾನು ಬಂದ ದಾರಿಯನ್ನು ತಿರುಗಿ ನೋಡುತ್ತದೆ. ಅನಂತರ ಮುಂದಿನ ದಾರಿಯನ್ನು ಕತ್ತೆತ್ತಿ ನೋಡುತ್ತದೆ. ಇಲ್ಲಿ ನಾವು ತಿಳಿಯಬಹುದು. ನಡೆದ ದಾರಿಯಿಂದ ಅಪಾಯವಿದೆಯೋ? ಎನ್ನುವುದು ಒಂದಾದರೆ ಇನ್ನೊಂದು ಮುಂದಿನ ದಾರಿಯಲ್ಲಿ ತೊಡಕಿದೆಯೋ? ಎಂದು.
ಮನುಷ್ಯನು ಪ್ರತೀದಿನ ಸಿಂಹಾವಲೋಕನ ಮಾಡ ಬೇಕಾದ ಅಗತ್ಯ ಇದೆ. ಒಟ್ಟಾರೆ ವ್ಯಕ್ತಿ ವಿಕಾಸದಿಂದಲೇ ದೇಶ ವಿಕಾಸ ಎನ್ನುವ ಸತ್ಯ ಎದ್ದು ಕಾಣುತ್ತದೆ. ಗ್ರಾಮ ವಿಕಾಸದ ಬಗ್ಗೆ ನಾವೊಮ್ಮೆ ಕಣ್ಣಾಡಿಸಿದಾಗ ಗ್ರಾಮದ ಸಶಕ್ತೀಕರಣ ಹೇಗೆ ಸಾಧ್ಯ ಎನ್ನುವುದನ್ನು ಮನಗಾಣಬೇಕು. ಇಲ್ಲಿ ಗೋಚರಕ್ಕೆ ಬರುವುದು ಪ್ರಜ್ಞಾವಂತ ಯುವಶಕ್ತಿಯ ಪಾತ್ರ. ವ್ಯಕ್ತಿ ವಿಕಾಸ ಎಂದರೆ ಅಂತರಂಗದ ವಿಕಾಸವೇ. ಅಂತರಂಗದ ವಿಕಾಸವಾದರೆ ಪ್ರೀತಿ ಭಾವವು ಬೆಳೆಯುತ್ತದೆ. ದ್ವೇಷ ಭಾವನೆಗೆ ಜಾಗವಿರದು. ಇಂತಹ ಕಲ್ಪನೆಗಳು ಮನಸ್ಸಿನಲ್ಲಿ ಮೂಡಿದಾಗ ಒಟ್ಟು ಸಮಾಜದ ಅಭಿವೃದ್ಧಿಗೆ ತನ್ನನ್ನು ತೊಡಗಿಸಿಕೊಳ್ಳಬೇಕಾದಂತಹ ಅನಿವಾರ್ಯ ಇರುವುದು.
ಒಂದು ಸಲ ಭಗವಾನ್ ಮಹಾವೀರ ತೀರ್ಥಂ ಕರರ ಬದುಕಿನಲ್ಲಿ ನಡೆದ ಘಟನೆ – ಅವರು ಮರಳಿನ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಓರ್ವ ವ್ಯಕ್ತಿ “ನೀವ್ಯಾರು? ಮಹಾರಾಜರೇ’ ಎಂದು ಪ್ರಶ್ನಿಸಿದನು. “ಹೌದೆಂದರು’ ತೀರ್ಥಂಕರರು. “ನಿಮ್ಮ ಸೈನ್ಯವೆಲ್ಲಿ? ಎಂದು ಕೇಳಿದನು. “ನನ್ನ ರಾಜ್ಯಕ್ಕೆ ನಾನೇ ರಾಜನಾದುದರಿಂದ ನನಗೆ ಮಂತ್ರಿ- ಮಹೋದಯರ, ಸೈನ್ಯದ ಅಗತ್ಯವಿರದು’ ಎಂದರು. ಹಾಗಾದರೆ “ನಿಮ್ಮ ರಾಜ್ಯ ಯಾವುದು?’ ಎಂದು ಕೇಳಿದಾಗ ತೀರ್ಥಂಕರರು, “ತನ್ನ ಶರೀರವೇ ರಾಜ್ಯ’ ಎಂದರು. ಹೇಗೆಂದರೆ “ಇಂದ್ರಿಯ, ಮನಸ್ಸುಗಳನ್ನು ನಾನು ಹೇಳಿದಂತೆ ಕೇಳುವಂತೆ ಮಾಡಿಕೊಂಡಿದ್ದೇನೆ. ಅರ್ಥಾತ್ ದಾಸರಾಗಿಸಿದ್ದೇನೆ. ನಾವು ಅದರ ದಾಸರಾಗಿಲ್ಲ. ಆದುದರಿಂದ ನಮ್ಮಲ್ಲಿ ದ್ವೇಷಭಾವವು ಇರದು. ಹಾಗಾಗಿ ನನ್ನ ರಾಜ್ಯಕ್ಕೆ ನಾನೇ ರಾಜ’ ಎಂದರು.
ಅಧ್ಯಾತ್ಮವು ಎಷ್ಟು ಆಳವಾಗಿದೆ? ಎಂದು ಅರ್ಥೈ ಸಬಹುದು. ಅದಕ್ಕಾಗಿಯೇ ಭಾರತವು “ಭಾ’ ಎನ್ನುವ ಬೆಳಕಿನಿಂದ ಕೂಡಿರುತ್ತದೆ. ಅದೇ ಅಧ್ಯಾತ್ಮದ ಬೆಳಕು. ಗ್ರಾಮ ಸ್ವರಾಜ್ಯವನ್ನು ಕಟ್ಟುವ ಕಾರ್ಯದಲ್ಲಿ ಅಧ್ಯಾತ್ಮವೂ ಅನಿವಾರ್ಯ. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಧರ್ಮದ ಪ್ರಜ್ಞೆಯೊಂದಿಗೆ ಬೆಳೆದಾಗ ಗ್ರಾಮವು ಸುಭಿಕ್ಷವಾಗುವುದು. ಬದುಕಿ-ಬದುಕ ಬಿಡುವ ವಿಶೇಷತೆಯೊಂದಿಗೆ ಸ್ವರಾಜ್ಯದ ಕನಸು ಸಾಕಾರಗೊಳ್ಳುವುದು.|| ಶ್ರೀ ಗುರುದತ್ತಾತ್ರೇಯೋ ವಿಜಯತೇ || ಚುನಾವಣೆಯ ಅನಂತರದಲ್ಲಿ ಕಾಣಿಸಿ ಕೊಳ್ಳುವ ಭಿನ್ನತೆಗಳು, ಸಮಸ್ಯೆಗಳು ಬರದಂತೆ, ಸೋತವರು- ಗೆದ್ದವರು ಎನ್ನುವ ತಿಕ್ಕಾಟವನ್ನು ಕಡಿಮೆ ಮಾಡಿ ಜತೆ ಜತೆಯಾಗಿ ಸಾಗುವ ಸಂಕಲ್ಪವನ್ನು ಮಾಡಿದಾಗ ಗ್ರಾಮ ಸ್ವರಾಜ್ಯ ಸ್ಥಾಪಿತವಾಗುತ್ತದೆ. ಸೋಲು- ಗೆಲುವು ಅನ್ನುವಂಥದ್ದು ಶಾಶ್ವತವಾದ ಸ್ಥಿತಿಯಲ್ಲ. ಅಲ್ಲಿ ಮುಂದೆ ಪರಿವರ್ತನೆಯು ಇರಬಹುದು. ಆಯ್ಕೆ ಗೊಂಡ ವ್ಯಕ್ತಿಯು ಸಂಪೂರ್ಣವಾಗಿ ತನ್ನನ್ನು ತೊಡಗಿಸಿ ಕೊಳ್ಳುವುದರಲ್ಲಿ ವ್ಯಕ್ತಿತ್ವ ವಿಕಸನವೂ ಆಗುತ್ತದೆ. ಆದರ್ಶ ಪ್ರತಿನಿ ಧಿಯಾಗಿ ಆತ ರೂಪುಗೊಳ್ಳುತ್ತಾನೆ. ವ್ಯಕ್ತಿ ವಿಕಾಸ ದಿಂದಲೇ ಗ್ರಾಮ ವಿಕಾಸ, ಗ್ರಾಮ ವಿಕಾಸದಿಂದಲೇ ದೇಶ ವಿಕಾಸ. ಶಿಕ್ಷಣದ ಉತ್ತುಂಗಕ್ಕೇರಿದರೂ ನಾವು ಮೂಲವನ್ನು ಮರೆಯಬಾರದು. ಮತ ಚಲಾವಣೆ ಸ್ವಮತಿಯಿಂದ ಕೂಡಿರಬೇಕು. ಆಶೆ-ಆಮಿಷಗಳಿಗೆ ಬಲಿಯಾಗದೆ ಅತ್ಯಮೂಲ್ಯವಾದ ಮತವನ್ನು ಚಲಾಯಿಸಬೇಕು. ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್