Advertisement

ಎಲ್ಲ ಕ್ಷೇತ್ರಗಳಲ್ಲಿ ಸಾಧಿಸಿದ್ದಾರೆ ಹಳ್ಳಿ ವಿದ್ಯಾರ್ಥಿಗಳು

05:45 PM Jun 19, 2018 | Team Udayavani |

ಹಾವೇರಿ: ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಗ್ರಾಮೀಣ ಭಾಗದ
ವಿದ್ಯಾರ್ಥಿಗಳೇ ಹೆಚ್ಚಿರುವುದು ಹೆಮ್ಮೆಯ ಸಂಗತಿ ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಹೇಳಿದರು.
ಗುತ್ತಲ ಪಟ್ಟಣದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

Advertisement

ಓದುವ ವಯಸ್ಸಿನಲ್ಲಿ ಉನ್ನತವಾದ ಗುರಿಯನ್ನಿಟ್ಟುಕೊಂಡು ಉತ್ತಮವಾದ ಶಿಕ್ಷಣ ಪಡೆದರೆ ಅದರಲ್ಲಿ ಹೆಚ್ಚು ಖುಷಿಯನ್ನು ಪಾಲಕರು ಹಾಗೂ ಶಿಕ್ಷಕರು ಹೊಂದುವರು ಎಂದರು.

ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಕಾಲೇಜಿನ ಪ್ರಾಚಾರ್ಯ ಡಾ| ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ಸಾಧಕರ ಮುಂದೆ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುವುದು ಮಹತ್ತರವಾದ ಕೆಲಸ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅವಶ್ಯವಾದದು ಎಂದರು.

ವಿಪ್ರೋ, ಇನ್ಫೋಸಿಸ್‌ ಎಂಬ ಉನ್ನತ ಸಂಸ್ಥೆಗಳಲ್ಲಿ ಗ್ರಾಮೀಣ ಭಾಗದವರೇ ಸಿಂಹಪಾಲು ಹೊಂದಿದ್ದಾರೆ. ನಗರ
ವಿದ್ಯಾರ್ಥಿಗಳಲ್ಲಿ ರ್‍ಯಾಂಕ್‌ನ ಪ್ರಮಾಣ ಹೆಚ್ಚಿದ್ದರು ನೈತಿಕ ಶಿಕ್ಷಣ ಕಂಡು ಬರುವುದು ಗ್ರಾಮೀಣ ಭಾಗದ ಮಕ್ಕಳಲ್ಲಿ
ಹೆಚ್ಚಿರುವುದು ವಿಶೇಷ ಎಂದರು.

ಇದೇ ವೇಳೆ 2017-18ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡ, ಇಂಗ್ಲಿಷ್‌ ಮತ್ತು ಉರ್ದು
ಮಾಧ್ಯಮಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ನೂರಕ್ಕೆ ನೂರು ಅಂಕ
ಪಡೆದ ವಿಷಯವಾರು ವಿದ್ಯಾರ್ಥಿಗಳ ಶಿಕ್ಷಕರಿಗೆ ಸಹ ಸನ್ಮಾನ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Advertisement

ಕಾರ್ಯಕ್ರಮದಲ್ಲಿ ಧಾರವಾಡದ ಕೆಸಿಡಿಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಿ.ಬಿ. ಮಳ್ಳಿಮಠ, ಬೆಂಗಳೂರಿನ
ಭಾರತೀಯ ವಿಜ್ಞಾನ ಸಂಸ್ಥೆಯ ಡಾ| ಶಮಾ ತುಮ್ಮಿನಕಟ್ಟಿ, ಸಿಆರ್‌ಪಿ ಎಚ್‌.ಬಿ. ಹಳ್ಳೆಪ್ಪನವರ, ಡಾ| ನಟರಾಜಗೌಡ,
ತೇಜರಾಜ ಜಾನ್ಮನೆ, ಚೇತನಾ ಜಾನ್ಮನೆ, ವಿದ್ಯಾಲೋಕ ಶಿಕ್ಷಣ ಹಾಗೂ ಸೇವಾಸಂಸ್ಥೆಯ ಅಧ್ಯಕ್ಷ ಬಸವರಾಜ ಕಾಗಿನೆಲ್ಲಿ, ಕಾರ್ಯದರ್ಶಿ ವೀರಯ್ಯ ಪ್ರಸಾದಿಮಠ, ನಿರ್ದೇಶಕ ಸೋಮಶೇಖರ ತಿಪ್ಪಿಗುಂಡಿ, ಬಿಂದಪ್ಪ ಅರ್ಕಸಾಲಿ, ಕುಮಾರ ಚಿಗರಿ ಸೇರಿದಂತೆ ಗುತ್ತಲ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಪಾಲಕರು ಸೇರಿದ್ದರು. ವಿರೇಶ ಗಡ್ಡದೇವರಮಠ ಪ್ರಾಸ್ತಾವಿಕ ಮಾತನಾಡಿದರು. ಮಾರುತಿ ಕೋಡಬಾಳ ಸ್ವಾಗತಿಸಿದರು, ಆರ್‌.ಐ. ಮಿಶ್ರಿಕೋಟಿ ಹಾಗೂ ಸುನೀತಾ ಕಳಸಣ್ಣನವರ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next