Advertisement

ಗ್ರಾಮ ವಾಸ್ತವ್ಯದಿಂದ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

05:20 PM Feb 21, 2021 | Team Udayavani |

ರಾಣಿಬೆನ್ನೂರ: ವೃದ್ಧರು, ವಿಧವೆಯರು, ಅಂಗವಿಕಲರು, ಬಡ ರೈತರು, ದೀನ ದಲಿತರು ಸಮಸ್ಯೆಗಳನ್ನು ಹೊತ್ತುಸರ್ಕಾರದ ವಿವಿಧ ಕಚೇರಿಗಳಿಗೆ ಅಲೆಯಬಾರದು ಎಂಬಸದುದ್ದೇಶದಿಂದ ಅವರ ಸಮಸ್ಯೆಗಳನ್ನು ಸ್ಥಳ ದಲ್ಲಿಯೇಬಗೆಹರಿಸುವ ಸರ್ಕಾರ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮದಡಿ ಇತ್ಯರ್ಥಪಡಿಸಲಾಗುವುದು.

Advertisement

ಸಾರ್ವಜನಿಕರು ಇದರ ಉಪಯೋಗ ಪಡೆದು ಕೊಳ್ಳ  ಬೇಕೆಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. ತಾಲೂಕಿನ ಖಂಡೇರಾಯನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲೂಕು ಆಡಳಿತಹಾಗೂ 32 ಇಲಾಖೆಗಳ ಎಲ್ಲ ಅಧಿ ಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈ ತಳಹದಿಯಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಸಾಧರಪಡಿಸಿದ್ದರು. ಆದರೆ ಅವರು ಪಕ್ಷದ ಮುಖಂಡರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಇದರಿಂದ ಅನೇಕರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರಲಿಲ್ಲ. ನಮ್ಮ ಬಿಜೆಪಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟು ಸರ್ಕಾರದ ಶಾಲಾ ಆವರಣದಲ್ಲಿ ನಡೆಸುತ್ತಿರುವುದರಿಂದ ಸರ್ವ ಜನಾಂಗದವರು ಪಕ್ಷಭೇದ ಮರೆತು ಭಾಗ ವಹಿಸುವಂತಾಗಿದೆ ಎಂದರು.

ಆಧಾರಕಾರ್ಡ ತಿದ್ದುಪಡಿ, ಪಡಿತರಚೀಟ ತಿದ್ದುಪಡಿ ಸರಿಪಡಿಸಿ, ವೃದ್ಧರ, ವಿಧವೆಯರ, ಅಂಗವಿಕಲರ ಮಾಸಾಶನಗಳನ್ನು ಸ್ಥಳದಲ್ಲಿಯೇ ಮಂಜೂರಾತಿ ನೀಡಲಾಗುವುದು. ಸಿಎಂ ಯಡಿಯೂರಪ್ಪನವರು ಪ್ರತಿ ತಿಂಗಳು 3ನೇ ಶನಿವಾರ ಪ್ರತಿ ತಾಲೂಕಿನ ಒಂದು ಹಳ್ಳಿ ಯಲ್ಲಿ ಜಿಲ್ಲಾಧಿಕಾರಿ ಗಳು ವಾಸ್ತವ್ಯ ಮಾಡುವ ಮೂಲಕ ಸಾರ್ವಜನಿಕರಿಗೆಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದಾರೆ. ಅವರ ಆಶಯದ ಮೂಲಕ ಇಂದು ಖಂಡೇರಾಯ ನಹಳ್ಳಿಯಲ್ಲಿ ವಾಸ್ತವ್ಯ ಮಾಡಿ ಬಗೆಹರಿಸಲಾಗುವುದು

ಎಂದರು. ತಹಶೀಲ್ದಾರ್‌ ಶಂಕರ ಜಿ.ಎಸ್‌., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿಪಂ ಸದಸ್ಯೆಮಂಗಳಗೌರಿ ಪೂಜಾರ, ಐರಣಿ, ಕರೂರ, ನದಿಹರಳಳ್ಳಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತುಪಿಡಿಒಗಳು 18 ಇಲಾಖೆ ಅಧಿ ಕಾರಿಗಳಿದ್ದರು. ನಂತರಸಾರ್ವಜನಿಕರಿಂದ ಬಂದ ಅವ್ಹಾಲಗಳನ್ನು ಸಂಬಂಧಿಸಿದ ಅಧಿಕಾರಿಗಳು ಸ್ವೀಕರಿಸಿದರು. ತದನಂತರ ಶಾಸಕರು ಪರಿಹಾರ ನೀಡಲು ತಾಲೂಕು ದಂಡಾಧಿಕಾರಿ ಶಂಕರ ಜಿ.ಎಸ್‌. ಅವರಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next