Advertisement
ಶನಿವಾರ ತಾಲೂಕಿನ ಹಿರೇಮಲ್ಲಾಪೂರ ಗ್ರಾಮದ ಶಾಲಾ ಆವರಣದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಸಾಕಾರಗೊಳ್ಳಲು ಅಧಿಕಾರಿಗಳ, ಜನಪ್ರತಿನಿಧಿಗಳ ಕಾಳಜಿ ಜತೆಗೆ ಜನರ ಸಹಕಾರ-ಸಹಯೋಗವೂ ಮುಖ್ಯವಾಗಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಹಳಷ್ಟು ಬೇಡಿಕೆಗಳಲ್ಲಿ ರಸ್ತೆ ಅಭಿವೃದ್ಧಿ, ಕಟ್ಟಡ ನಿರ್ಮಾಣ ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ್ದೇ ಆಗಿರುತ್ತವೆ. ಇದಕ್ಕೆ ಆರ್ಥಿಕ ಸಂಪನ್ಮೂಲದ ಅಗತ್ಯವಿರುವುದರಿಂದ ಜಿಪಂ, ತಾಪಂ, ಗ್ರಾಪಂ ಪಾತ್ರ ಮುಖ್ಯವಾಗಿರುತ್ತದೆ. ಕಂದಾಯ ಇಲಾಖೆಯ ವಿಷಯಗಳಿಗೆ ಸಂಬಂಧಿಸಿದಂತೆ ಪಿಂಚಣಿ, ಆಧಾರ್ ತಿದ್ದುಪಡಿ, ಭೂ ದಾಖಲೆಗಳ ತಿದ್ದುಪಡಿ, ಪಡಿತರ ಚೀಟಿ ಹಾಗೂ ಜಮೀನು ಖರೀದಿ ಕುರಿತು ಸಮಸ್ಯೆಗಳಿದ್ದರೆ ಇತ್ಯರ್ಥಪಡಿಸಲಾಗುವುದು. ಇಂದು ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನು ಖುದ್ದಾಗಿ ಪರಿಶೀಲಿಸಿ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗಿದೆ. ಬಾಕಿ ಉಳಿದ ಕೆಲವೇ ಅರ್ಜಿಗಳನ್ನು ಶೀಘ್ರವೇ ಪರಿಹರಿಸುವುದಾಗಿ ಹೇಳಿದರು.
Related Articles
Advertisement
ಸಭೆಯಲ್ಲಿ ಉಪತಹಶೀಲ್ದಾರ್ ಗಳಾದ ಮಂಜುನಾಥ ದಾಸಪ್ಪನವರ, ಪ್ರಶಾಂತ ಕಿಮಾಯಿ, ಕಂದಾಯ ಅಧಿಕಾರಿ ಬಿ.ಎಂ.ಕಾತ್ರಾಳ, ಪಿಡಿಒ ಸಂತೋಷ ಮೇಟಿ, ಎಚ್.ಬಿ.ಕುರುಬರ, ಸತೀಶ ಪಾಟೀಲ, ಹೊಳಲಪ್ಪ ತಳವಾರ, ಈಶ್ವರ ಮಡ್ಲೇರಿ, ಎಂ.ಜಿ.ಚೋಟಗಲ್, ಶಿವಪುತ್ರಪ್ಪ ಬಟಗುರ್ಕಿ, ಶಾಂತವ್ವ ಬಟಗುರ್ಕಿ, ದಾಕ್ಷಾಯಣಿ ಅತ್ತಿಗೇರಿ, ನೀಲವ್ವ ಸೀತಾರಳ್ಳಿ, ಮುಂತಾದವರಿದ್ದರು. ಎಸ್.ಜಿ.ಹಾಲೇವಾಡಿಮಠ, ಆರ್.ಎಂ.ಕಮ್ಮಾರ ನಿರೂಪಿಸಿದರು.