ಬನಹಟ್ಟಿ: ಚಿಮ್ಮಡ ಗ್ರಾಮದ ಕೆರೆ ಅತಿಕ್ರಮಣವಾಗಿದೆ. ಕೆರೆ ಸರ್ವೇ ಕಾರ್ಯ ಅಧಿಕಾರಿಗಳು ಶೀಘ್ರ ಕೈಗೊಳ್ಳಬೇಕು. ಕೆರೆ ಅಂಗಳದಲ್ಲಿ ಯಾರಾದರೂ ಮನೆ ಕಟ್ಟಿಕೊಂಡಿದ್ದರೆ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದರು.
ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಶನಿವಾರ “ಕಂದಾಯ ಅಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ವಾಸ್ತವ್ಯದಲ್ಲಿ ಕಂದಾಯ ಇಲಾಖೆ ಮತ್ತು ಸರ್ವೇ ಕಾರ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು. ಸಮಸ್ಯೆಗಳಿದ್ದರೆ ಅಂಥ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಆದೇಶಿಸಲಾಗುವುದು. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆ ಕುರಿತು ಅರ್ಜಿ ನೀಡಿದರೆ ಅನುಕೂಲವಾಗುವುದು. ಈ ಯೋಜನೆ ಲಾಭ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಗುರುಲಿಂಗಪ್ಪ ಪೂಜಾರಿ ಮಾತನಾಡಿ, ಕಂದಾಯ ಇಲಾಖೆ ಸೇರಿದಂತೆ ಇತರ ಅಧಿಕಾರಿಗಳು ಗ್ರಾಮದ ಸಮಸ್ಯೆಗಳಿಗೆ ಪರಿಹಾರ ನೀಡಲು ಗ್ರಾಮಕ್ಕೆ ಆಗಮಿಸಿದ್ದಾರೆ.=ಈ ಕಾರ್ಯಕ್ರಮದ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ತಾಪಂ ಇಒ ಸಂಜೀವ ಹಿಪ್ಪರಗಿ ಮಾತನಾಡಿದರು. ಗ್ರೇಡ್-2 ತಹಶೀಲ್ದಾರ್ ಎಸ್.ಬಿ. ಕಾಂಬಳೆ ಕಾರ್ಯಕ್ರಮ ನಡೆಸಿದರು. ಈ ವೇಳೆ ಉಪಾಧ್ಯಕ್ಷೆ ರೇಣುಕಾ ಮಾಯನ್ನವರ, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಾದ ಸುರೇಶ ನೀಲನೂರ, ಬಸವರಾಜ ತಾಳಿಕೋಟಿ, ಎಸ್.ಟಿ. ಸಣ್ಣಕ್ಕಿ, ರವಿ ಹುಕ್ಕೇರಿ, ಶ್ರೀಶೈಲ ಬುರ್ಲಿ, ಟಿ.ಎಚ್. ಉಪ್ಪಾರ, ಐ.ಎನ್. ಚವಾಜ, ಎಸ್.ಬಿ. ಬಿರಾದಾರ, ಲಕ್ಷ್ಮೀ ಬಾಯಿ ಕುಂಬಾರ, ನಾಗಪ್ಪ ಸಿದ್ದಲಿಂಗಪ್ಪನವರ, ಎಸ್.ಪಿ.ಪೂಜಾರಿ, ಬಿ.ಎಸ್. ಜಿಗಳೂರ ಇತರರಿದ್ದರು.