Advertisement

ಅಗ್ರಿಗೋಲ್ಡ್‌ ಪರಿಹಾರ ಹಣಕ್ಕಾಗಿ ಗ್ರಾಮಸ್ಥರ ಧರಣಿ

07:20 AM Feb 03, 2019 | |

ಹಾಸನ: ಅಗ್ರಿಗೋಲ್ಡ್‌ ಸಂಸ್ಥೆಯಿಂದ ವಂಚನೆಗೊಳ ಗಾದ ಗ್ರಾಹಕರಿಗೆ ಮತ್ತು ಏಜೆಂಟರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಅಗ್ರಿಗೋಲ್ಡ್‌ ಕಸ್ಟಮರ್ ಮತ್ತು ಏಜೆಂಟ್ಸ್‌ ವೆಲ್‌ಫೇರ್‌ ಅಸೋಸಿಯೇಶನ್‌ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೂಡಿಕೆದಾರರು ಪ್ರತಿಭಟನೆ ನಡೆಸಿದರು.

Advertisement

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಲ್ಲಾ ಧಿಕಾರಿ ಕಚೇರಿ ಆವರಣಕ್ಕೆ ಬಂದು ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಅಗ್ರಿಗೋಲ್ಡ್‌ ಸಂಸ್ಥೆಯು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಸುತ್ತೇವೆಂದು, ನೂರಾರು ವ್ಯಾಪಾರಗಳನ್ನು ಮಾಡುತ್ತೇವೆಂದು ಹೇಳಿ ಈಗ ದಿವಾಳಿಯಾಗಿರು ವುದಾಗಿ ಘೋಷಿಸಲ್ಪಟ್ಟಿದೆ.

ಒಟ್ಟು ಎಂಟು ರಾಜ್ಯ ಗಳಲ್ಲಿನ ಲಕ್ಷಾಂತರ ಕುಟುಂಬಗಳ ಆರ್ಥಿಕ ಅಭಿ ವೃದ್ಧಿಗೆ ಮುಂದಾಗಿರುವುದಾಗಿ ಜನಸಾಮಾನ್ಯರಲ್ಲಿ ನಂಬಿಕೆ ಹುಟ್ಟಿಸಿ ಹೂಡಿಕೆಯನ್ನು ಆಕರ್ಷಿಸಿತ್ತು. ಅಗ್ರಿಗೋಲ್ಡ್‌ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲೇ ಸುಮಾರು 8.50 ಲಕ್ಷದಷ್ಟು ಗ್ರಾಹಕರನ್ನು ಪಡೆದು ಸುಮಾರು 2500 ಕೋಟಿ ಹಣವನ್ನು ಠೇವಣಿಯಾಗಿ ಸಂಗ್ರಹಿಸಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ದೇಶದ ಎಂಟು ರಾಜ್ಯಗಳಲ್ಲಿ ವ್ಯವಹಾರ ಹೊಂದಿದ್ದ ಈ ಅಗ್ರಿಗೋಲ್ಡ್‌ ಸಂಸ್ಥೆಯಿಂದ ವಂಚನೆ ಗೊಳಗಾದವರು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸ್ಥೆಯು ಒಟ್ಟು 35ಲಕ್ಷ ಖಾತೆ ಗಳನ್ನು ಹೊಂದಿದ್ದು, ಸುಮಾರು 7623 ಕೋಟಿ ಹಣ ಪಾವತಿಸಬೇಕಾಗಿದೆ. ಆದರೆ ಸಂಸ್ಥೆ ದಿವಾಳಿ ಯಾಗಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಗ್ರಾಹಕರು ಮತ್ತು ಏಜೆಂಟರು ಹಣ ಕಳೆದುಕೊಂಡು 105 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಜ್ಯ ಸರ್ಕಾರ ಅಗ್ರಿಗೋಲ್ಡ್‌ಗೆ ಸೇರಿದ ಸ್ಥಿರಾಸ್ತಿಯನ್ನು ವಶಪಡಿಸಿ ಕೊಂಡಿದೆ. ಈ ಆಸ್ತಿಯ ಬೆಲೆ 500 ಕೋಟಿ ಯಾಗಿದ್ದು, ಕರ್ನಾಟಕದ ಗ್ರಾಹಕರಿಗೆ ಸುಮಾರು 2500 ಕೋಟಿ ರೂ. ಸಂಸ್ಥೆಯಿಂದ ಸಿಗಬೇಕಾಗಿದೆ. ಆದರೆ ಆಂಧ್ರಪ್ರದೇಶದಲ್ಲಿ ಈ ಸಂಸ್ಥೆಯ ಆಸ್ತಿಗಳನ್ನು ಅಲ್ಲಿನ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ಅವುಗಳ ಮೌಲ್ಯ ಲಕ್ಷ ಕೋಟಿಯಲ್ಲಿದೆ. ಈ ಆಸ್ತಿ ಗಳನ್ನು ಸಹ ಅಲ್ಲಿನ ಸರಕಾರ ಮಾರಾಟ ಮಾಡ ಬೇಕು. ಆದ್ದರಿಂದ ಬಂದ ಹಣವನ್ನು ಕರ್ನಾಟಕದಲ್ಲಿ ವಂಚನೆಗೊಳಗಾಗಿರುವ ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಅಗ್ರಿಗೋಲ್ಡ್‌ ಸಂಸ್ಥೆಯಿಂದ ವಂಚನೆಗೀಡಾಗಿ ರುವ ಗ್ರಾಹಕರಿಗೆ ಹಾಗೂ ಏಜೆಂಟರಿಗೆ ಆಂಧ್ರ ಪ್ರದೇಶದಲ್ಲಿ ಸಿಕ್ಕ ರೀತಿಯಲ್ಲಿಯೇ ಕರ್ನಾಟದಲ್ಲೂ ಪರಿಹಾರ ಸಿಗಬೇಕು ಎಂದೂ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

ಅಗ್ರಿಗೋಲ್ಡ್‌ ಕಸ್ಟಮರ್ ಮತ್ತು ಏಜೆಂಟ್ಸ್‌ ವೆಲ್‌ಫೇರ್‌ ಅಸೋಸಿಯೇಶನ್‌ ಜಿಲ್ಲಾ ಸಮಿತಿ ಗೌರವಾ ಧ್ಯಕ್ಷ ಎಂ.ಸಿ. ಡೋಂಗ್ರೆ, ಅಧ್ಯಕ್ಷ ಯೋಗೀಶ್‌, ಉಪಾಧ್ಯಕ್ಷ ಬಿ.ಎನ್‌. ಶಿವಪ್ಪ, ಪ್ರಧಾನ ಕಾರ್ಯದಶಿ ಸುದರ್ಶನ್‌, ಸಹ ಕಾರ್ಯದರ್ಶಿ ಎಂ.ಸಿ. ಮಂಜೇಗೌಡ, ಖಜಾಂಚಿ ಗಣೇಶ್‌, ಮಹಿಳಾ ಅಧ್ಯಕ್ಷೆ ಶಕುಂತಲಾ, ಕಾರ್ಯದರ್ಶಿ ಜೆ.ಕೆ. ಸುಜಾತ ಹಾಗೂ ಸದಸ್ಯರಾದ ಮೋಹನ್‌ ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next