Advertisement

ಸರ್ಕಾರಿ ಗೋಮಾಳದಲ್ಲಿ ಮನೆ, ರಸ್ತೆ ನಿರ್ಮಾಣ ಖಂಡಿಸಿ ಗ್ರಾಮಸ್ಥರಿಂದ ತಹಶೀಲ್ದಾರ್‌ಗೆ ಮನವಿ

02:12 PM Jun 25, 2022 | Team Udayavani |

ಕುಣಿಗಲ್ : ಬಲಾಡ್ಯರು ಅಕ್ರಮವಾಗಿ ಸರ್ಕಾರಿ ಗೋಮಾಳ ಜಾಗದಲ್ಲಿ ಮನೆ, ನಿವೇಶನ ಹಾಗೂ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ತಡೆದು ತಪ್ಪಿಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಕೆಂಬಾರೆಪಾಳ್ಯ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಕಸಬಾ ಹೋಬಳಿ ಕಿತ್ನಾಮಂಗಲ ಪಂಚಾಯ್ತಿ ವ್ಯಾಪ್ತಿಯ ಕೆಂಬಾರೆಪಾಳ್ಯ ಗ್ರಾಮ ಸರ್ವೆ ನಂ 44 ಸರ್ಕಾರಿ ಗೋಮಾಳ ಜಾಗದಲ್ಲಿ ಕೆಲ  ಬಲಾಡ್ಯ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ ಮನೆ, ನಿವೇಶನ ಹಾಗೂ ರಸ್ತೆ ನಿರ್ಮಾಣ ಮಾಡುತ್ತಿರುವುದು ಕಾನೂನಿಗೆ ವಿರುದ್ದವಾಗಿದೆ ಕೂಡಲೇ ಇದನ್ನು ತಡೆದು ಸರ್ಕಾರದ ಜಮೀನನ್ನು ಉಳಿಸುವಂತೆ ಗ್ರಾಮದ ಮುಖಂಡರಾದ ಬೋರೇಗೌಡ, ರವಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಇಲ್ಲಿನ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಹಬಲೇಶ್ವರ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಮುಖಂಡ ಬೋರೇಗೌಡ ಮಾತನಾಡಿ ಕಸಬಾ ಹೋಬಳಿ ಕೆಂಬಾರೆಪಾಳ್ಯ ಗ್ರಾಮದ ಸರ್ವೆ ನಂ 44 ರಲ್ಲಿ 1 ಎಕರೆ 50 ಗುಂಟೆ ಸರ್ಕಾರಿ ಗೋಮಾಳ ವಿದ್ದು, ಇದನ್ನು ಕೆಲ ಬಲಾಡ್ಯರು ಹಣದ ಆಸೆಗಾಗಿ ನಿವೇಶನ, ಮನೆ, ರಸ್ತೆ ನಿರ್ಮಾಣ ಮಾಡಿಕೊಂಡು ಲಪಟಾಯಿಸಲು ಯತ್ನಿಸುತ್ತಿದ್ದಾರೆ, ಈ ಸಂಬಂಧ ಈಗಾಗಲೇ ತಾಲೂಕು ಸರ್ವೆಯರ್ ಸ್ಥಳ ಪರಿಶೀಲನೆ ಮಾಡಿ ಈ ಜಾಗ ಪಹಣಿಯಲ್ಲಿ ಸರ್ಕಾರಿ ಗೋಮಾಳ ಎಂದು ದಾಖಲಾಗಿರುತ್ತದೆ, ಈ ಜಾಗದಲ್ಲಿ ಯಾವುದೇ ಮನೆ ಹಾಗೂ ನಿವೇಶನ, ರಸ್ತೆ ನಿರ್ಮಾಣ ಮಾಡಬಾರದೆಂದು ವರದಿ ಸಲ್ಲಿಸಿದರು, ಇದನ್ನು ಲೆಕ್ಕಿಸದೇ ಬಲಾಡ್ಯ ವ್ಯಕ್ತಿಗಳು ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ದಿನವನ್ನು ನೋಡಿಕೊಂಡು ಇಂದು ಕಾಮಗಾರಿ ಪ್ರಾರಂಭಿಸಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಹಾಗಾಗಿ ಸೂಕ್ತ ಕಾನೂನು ಕ್ರಮಕೈಗೊಂಡು ಸರ್ಕಾರಿ ಜಾಗವನ್ನು ಉಳಿಸುವಂತೆ ಅವರು ಒತ್ತಾಯಿಸಿದರು,

ಸ್ಪಂದನೆ : ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಹಬಲೇಶ್ವರ ಈ ಸಂಬಂಧ ತಕ್ಷಣ ಸ್ಥಳ ಪರಿಶೀಲನೆ ನೆಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ರಾಜಸ್ವ ನಿರೀಕ್ಷಕರಿಗೆ ದೂರವಾಣಿ ಮೂಲಕ ಸೂಚಿಸುವು ಮೂಲಕ ಗ್ರಾಮಸ್ಥರ ಮನವಿಗೆ ಸಕರಾತ್ಮಕವಾಗಿ ಸ್ಪಂಧಿಸಿದರು.ಈ ವೇಳೆಯಲ್ಲಿ ಗ್ರಾಮಸ್ಥರಾದ ಪುಟ್ಟರಾಜು, ಬೋರಯ್ಯ, ನಿಂಗಯ್ಯ,  ಶರತ್, ಶಿವಕುಮಾರ್, ಕುಮಾರ್ ಇದ್ದರು,

Advertisement

Udayavani is now on Telegram. Click here to join our channel and stay updated with the latest news.

Next